April 2, 2025
ಸಮಸ್ಯೆ

ಗುರುವಾಯನ ಕೆರೆ ಮಳೆಯ ಆರ್ಭಟ ಚರಂಡಿ ಮುಚ್ಚಿದ ಪರಿಣಾಮ ರಸ್ತೆಯಲ್ಲಿ ಹರಿದ ನೀರು ವಾಹನ ಸವಾರರ ಪರದಾಟ

ಗುರುವಾಯನಕೆರೆ: ಮಳೆರಾಯನ ಆರ್ಭಟಕ್ಕೆ ರಾಷ್ಟ್ರೀಯ ಹೆದ್ದಾರಿ ಮೋರಿ ಸಂಪೂರ್ಣ ಮುಚ್ಚಿದ ಪರಿಣಾಮ ಗುರುವಾಯನಕೆರೆಯ ಮಳೆಯ ನೀರು ರಸ್ತೆಯಲ್ಲಿ ಹರಿದು ಬಂಟರ ಭವನ‌ದ ಹತ್ತಿರ ನೀರು ನಿಂತು ನದಿಯಂತಾಗಿದೆ. ಜೈನ್ ಪೇಟೆಯ ಕೆಲವು ಮನೆಗಳು ಜಲಾವೃತಗೊಂಡಿದೆ ಹಾಗೂ ಮಸೀದಿ ಬಳಿ ಕುಸಿತವಾದ ಘಟನೆ ಸಂಭವಿಸಿದೆ.

ಇಂದು ಸಂಜೆ ಸುರಿದ ಭಾರಿ ಮಳೆಗೆ ಗುರುವಾಯನಕೆರೆ ಪೇಟೆಯ ಎಲ್ಲಾ ನೀರು ಬಂಟರ ಭವನದ ಹತ್ತಿರ ರಸ್ತೆಯಲ್ಲಿ ಶೇಖರಣೆಯಾಗಿ ನದಿಯಂತಾಗಿದೆ. ಪರಿಣಾಮ‌ ವಾಹನ ಸವಾರರು ಹೋಗಲಾಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಅತ್ತ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದ ಈ ಸಮಸ್ಯೆ ಎದುರಾಗಿದೆ ಎಂದು ವಾಹನ ಸವಾರರು ಹಿಡಿಶಾಪ ಹಾಕುತ್ತಲೇ ಕಷ್ಟದಿಂದ ಸಾಗುತ್ತಿದ್ದಾರೆ.

Related posts

ಬಂದಾರು: ತೀರ ಹದಗೆಟ್ಟ ರಸ್ತೆ; ದುರಸ್ತಿಗೊಳಿಸುವಂತೆ ಸ್ಥಳೀಯರ ಮನವಿ

Suddi Udaya

ಪೆರ್ಲ ಬೈಪಾಡಿ ಹಿ.ಪ್ರಾ. ಶಾಲೆಯ ಬಳಿ ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಗಾತ್ರದ ಮರ

Suddi Udaya

ಮುಂಡಾಜೆ ಕಾಯರ್ತೋಡಿ ರಾಧಾ ಹೆಬ್ಬಾರ್‌ರವರ ತೋಟಕ್ಕೆ ನುಗ್ಗಿದ ನೇತ್ರಾವತಿ ನದಿ ನೀರು: 25 ಅಡಿಕೆ ಮರ ಹಾಗೂ 10 ರಬ್ಬರ್ ಮರ ಧರಾಶಾಯಿ

Suddi Udaya

ನಿನ್ನೆ ಸುರಿದ ಅನಿರೀಕ್ಷಿತ ಮಳೆಯಿಂದಾಗಿ ಪ್ರವಾಹದ ಸ್ಥಿತಿ ಕಂಡುಬಂದ ಹಲವೆಡೆ ಹಾನಿಗೊಳಗದ ಪ್ರದೇಶಕ್ಕೆ ಶಾಸಕ ಹರೀಶ್ ಪೂಂಜಾ ಬೇಟಿ

Suddi Udaya

ಬಂಗಾಡಿ ಪರಿಸರದಲ್ಲಿ ವಿದ್ಯುತ್ ಸಮಸ್ಯೆ: ಬಗೆಹರಿಸದೆ ಇದ್ದಲ್ಲಿ ಕಛೇರಿಯ ಮುಂದೆ ಪ್ರತಿಭಟನೆ ಗ್ರಾಮಸ್ಥರ ಆಗ್ರಹ

Suddi Udaya

ಕುಸಿಯುವ ಹಂತದಲ್ಲಿರುವ ವೇಣೂರು ಸರಕಾರಿ ಪ್ರೌಢಶಾಲೆಗೆ ಶಾಸಕ ಹರೀಶ್ ಪೂಂಜ ಭೇಟಿ, ತಕ್ಷಣ ಸ್ಪಂದನೆ

Suddi Udaya
error: Content is protected !!