September 6, 2026
ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಯ್ಯೂರು: ಮಲೆಬೆಟ್ಟುನಲ್ಲಿ ಬೈಕ್ ಗೆ ಆಟೋ ರಿಕ್ಷಾ ಡಿಕ್ಕಿ: ಬೈಕ್ ಸವಾರನಿಗೆ ಗಾಯ

ಕೊಯ್ಯೂರು: ಇಲ್ಲಿಯ ಮಲೆಬೆಟ್ಟು ಎಂಬಲ್ಲಿ ಬೈಕ್ ಹಾಗೂ ಆಟೋ ರಿಕ್ಷಾ ಡಿಕ್ಕಿ ಯಾಗಿದ್ದು ಬೈಕ್ ಸವಾರ ಗಾಯಗೊಂಡ ಘಟನೆ ಇತ್ತೀಚೆಗೆ ವರದಿಯಾಗಿದೆ.

ಬೆಳ್ತಂಗಡಿ ಉಮೇಶ್ ಗೌಡ (41 ವರ್ಷ), ರವರ ದೂರಿನಂತೆ ಜು.31 ರಂದು ಮಧ್ಯಾಹ್ನ, ಅವರ ದ್ವಿಚಕ್ರ ವಾಹನದಲ್ಲಿ ಅವರ ಹೆಂಡತಿ ವಿನೋದರವರನ್ನು ಸಹಸವಾರಳನ್ನಾಗಿ ಕುಳ್ಳಿರಿಸಿಕೊಂಡು, ಬೆಳ್ತಂಗಡಿಯಿಂದ ಬಂದಾರು ಕಡೆಗೆ ತೆರಳುತ್ತಾ, ಕೊಯ್ಯುರು ಗ್ರಾಮದ ಮಲೆಬೆಟ್ಟು ಎಂಬಲ್ಲಿಗೆ ತಲುಪುತ್ತಿದ್ದಂತೆ, ಉಮೇಶ್ ಗೌಡರವರು ಮುಂದಿನಿಂದ ಹೋಗುತ್ತಿದ್ದ ಆಟೋರಿಕ್ಷಾವನ್ನು ಅದರ ಚಾಲಕ ಸೋಮಶೇಖರ್ ರವರು, ದುಡುಕುತನದಿಂದ ಚಲಾಯಿಸಿ ಆಟೋರಿಕ್ಷಾ ಉಮೇಶ್ ಗೌಡ ದ್ವಿಚಕ್ರ ವಾಹನಕ್ಕೆ ಢಿಕ್ಕಿಯಾಗಿರುತ್ತದೆ.

ಪರಿಣಾಮ ದ್ವಿಚಕ್ರ ಸವಾರರು ವಾಹನ ಸಮೇತ ಇಬ್ಬರು ರಸ್ತೆಗೆ ಬಿದ್ದು ಉಮೇಶ್ ಗೌಡರವರು ಗಾಯಗೊಂಡಿದ್ದು, ಅವರ ಹೆಂಡತಿಗೆ ಯಾವುದೇ ರೀತಿಯ ಗಾಯಗಳಾಗಿರುವುದಿಲ್ಲ. ಉಮೇಶ್ ಗೌಡ ಉಜಿರೆಯ ಎಸ್ ಡಿ ಎಮ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಮನೆಗೆ ತೆರಳಿದವರು, ನಂತರ ಗಾಯ ಉಲ್ಬಣಗೊಂಡು ಗುರುವಾಯನಕೆರೆಯ ಅಭಯ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ, ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 82/2024 ಕಲಂ: 281, 125(a), BNS ರಂತೆ ಪ್ರಕರಣ ದಾಖಲಾಗಿರುತ್ತದೆ.

Related posts

ಉಜಿರೆ ಯು.ಎಸ್. ಅಟೋ ಚಾಲಕರ-ಮಾಲಕರ ಸಂಘದ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya

ಮಾಲಾಡಿ ಸ. ಉ. ಪ್ರಾ. ಶಾಲೆಯಲ್ಲಿ ಪೋಷಕ ರಕ್ಷಕ ಸಭೆ ಮತ್ತು ಸನ್ಮಾನ ಕಾರ್ಯಕ್ರಮ

Suddi Udaya

ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಉಜಿರೆ ಮುಂಡತ್ತೋಡಿ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನ ಚಾವಡಿಯಲ್ಲಿ ಶ್ರಮದಾನ

Suddi Udaya

ತೆಂಕಕಾರಂದೂರು : ಜನಾರ್ದನ ಆಚಾರ್ಯ ರವರ ಮನೆಯ ಹಿಂಬದಿ ಗುಡ್ಡ ಕುಸಿತ

Suddi Udaya

ಭಾರತೀಯ ಮಜ್ದೂರ್ ಸಂಘದ ರಾಷ್ಟ್ರೀಯ ಪ್ರಮುಖರಿಂದ ಸೇವಾಧಾಮಕ್ಕೆ ಭೇಟಿ

Suddi Udaya

ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಮಡಂತ್ಯಾರು ಬಿಲ್ಲವ ಸಂಘದ ಗೌರವಾಧ್ಯಕ್ಷ ಯೋಗೀಶ್ ಪೂಜಾರಿ ಕಡ್ತಿಲ ಹಾಗೂ ಸದಸ್ಯರು ಭೇಟಿ

Suddi Udaya
error: Content is protected !!