ಬಳಂಜ:ಬಳಂಜ ಗ್ರಾಮ ಪಂಚಾಯತ್ ನ 2024-25 ನೇ ಸಾಲಿನ ಮೊದಲ ಸುತ್ತಿನ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷೆ ಶೋಭಾ ಕುಲಾಲ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.ಮಾರ್ಗದರ್ಶಿ ಅಧಿಕಾರಿಯಾಗಿ ಬೆಳ್ತಂಗಡಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ರಂಜಿತ್ ಅವರು ಗ್ರಾಮ ಸಭೆಯನ್ನು ನಡೆಸಿಕೊಟ್ಟರು.ಅನುಪಾಲನಾ ವರದಿಯಲ್ಲಿ ಎಷ್ಟು ಕೆಲಸವಾಗಿದೆ ಹಾಗೂ ಯಾವುದೆಲ್ಲ ಬೇಡಿಕೆ ಪೆಂಡಿಂಗ್ ಉಂಟು ಎಂದು ಸುನೀಲ್ ಶೆಟ್ಟಿ ಪ್ರಶ್ನಿಸಿದರು.ಅದಕ್ಕೆ ಪಂ.ಅ.ಅಧಿಕಾರಿ ಕೆಲವ ಕಾಮಗಾರಿಗಳು ಪೂರ್ಣಗೊಂಡಿದೆ.
ಇನ್ನೂ ಕೆಲವು ಆಗಬೇಕಿದೆ ಎಂದರು.ಘನತ್ಯಾಜ್ಯ ಘಟಕದ ವಾಹನ ತ್ಯಾಜ್ಯ ಸಂಗ್ರಹಿಸಲು ಎಲ್ಲ ಕಡೆ ಹೋಗುವುದಿಲ್ಲ. ಶಾಲೆಗಳಿಗೂ ಬರುವುದಿಲ್ಲ. ಅವರು ಹೋಗಬೇಕು ಎಂದು ಪ್ರಮೋದ್ ಕುಮಾರ್ ಜೈನ್ ಒತ್ತಾಯಿಸಿದರು. ಪಂ.ಅ.ಅಭಿವೃದ್ಧಿ ಮುಂದಿನ 15 ದಿನ ರಸ್ತೆ ಸಮರ್ಪಕವಾಗಿಲ್ಲದ ಕಾರಣ ಹೋಗುವುದಿಲ್ಲ. ಮುಂದೆ ಪಂಚಾಯತ್ ವ್ಯಾಪ್ತಿಯ ಎಲ್ಲಾ ಶಾಲೆಗಳಿಗೆ ಹೋಗುತ್ತದೆ ಎಂದರು.ನಾಲ್ಕೂರು ಗ್ರಾಮದ ಕಟದವರ ಮನೆಯಿಂದ ಬೋವಾಡಿ ಸ್ಥಾನದವರೆಗೆ ಪೈಪ್ ಲೈನ್ ವಿಸ್ತರಣೆಯಾಗಿದ್ದು 200 ಮೀಟರ್ ದೂರದಲ್ಲಿ ಸಮರ್ಪಕವಾಗಿ ಗುತ್ತಿಗೆದಾರರು ಕೆಲಸ ಮಾಡದೆ 7 ಬಾರಿ ಪೈಪ್ ಹೊಡೆದು ಹೋಗಿದೆ. ಇಂತಹ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು,ಮುಂದೆ ಬಳಂಜ ಗ್ರಾ.ಪಂ ವ್ಯಾಪ್ತಿಯಲ್ಲಿ ಕೆಲಸ ನೀಡಬಾರದು ಎಂದು ಸುನೀಲ್ ಶೆಟ್ಟಿ ಆಗ್ರಹಿಸಿದರು.
ಪಂ.ಅ.ಅಧಿಕಾರಿ ಇದರ ಬಗ್ಗೆ ಮಾತನಾಡಿ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವಂತದ್ದು ನಮಗೆ ಬರುವುದಿಲ್ಲ. ಮುಂದೆ ಅಂತಹ ಗುತ್ತಿಗೆದಾರರಿಗೆ ಕೆಲಸ ನೀಡಬೇಕಾ ಬೇಡ್ವಾ ಎಂದು ಗ್ರಾಮ ಸಭೆಯ ಮುಂದಿಟ್ಟರು. ಆವಾಗ ರಮಾನಾಥ ಶೆಟ್ಟಿ ಪಂಬಾಜೆ ಕಪ್ಪುಪಟ್ಟಿಗೆ ಸೇರಿಸುವ ಕ್ರಮ ಸರಿಯಲ್ಲ. ಅವರ ಕೆಲಸ ಸರಿಯಾಗದಿದ್ರೆ ಅವರನ್ನು ಕರೆದು ಅವರಿಗೆ ಮನವರಿಕೆ ಮಾಡಬೇಕು ಎಂದರು.ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ಸ್ವಾಗತಿಸಿ, ಅನುಪಾಲನ ವರದಿಯನ್ನು ಸಭೆಯ ಮುಂದಿಟ್ಟರು.
ಪಂಚಾಯತ್ ಉಪಾಧ್ಯಕ್ಷ ಯಶೋಧರ ಶೆಟ್ಟಿ, ಸದಸ್ಯರಾದ ಬಾಲಕೃಷ್ಣ ಪೂಜಾರಿ,ಹೇಮಂತ್,ಜಯ ಶೆಟ್ಟಿ, ರವೀಂದ್ರ ಬಿ ಅಮಿನ್,ನಿಜಾಮ್,ಬೇಬಿ,ಸುಚಿತ್ರಾ,ಲೀಲಾವತಿ,ಪದ್ಮಾವತಿ,ಪ್ರಸನ್ನ ಕುಮಾರಿ,ಯಕ್ಷಿತಾ ಕೆ ಹಾಗೂ ವಿವಿಧ ಇಲಾಖಾ ಅಧಿಕಾರಿಗಳಾದ ಮೆಸ್ಕಾಂ ಜೆಇ ಸಂದೀಪ್,ಪಶು ಆಸ್ಪತ್ರೆ ಅಧಿಕಾರಿ ಡಾ.ರಮೇಶ್,ಸಿ.ಆರ್.ಪಿ ಕಿರಣ್ ಕುಮಾರ್,ಉಪ ವಲಯ ಅರಣ್ಯಧಿಕಾರಿ ಸುರೇಶ್ ಗೌಡ,ಗ್ರಾಮ ಲೆಕ್ಕಿಗ ರಪೀಕ್,ವೈದ್ಯಾಧಿಕಾರಿ ಡಾ.ಅಭಿಷೇಕ್,ಆರ್ಥಿಕ ಸಾಕ್ಷಾರತಾ ಅಧಿಕಾರಿ ಉಷಾ ಕಾಮತ್, ಆರಕ್ಷಕ ಠಾಣಾಧಿಕಾರಿ,ಗುರುವಾಯನಕೆರೆ ಕೆನರಾ ಬ್ಯಾಂಕ್ ಮ್ಯಾನೇಜರ್ ಉಪಸ್ಥಿತರಿದ್ದು ಇಲಾಖೆಯ ಬಗ್ಗೆ ಮಾಹಿತಿ ನೀಡಿದರು.ಜಮಾಖರ್ಚಿನ ವಿವರವನ್ನು ಪಂಚಾಯತ್ ಸಿಬ್ಬಂದಿ ಶಶಿಕಲಾ ಸಭೆಗೆ ಮಂಡಿಸಿದರು.