ಕೊಕ್ಕಡ: ಕೆಲ ದಿನಗಳಿಂದ ಸುರಿದ ವಿಪರೀತ ಜಡಿ ಮಳೆಗೆ ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ಹಿಂಬದಿ ಎಲ್ಯಣ್ಣ ಗೌಡರವರ ಹಳೆಯ 7 ಫೀಟ್ ಅಗಲದ ಕಲ್ಲು ಕಟ್ಟಿ ರಿಂಗ್ ಅಳವಡಿಸಿದ ಬಾವಿಯೊಂದು ಕುಸಿದ ಘಟನೆ ಜು.30ರಂದು ನಡೆದಿದೆ.

ಕುಸಿದ ಪರಿಣಾಮ ಪಂಪು ಬಾವಿಯೊಳಗೆ ಬಿದ್ದಿದ್ದು ಸುಮಾರು ರೂ.50 ಸಾವಿರದಷ್ಟು ನಷ್ಟ ಉಂಟಾಗಿದೆ.
ಘಟನಾ ಸ್ಥಳಕ್ಕೆ ಕೊಕ್ಕಡ ಪಂ.ಅಭಿವೃದ್ಧಿ ಅಧಿಕಾರಿ ದೀಪಕ್ ರಾಜ್, ಪಂಚಾಯತ್ ಸದಸ್ಯ ಪುರುಷೋತ್ತಮ ಭೇಟಿ ನೀಡಿ ಪರಿಶೀಲಿಸಿದರು.