30.9 C
ಪುತ್ತೂರು, ಬೆಳ್ತಂಗಡಿ
April 5, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸೆಂಟ್ ಲಾರೆನ್ಸ್ ಕಥೇಡ್ರಲ್ ಚರ್ಚ್ ವತಿಯಿಂದ ಬೆಳ್ತಂಗಡಿ ಧರ್ಮಾಧ್ಯಕ್ಷರ ಆಪ್ತ ಸಹಾಯಕನಿಗೆ ಸನ್ಮಾನ

ಬೆಳ್ತಂಗಡಿ: ಬೆಳ್ತಂಗಡಿ ಧರ್ಮ ಪ್ರಾಂತ್ಯವು ರಜತ ಸಂಭ್ರಮದ ಮೆರುಗನ್ನು ಅನುಭವಿಸುತ್ತಿರುವ ಈ ಸಂದರ್ಭದಲ್ಲಿ, ಅಪರೂಪದ ಒಂದು ಕಾರ್ಯಕ್ರಮ ಬೆಳ್ತಂಗಡಿ ಕಥೇಡ್ರಲ್ ಚರ್ಚ್‌ನಲ್ಲಿ ನಡೆಯಿತು. ಕಥೇಡ್ರಲ್ ಚರ್ಚ್‌ನಲ್ಲಿ ಧರ್ಮ ಪ್ರಾಂತ್ಯದ ರಜತ ಮಹೋತ್ಸವದ ವಂದನಾರ್ಪಣಾ ಬಲಿಪೂಜೆ ಸಂದರ್ಭದಲ್ಲಿ, ಬೆಳ್ತಂಗಡಿ ಧರ್ಮಾಧ್ಯಕ್ಷರಾದ ಪರಮಪೂಜ್ಯ ಅತಿವಂದನೀಯ ಲಾರೆನ್ಸ್ ಮುಕ್ಕುಯಿ ಅವರ ಆಪ್ತ ಸಹಾಯಕ ಹಾಗೂ ನಿಷ್ಠಾವಂತ ವಾಹನ ಚಾಲಕರಾಗಿ 25 ವರ್ಷಗಳ ಸೇವೆ ಸಲ್ಲಿಸಿರುವ ಬೆಳ್ತಂಗಡಿ ಉದಯನಗರ ನಿವಾಸಿ ಬಿಜು ಪಾರಪ್ಪುರಮ್ ಅವರನ್ನು ಚರ್ಚ್ ವತಿಯಿಂದ ಸನ್ಮಾನಿಸಲಾಯಿತು.

ಬಿಜು ಅವರ ನಿಷ್ಠೆ, ಸೇವಾ ಮನೋಭಾವನೆ, ಶ್ರದ್ದೆ ಮತ್ತು ಕರ್ಮಕುಶಲತೆಯನ್ನು ಬೆಳ್ತಂಗಡಿ ಧರ್ಮಾಧ್ಯಕ್ಷರಾದ ಪರಮಪೂಜ್ಯ ಲಾರೆನ್ಸ್ ಮುಕ್ಕುಯಿ ಬಣ್ಣಿಸಿ, ಅವರ ಸೇವೆಯನ್ನು ಪ್ರಶಂಸೆ ಮಾಡಿದರು.

ಈ ಸಂದರ್ಭದಲ್ಲಿ ಧರ್ಮಾಧ್ಯಕ್ಷರಾದ ಅತಿವಂದನೀಯ ಮಾರ್ ಲಾರೆನ್ಸ್ ಮುಕ್ಕುಯಿ, ಬೆಳ್ತಂಗಡಿ ಧರ್ಮ ಪ್ರಾಂತ್ಯದ ಚಾನ್ಸಲರ್ ವಂದನೀಯ ಫಾದರ್ ಲಾರೆನ್ಸ್ ಪೂಣೋಲಿಲ್, ಧರ್ಮಗುರುಗಳಾದ ವಂದನೀಯ ಫಾದರ್ ತೋಮಸ್ ಕಣ್ಣಾòಕಲ್, ಟ್ರಸ್ಟಿಗಳಾದ ಶ್ರೀ ರೆಜಿ ಜೋರ್ಜ್ ಪಡಂಗಡಿ, ಶ್ರೀ ಕ್ಲಿಪ್ಪಿ ನಂದಳತ್ತ್, ದೇವಸ್ಯ ಮೈಪಾನ್, ಮಾಮಚ್ಚನ್, ಶಿನು ಮುರಿಕ್ಕನಾನಿಕ್ಕಲ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

Related posts

ಅ.10: ಧರ್ಮಸ್ಥಳ ಕಲ್ಲೇರಿಯಲ್ಲಿ ‘ಓಂಕಾರ’ ಮಲ್ಟಿ ಸ್ಟೋರ್ ಶುಭಾರಂಭ

Suddi Udaya

ಬಿಜೆಪಿ ಬೆಳ್ತಂಗಡಿ ಮಂಡಲದ ಸಾಮಾಜಿಕ ಜಾಲತಾಣ ನೂತನ ಸಂಚಾಲಕರಾಗಿ ಜಯಂತ್ ಜಾನು

Suddi Udaya

ಪಾರೆಂಕಿ ಶ್ರೀ ರಾಮನಗರ ಹಾರಬೆಯಲ್ಲಿ ದೈವಗಳ ವಾರ್ಷಿಕ ನೇಮೋತ್ಸವ

Suddi Udaya

ಲಾಯಿಲ: ಪುತ್ರಬೈಲುನಲ್ಲಿ ನೂತನ ಗ್ರಂಥಾಲಯ ಉದ್ಘಾಟನೆ

Suddi Udaya

ಪ್ರತಿಭಾ ಕಾರಂಜಿ ಸ್ಪರ್ಧೆ: ಬಂದಾರು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ

Suddi Udaya

ಮಾಜಿ ಶಾಸಕ ಕೆ. ವಸಂತ ಬಂಗೇರ ರವರಿಗೆ ಅಂತಿಮ ನಮನ ಸಲ್ಲಿಸಿದ ಸಂಸದ ನಳಿನ್ ಕುಮಾರ್ ಕಟೀಲ್

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ