30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮನೆ ಒಂದು ಭಾಗ ಕುಸಿದು ಬಿದ್ದು ಕಳಿಯ ಮುಡಾಯಿಪಲ್ಕೆ ಅಣ್ಣು ರವರಿಗೆ ಗಾಯ

ಬೆಳ್ತಂಗಡಿ : ಆ.1ರಂದು ಸುರಿದು ಭಾರೀ ಮಳೆಗೆ ಕಳಿಯ ಗ್ರಾಮ ಖುಷಿದ ಮುಡಾಯಿಪಲ್ಕೆ ಅಣ್ಣು ಎಂಬವರ ಮನೆಯ ಒಂದು ಭಾಗ ಕುಸಿತವಾಗಿ ಅವರ ತಲೆಗೆ ಗಂಭೀರ ಗಾಯವಾಗಿದೆ.

ಮಧ್ಯಾಹ್ನ ಈ ಘಟನೆ ನಡೆದಿದ್ದು ಅಣ್ಣು ಅವರು ಊಟ ಮುಗಿಸಿ ಮಲಗಿದ್ದರು. ಆಗ ಈ ಘಟನೆ ನಡೆದಿದೆ. ಗೇರುಕಟ್ಟೆ ಹಾಲು ಉತ್ಪಾದಕರ ಸಂಘದ ನಿರ್ದೇಶಕ ನೇವಿಲ್ ಸ್ಟೀವನ್ ಮೊರಾಸ್ ಅವರು ಘಟನೆ ಯನ್ನು ಕಳಿಯ ಗ್ರಾಮಾಧಿಕಾರಿ ಪ್ರಥ್ವಿ ಶೆಟ್ಟಿ ಅವರಿಗೆ ವಿಷಯ ತಿಳಿಸಿದ್ದು, ತಕ್ಷಣ ಗಾಯಗೊಂಡ ಅಣ್ಣು ಅವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಕಳಿಯ ಪಂಚಾಯತ್ ಅಧ್ಯಕ್ಷ ದಿವಾಕರ ಎಮ್,ಉಪಾಧ್ಯಕ್ಷೆ ಇಂದಿರಾ ಬಿ.ಶೆಟ್ಟಿ, ಸದಸ್ಯರಾದ ಮೋಹಿನಿ,ವಿಜಯ ಕುಮಾರ್ ಕೆ, ಮರೀಟಾ ಪಿಂಟೋ,ಪುಷ್ಪಲತಾ, ಶ್ವೇತಾ, ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಟೀಲ ಹಾಗೂ ಕಾರ್ಯದರ್ಶಿ ಕುಂಞ್ಞ ಕೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related posts

ನಾವೂರು : ಹಾಲು ಉತ್ಪಾದಕರ ಸಂಘದ ವಾರ್ಷಿಕ ಸಾಮಾನ್ಯ ಸಭೆ

Suddi Udaya

ಕೊಕ್ಕಡ: ಕಲಾಯಿ ನಿವಾಸಿ ತಿಮ್ಮಪ್ಪ ಗೌಡ ನಿಧನ

Suddi Udaya

ಯುವವಾಹಿನಿ ಬೆಳ್ತಂಗಡಿ ಘಟಕದಿಂದ ಕನ್ಯಾಡಿ ಸ್ವಾಮೀಜಿಗಳಿಗೆ ಗೌರವಾಭಿನಂದನೆ

Suddi Udaya

ಉಜಿರೆ ಹಳೆ ಪೇಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಕುಸಿತ

Suddi Udaya

ಕನ್ನಡ ಪ್ರಬಂಧ ಸ್ಪರ್ಧೆ: ಶ್ರೀ ಧ.ಮಂ.ಅ.ಪ್ರೌ. ಶಾಲೆಯ ವಿದ್ಯಾರ್ಥಿನಿ ಕು| ಗಗನ್ಯ ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya

ಪದ್ಮುಂಜ ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಅನುಜ್ಞಾ ಕಲಶ ಹಾಗೂ ಜೀರ್ಣೋದ್ಧಾರ ಕಾರ್ಯಾರಂಭ

Suddi Udaya
error: Content is protected !!