March 7, 2026
ತಾಲೂಕು ಸುದ್ದಿ

ಇಂದು ಕಾಶಿ ಬೆಟ್ಟು ನಲ್ಲಿ ಸಂಸದ ಬ್ರಿಜೇಶ್ ಚೌಟ ಹಾಗೂ ಶಾಸಕ ಹರೀಶ್ ಪೂಂಜರಿಂದ ಚಾಲನೆ

ನಾಳೆಯಿಂದ ಮೋಗೇರೋಡಿ ಕನ್ಸ್ಟ್ರಕ್ಷನ್ ನವರಿಂದ
ಪುಂಜಾಲಕಟ್ಟೆ ಚಾಮಾ೯ಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭ

ಬೆಳ್ತಂಗಡಿ: ಪುಂಜಾಲಕಟ್ಟೆ ಚಾಮಾ೯ಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿನ್ನು ನಾಳೆಯಿಂದ ಮೋಗೇರೋಡಿ ಕನ್ಸ್ಟ್ರಕ್ಷನ್ ಅವರು ಆರಂಭಿಸಲಿರುವ ಹಿನ್ನೆಲೆಯಲ್ಲಿ ಆ.11 ಇಂದು ಕಾಶಿ ಬೆಟ್ಟು ನಲ್ಲಿ ಸಂಸದ ಬ್ರಿಜೇಶ್ ಚೌಟ ಹಾಗೂ ಶಾಸಕ ಹರೀಶ್ ಪೂಂಜ ಅವರು ಚಾಲನೆ ನೀಡಿದರು.
ಪುಂಜಾಲಕಟ್ಟೆ – ಚಾಮಾ೯ಡಿ ಹೆದ್ದಾರಿ ಕಾಮಗಾರಿಯನ್ನು ಡಿ.ಪಿ ಜೈನ್ ವಹಿಸಿಕೊಂಡಿದ್ದು, ಒಂದು ವಷ೯ದ ಹಿಂದೆ ಅವರು ಕಾಮಗಾರಿ ಆರಂಭಿಸಿದ್ದರು. ಆದರೆ

ಜಿಲ್ಲೆಯ ಹವಾಮಾನದ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಕಾಮಗಾರಿ ಮಾಡುವಲ್ಲಿ ಸಮಸ್ಯೆಯಾಗಿ ಬೆಳ್ತಂಗಡಿ ತಾಲೂಕಿನ ಜನರು ಸಂಕಷ್ಟ ಎದುರಿಸುವಂತಾಗಿತ್ತು.
ಇದಕ್ಕಾಗಿ ಗುತ್ತಿಗೆದಾರ ಡಿ.ಪಿ ಜೈನ್, ಹೆದ್ದಾರಿ ಮುಖ್ಯ ಇಂಜಿನಿಯರ್ ಹಾಗೂ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ, ಮುಂದಿನ ಹೆದ್ದಾರಿ ಕಾಮಗಾರಿಯನ್ನು ಮೋಗೇರೋಡಿ ಕನ್ಸ್ಟ್ರಕ್ಷನ್ ಅವರು ಮಾಡುವುದಾಗಿ ನಿಧಾ೯ರಿಸಲಾಗಿದೆ. ಇದಕ್ಕೆ ಗುತ್ತಿಗೆದಾರ ಡಿ.ಪಿ.ಜೈನ್ ಒಪ್ಪಿಗೆ ನೀಡಿದ್ದು, ನಾಳೆಯಿಂದಕಾಮಗಾರಿ ಆರಂಭಗೊಳ್ಳಲಿದೆ.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ ರಾವ್, ಪ್ರಧಾನ ಕಾರ್ಯದರ್ಶಿ ಜಯಾನಂದ ಗೌಡ, ಮೋಗೇರೋಡಿ ಕನ್ಸ್ಟ್ರಕ್ಷನ್ ನವರು ಉಪಸ್ಥಿತರಿದ್ದರು.

Related posts

ಜೂ.30 : ಕೊಕ್ಕಡ ಮಿಯಾವಕಿ ಅರಣ್ಯೀಕರಣ ಗಿಡನಾಟಿ ಕಾರ್ಯಕ್ರಮ

Suddi Udaya

ಲಾಯಿಲ ಗ್ರಾಮೀಣ ಶ್ರೇಷ್ಠತಾ ತರಬೇತಿ ಕೇಂದ್ರದಲ್ಲಿ ಮೆಹಂದಿ ಡಿಸೈನ್ ತರಬೇತಿಯ ಸಮಾರೋಪ ಕಾರ್ಯಕ್ರಮ

Suddi Udaya

ಹೊಸ ನಿರೀಕ್ಷೆ ಮೂಡಿಸಿದ ಸಿನೆಮಾ ‘ದಸ್ಕತ್’; ಗ್ರಾಮೀಣ ಭಾಗದ ಸಂಸ್ಕೃತಿ,ಸಂಘರ್ಷ,ಸಂಭ್ರಮದ ಕಥೆ ಹೇಳುವ ದಸ್ಕತ್ ಚಿತ್ರಕ್ಕೆ ಸಿನಿಪ್ರಿಯರಿಂದ ಉತ್ತಮ ಸ್ಪಂದನೆ

Suddi Udaya

ಶಿಬರಾಜೆ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

Suddi Udaya

ರೋಟರಿ ಕ್ಲಬ್ ವತಿಯಿಂದ ಬುಹುಮುಖಿ ಸಮಾಜ ಸೇವೆ

Suddi Udaya

ಬಂಟರ ಯಾನೆ ನಾಡವರ ಸಂಘ, ಕಣಿಯೂರು ಗ್ರಾಮ ಸಮಿತಿ ವತಿಯಿಂದ ಪದಗ್ರಹಣ, ಪ್ರತಿಭಾ ಪುರಸ್ಕಾರ, ಪುಸ್ತಕ ವಿತರಣಾ ಕಾರ್ಯಕ್ರಮ

Suddi Udaya
error: Content is protected !!