ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ಆಚರಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಡಂತ್ಯಾರ್ ಸೇಕ್ರಡ್ ಹಾರ್ಟ್ ಕಾಲೇಜಿನ ನಿವೃತ ಪ್ರೊಫೆಸರ್ ತ್ರಿಷಾಲ ಜೈನ್ ನೇರವೇರಿಸಿ ಶುಭ ಕೋರಿದರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಸವಿತಾ ಜಯದೇವ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಿಯಾ ಆಗ್ನೇಸ್ ಭಾಗವಹಿಸಿದ್ದರು.
ಆಟಿಕೂಟದಲ್ಲಿ ಒಕ್ಕೂಟದ ಸದಸ್ಯರು ಸುಮಾರು 65 ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಿ ತಂದಿದ್ದರು.
ಉಪಾಧ್ಯಕ್ಷೆ ಉಮಾ ಆರ್ ರಾವ್ ಸ್ವಾಗತಿಸಿದರು, ಗೌರವ ಅಧ್ಯಕ್ಷೆ ಶಾಂತಾ ಬಂಗೇರ ನಿರೂಪಿಸಿದರು, ಕಾರ್ಯದರ್ಶಿ ಆಶಾ ಸತೀಶ್ ವಂದಿಸಿದರು.ಜೊತೆ ಕಾರ್ಯದರ್ಶಿ ವಿನೋದಿನಿ ರಾಮಪ್ಪ ಖಾದ್ಯಗಳ ಪಟ್ಟಿ ಸಭೆಗೆ ತಿಳಿಸಿದರು. ಸದಸ್ಯೆ ವರದಾ ಬಾಯಿ ಪ್ರಾರ್ಥನೆ ಹಾಡಿದರು.











