31.8 C
ಪುತ್ತೂರು, ಬೆಳ್ತಂಗಡಿ
May 18, 2025
ಸಮಸ್ಯೆ

ಗುರುವಾಯನ ಕೆರೆ ಮಳೆಯ ಆರ್ಭಟ ಚರಂಡಿ ಮುಚ್ಚಿದ ಪರಿಣಾಮ ರಸ್ತೆಯಲ್ಲಿ ಹರಿದ ನೀರು ವಾಹನ ಸವಾರರ ಪರದಾಟ

ಗುರುವಾಯನಕೆರೆ: ಮಳೆರಾಯನ ಆರ್ಭಟಕ್ಕೆ ರಾಷ್ಟ್ರೀಯ ಹೆದ್ದಾರಿ ಮೋರಿ ಸಂಪೂರ್ಣ ಮುಚ್ಚಿದ ಪರಿಣಾಮ ಗುರುವಾಯನಕೆರೆಯ ಮಳೆಯ ನೀರು ರಸ್ತೆಯಲ್ಲಿ ಹರಿದು ಬಂಟರ ಭವನ‌ದ ಹತ್ತಿರ ನೀರು ನಿಂತು ನದಿಯಂತಾಗಿದೆ. ಜೈನ್ ಪೇಟೆಯ ಕೆಲವು ಮನೆಗಳು ಜಲಾವೃತಗೊಂಡಿದೆ ಹಾಗೂ ಮಸೀದಿ ಬಳಿ ಕುಸಿತವಾದ ಘಟನೆ ಸಂಭವಿಸಿದೆ.

ಇಂದು ಸಂಜೆ ಸುರಿದ ಭಾರಿ ಮಳೆಗೆ ಗುರುವಾಯನಕೆರೆ ಪೇಟೆಯ ಎಲ್ಲಾ ನೀರು ಬಂಟರ ಭವನದ ಹತ್ತಿರ ರಸ್ತೆಯಲ್ಲಿ ಶೇಖರಣೆಯಾಗಿ ನದಿಯಂತಾಗಿದೆ. ಪರಿಣಾಮ‌ ವಾಹನ ಸವಾರರು ಹೋಗಲಾಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಅತ್ತ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದ ಈ ಸಮಸ್ಯೆ ಎದುರಾಗಿದೆ ಎಂದು ವಾಹನ ಸವಾರರು ಹಿಡಿಶಾಪ ಹಾಕುತ್ತಲೇ ಕಷ್ಟದಿಂದ ಸಾಗುತ್ತಿದ್ದಾರೆ.

Related posts

ಗುರುವಾಯನಕೆರೆಯ ‘ಕೆರೆ’ ಗೆ ಲೋಕಾಯುಕ್ತ ನ್ಯಾಯಾಮೂರ್ತಿ ಭೇಟಿ, ಪರಿಶೀಲನೆ

Suddi Udaya

ಕಳೆಂಜ: ವಳಗುಡ್ಡೆಯಲ್ಲಿ ಕಾಡಾನೆ ದಾಳಿ: ಅಪಾರ ಕೃಷಿ ನಾಶ

Suddi Udaya

ಗುಡ್ಡೆ ಜರಿದು ಶೌಚಾಲಯ ಹಾಗೂ ಮನೆಯ ಮೇಲೆ ಬಿದ್ದು ಸಂಪೂರ್ಣಹಾನಿ

Suddi Udaya

ಮಳೆ ಹಾನಿಗೊಳಗಾದ ನೆರಿಯ, ಚಿಬಿದ್ರೆ ಗ್ರಾಮಗಳಿಗೆ ಶಾಸಕ ಹರೀಶ್ ಪೂಂಜ ಭೇಟಿ: ಪರಿಹಾರಕ್ಕಾಗಿ ಸರಕಾರಕ್ಕೆ ಒತ್ತಾಯಿಸುವ ಭರವಸೆ

Suddi Udaya

ಮುಂಡೂರು ಮತ್ತು ಮಚ್ಚಿನ ಗ್ರಾಮಗಳಲ್ಲಿ ಮಣ್ಣು ಕುಸಿದು ಹಾನಿ ಉಂಟಾದ ಮನೆಗಳಿಗೆ ಭೇಟಿ

Suddi Udaya

ಬಂದಾರು: ತೀರ ಹದಗೆಟ್ಟ ರಸ್ತೆ; ದುರಸ್ತಿಗೊಳಿಸುವಂತೆ ಸ್ಥಳೀಯರ ಮನವಿ

Suddi Udaya
error: Content is protected !!