24.4 C
ಪುತ್ತೂರು, ಬೆಳ್ತಂಗಡಿ
May 19, 2025
ಚಿತ್ರ ವರದಿ

ಸಂತ ಸೆಬಾಸ್ಟಿಯನ್ ರವರ ದೇವಾಲಯ ಕಳಂಜ ಇಲ್ಲಿ ಜುಲೈ 28 ರಂದು ಕಾರ್ಗಿಲ್ ವಿಜಯ ದಿವಸ್ ಆಚರಣೆ

ಬೆಳ್ತಂಗಡಿ: ಸಂತ ಸೆಬಾಸ್ಟಿಯನ್ ರವರ ದೇವಾಲಯ ಕಳಂಜ ಇಲ್ಲಿ ಜುಲೈ 28 ರಂದು ಕಾರ್ಗಿಲ್ ವಿಜಯ ದಿವಸ ಆಚರಿಸಲಾಯಿತು.
ಅಂದು ಕಾರ್ಗಿಲ್ನಲ್ಲಿ ನಡೆದ ಯುದ್ಧದಲ್ಲಿ ಹುತಾತ್ಮರಾದ 527 ಸೈನಿಕರು ಹಾಗೂ 1300 ಗಾಯಾಳುಗಳಾದ ಸೈನಿಕರಿಗೋಸ್ಕರ ವಿಶೇಷ ಪ್ರಾರ್ಥನೆ ನೆರವೇರಿತು. 25 ನೆಯ ವಿಜಯೋತ್ಸವದ ಸಂಭ್ರಮ ಸೂಚಕವಾಗಿ ಧಾರ್ಮಿಕ ಕೇಂದ್ರದಿಂದ ಭಾರತ ದೇಶದ ಸೈನಿಕ ಸೇವೆಯಿಂದ ನಿವೃತ್ತರಾದ ಥೋಮಸ್ ಪುತಿಯುಕುಲಂಗರ, ಮ್ಯಾಥ್ಯೂ ಉರಿಯಲ್ಪಡಿಕ್ಕಲ್ , ವಿನೋಯ್ ಚೆಮ್ಮಟ್ಟಕುಯಿ ಇವರುಗಳಿಗೆ ಗೌರವ ಸನ್ಮಾನವನ್ನು ನೀಡಲಾಯಿತು.
ಹಾಗೂ ಪ್ರಸ್ತುತ ಸೇವೆಯಲ್ಲಿ ನಿರತರಾಗಿರುವ ಥೋಮಸ್ ಪೀಡಿಗೆಯಿಲ್, ಜೋಮೊನ್ ಪುವತಿಂಗಲ್ ಇವರನ್ನು ಗೌರವಿಸುವ ಸಲುವಾಗಿ ಇವರ ತಂದೆಯವರಾದ ಫಿಲಿಪ್ ಪಿಡಿಗೇಲ್, ಬೇಬಿಚ್ಚನ್ ಪೂವತಿಂಗಲ್ ಇವರನ್ನು ಸನ್ಮಾನಿಸಲಾಯಿತು. ಧರ್ಮ ಕೇಂದ್ರದ ಧರ್ಮ ಗುರುಗಳಾದ ವಂದನೀಯ ಫಾದರ್ ಜೋಸೆಫ್ ವಾಳೂಕಾರನ್, ಧರ್ಮ ಕೇಂದ್ರದ ಟ್ರಸ್ಟಿಗಳಾದ ಜೋಳಿ ತಟ್ಟಾಂಪರಂಬಿಲ್, ಸೆಬಾಸ್ಟಿಯನ್ ವಳರ್ಕೊಟ್, ಜೋಸೆಫ್ ಪೀಡಿಗಯಿಲ್, ಸಂತೋಷ್ ಪೂವತಿಂಗಲ್ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು. ಬ್ರದರ್ ಅರುಣ್ ಅಯ್ಯನಿಕಟ್ಟ್ ಅವರು, ಕಾರ್ಗಿಲ್ ಯುದ್ಧದ ಸಂಕ್ಷಿಪ್ತ ವಿವರಣೆಯನ್ನು ನೀಡಿದರು. ವಿನೋಯ್ ಚೆಮ್ಮಟ್ಟಕುಯಿ ಕಾರ್ಗಿಲ್ ಅನುಭವವನ್ನು ವಿವರಿಸಿದರು.
ಧರ್ಮ ಕೇಂದ್ರದ ನಾಲ್ಕು ತಲೆಮಾರುಗಳ ತಂದೆ ತಾಯಿಯವರಾಗಿರುವ ಗ್ರೇಟ್ ಗ್ರಾಂಡ್ ಪ್ಯಾರೆಂಟ್ಸ್ ವಲಿಯಪರಂಬಿಲ್ ಥೋಮಸ್ ತ್ರೇಸಿಯಮ್ಮ ಮತ್ತು ಚಮ್ಮಟ್ಟಕುಯಿ ವರ್ಗೀಸ್ ಕ್ಲಾರ ಅವರನ್ನು ಗ್ರಾಂಡ್ ಪ್ಯಾರೆಂಟ್ಸ್ ದಿನದಂದು ಹೋಗುಚ್ಚ ನೀಡಿ ಅಭಿನಂದಿಸಲಾಯಿತು.
ಸಂತ ಅಲ್ಫೋನ್ಸಾರವರ ಸ್ಮರಣೆಯ ಭಾಗವಾಗಿ ಅಲ್ಫೋನ್ಸಾ ಹೆಸರನ್ನು ಹೊಂದಿರುವ ನಾಮದಾರಿಗಳಿಗೆ ಧರ್ಮ ಕೇಂದ್ರದ ವತಿಯಿಂದ ಹೋಗುಚ್ಚ ನೀಡಿ ಶುಭಾಶಯಗಳನ್ನು ಕೋರಲಾಯಿತು.

Related posts

ಪಡ್ಡಂದಡ್ಕ ನಿವೃತ್ತ ಮುಖ್ಯೋಪಾಧ್ಯಾಯ ತಿರುಮಲೇಶ್ವರ ಭಟ್ಟರಿಗೆ ‘ಹವ್ಯಕ ಶಿಕ್ಷಕ ರತ್ನ’ ಪ್ರಶಸ್ತಿ

Suddi Udaya

ನಿಡ್ಲೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಶ್ರಮದಾನ

Suddi Udaya

ಕು. ಸೌಜನ್ಯಳ ಕೊಲೆ ಪ್ರಕರಣ: ಆರೋಪಿಗಳ ಪತ್ತೆಗಾಗಿ ಪುದುವೆಟ್ಟು ವಿ. ಹಿಂ. ಪ. ಭಜರಂಗದಳ ವತಿಯಿಂದ ಶ್ರೀ ವನದುರ್ಗ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ

Suddi Udaya

ಡಾ. ವೈ .ಉಮಾನಾಥ ಶೆಣೈ ಯವರಿಗೆ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ       

Suddi Udaya

ಉಜಿರೆ: ಶ್ರೀ ಧ.ಮಂ. ಆಂ.ಮಾ. (ರಾಜ್ಯ ಪಠ್ಯಕ್ರಮ) ಶಾಲೆಯಲ್ಲಿ ಪೋಷಕರ ಜಾಗೃತಿ ಕಾರ್ಯಕ್ರಮ

Suddi Udaya

ತೆಂಕಕಾರಂದೂರು: ಖಂಡಿಗ ಶ್ರೀ ಸಂತಾನ ಗೋಪಾಲ ಕೃಷ್ಣ ದೇವಸ್ಥಾನದ ಆವರಣ ತಡೆಗೋಡೆ ಕುಸಿತ

Suddi Udaya
error: Content is protected !!