ಬೆಳ್ತಂಗಡಿ : ಕಳಿಯ ಗ್ರಾಮ ಪಂಚಾಯತು ಪ್ರಥಮ ಸುತ್ತಿನ ಡಿಜಿಟಲ್ ಗ್ರಾಮ ಸಭೆ ಕಳಿಯ ಕೃಷಿ ಪತ್ತಿನ ಸಹಕಾರಿ ಸಭಾಭವನದಲ್ಲಿ ಆ.1 ರಂದು ಜರುಗಿತು.
ಕಳಿಯ ಗ್ರಾಮ ಪಂಚಾಯತು ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಟೀಲ್ ಕಳಿಯ ಗ್ರಾಮ ಪಂಚಾಯತು 2024-25 ರ ವಿವಿಧ ಯೋಜನೆಗಳ ಜಮಾ, ಖರ್ಚು ವಿವರ ಸಭೆ ಓದಿದರು.
2024 – 25 ರಲ್ಲಿ ಕಳಿಯ ಗ್ರಾಮ ಪಂಚಾಯತು ವ್ಯಾಪ್ತಿಯ ವಾರ್ಡ್ ಸಭೆಯಲ್ಲಿ ಕೈಗೊಳ್ಳುವ ವಿವಿಧ ಕಾಮಗಾರಿಗಳ ಬಗ್ಗೆ ವರದಿಯನ್ನು ಕಳಿಯ ಗ್ರಾಮ ಪಂಚಾಯತು ಕಾರ್ಯದರ್ಶಿ ಕುಂಇ್ಞ್ ಕೆ. ಇವರು ಸಭೆಯಲ್ಲಿ ಮಂಡಿಸಿದರು.
ಸಾಮಾಜಿಕ ಆರಣ್ಯಾಧಿಕಾರಿ ವಿದ್ಯಾ ಪಿ.ಡಿ.ಸಭೆಯ ನೋಡಲಾಧಿಕಾರಿಯಾಗಿದ್ದರು. ಕಳಿಯ ಗ್ರಾಮ ಪಂಚಾಯತು ಅಧ್ಯಕ್ಷ ದಿವಾಕರ ಎಮ್. ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷೆ ಇಂದಿರಾ ಬಿ.ಶೆಟ್ಟಿ,ಕಳಿಯ ಗ್ರಾಮ ಪಂಚಾಯತ್ ಸದಸ್ಯರಾದ ಸುಭಾಷಿಣಿ ಜನಾರ್ದನ ಗೌಡ, ಕುಸುಮ ಎನ್.ಬಂಗೇರ, ಸುಧಾಕರ ಮಜಲು ,ಅಬ್ದುಲ್ ಕರೀಂ ಕೆ.ಎಮ್. ವಿಜಯ ಕುಮಾರ್ ಕೆ, ಹರೀಶ್ ಕುಮಾರ್ ಬಿ,ಯಶೋಧರ ಶೆಟ್ಟಿ ಕೆ,.ಲತೀಫ್, ಮರೀಟಾ, ಪುಷ್ಪ ,ಮೋಹಿನಿ ಬಿ.ಗೌಡ,ಶ್ವೇತಾ ಶ್ರೀನಿವಾಸ್,ಶಕುಂತಲಾ ವಿವಿಧ ಇಲಾಖೆ ಅಧಿಕಾರಿಗಳಾದ ಅರಣ್ಯ.ಆರೋಗ್ಯ. ಕಂದಾಯ.ಕೃಷಿ. ಪೊಲೀಸ್.ಮಹಿಳಾ ಮತ್ತು ಮಕ್ಕಳ ಕಲ್ಯಾಣ. ಆರ್ಥಿಕಮತ್ತು ಸಾಕ್ಷರತಾ . ಪಶು ಸಂಗೋಪನ. ನರೇಗಾ. ಶಿಕ್ಷಣ.ಇಲಾಖೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಳಿಯ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಸಂತ ಮಜಲು,ಸಂಘದ ನಿರ್ದೇಶಕಕಾದ ಬಾಲಕೃಷ್ಣ ಗೌಡ ಬಿ,ಉದಿತ್ ಕುಮಾರ್ ಬಿ,ಕುಶಾಲಪ್ಪ ಗೌಡ ಕೆ,ಕೇಶವ ಪೂಜಾರಿ ಕೆ, ಕಳಿಯ ಗ್ರಾ. ಪಂ.ಮಾಜಿ ಅಧ್ಯಕ್ಷ ಸಂಜೀವ ಬಂಗೇರ ಬಿ, ಕೇಶವ ಪೂಜಾರಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು,ಆಶಾ ಕಾರ್ಯಕರ್ತೆಯರು,ಪಂಚಾಯತು ಸಿಬ್ಬಂದಿಗಳು, ವಿವಿಧ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಸಭೆಯಲ್ಲಿ ಭಾಗವಹಿಸಿದರು.
ಕೃಷಿ ಇಲಾಖೆಯ ನಿವೃತ್ತ ಅಧಿಕಾರಿ ಚಿದಾನಂದ ಹೂಗಾರ್, ಅಂಚೆ ಇಲಾಖೆಯ ನಿವೃತ್ತ ಡಾಕಯ್ಯ ಇವರನ್ನು ಸನ್ಮಾನಿಸಲಾಯಿತು.
ಪಂಚಾಯತು ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಟೀಲ್ ಸ್ವಾಗತಿಸಿ, ಸದಸ್ಯರಾದ ಪುಷ್ಪ ಧನ್ಯವಾದವಿತ್ತರು.