September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಎಸ್.ಡಿ.ಎಮ್ ಮಹಿಳಾ ಐ.ಟಿ.ಐ ಯಲ್ಲಿ ಎನ್.ಸಿ.ವಿ.ಟಿ ಮಾನ್ಯತೆ ಪಡೆದ ಫ್ಯಾಶನ್ ಡಿಸೈನ್ ಮತ್ತು ಟೆಕ್ನಾಲಜಿ ವೃತ್ತಿ ಆರಂಭ

ಉಜಿರೆ: ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಡಾ. ಡಿ ವೀರೇಂದ್ರ ಹೆಗ್ಗಡೆಯವರ ಸೂಚನೆಯಂತೆ, 2024-25 ನೇ ಸಾಲಿಗೆ ಅನ್ವಯಿಸುವಂತೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆ ಉಜಿರೆಯಲ್ಲಿ ರಾಷ್ಟ್ರೀಯ ವೃತ್ತಿ ಶಿಕ್ಷಣ ಪರಿಷತ್ ನವದೆಹಲಿಯಿಂದ ಶಾಶ್ವತವಾಗಿ ಮಾನ್ಯತೆ ಪಡೆದ ಫ್ಯಾಶನ್ ಡಿಸೈನ್ ಮತ್ತು ಟೆಕ್ನಾಲಜಿ (FD&T) ವೃತ್ತಿಯನ್ನು ಪ್ರಾರಂಭಿಸಲಾಗುವುದು.


ಈಗಿನ ಕಾಲದ ಬೇಡಿಕೆಗೆ ತಕ್ಕಂತೆ ಮಹಿಳೆಯರ, ಮಕ್ಕಳ ಹಾಗೂ ಪುರುಷರ ವಿವಿಧ ನೂತನ ವಸ್ತ್ರ ವಿನ್ಯಾಸ, ಎಂಬ್ರೋಯಿಡರಿ ಮುಂತಾದ ಆಧುನಿಕ ಶಿಕ್ಷಣ ಪದ್ಧತಿಯನ್ನು ಇದರಲ್ಲಿ ಅಳವಡಿಸಲಾಗುವುದು. ಕನಿಷ್ಠ ಎಸ್.ಎಸ್.ಎಲ್.ಸಿ ಉತ್ತೀರ್ಣಗೊಂಡ ತಾಲೂಕಿನ ಗ್ರಾಮೀಣ ಭಾಗದ ಹಾಗೂ ರಾಜ್ಯದ ವಿದ್ಯಾರ್ಥಿನಿಯರು (ವಯೋಮಿತಿ ಇರುವುದಿಲ್ಲ) ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದೆಂದು ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಖುದ್ದಾಗಿ ಅಥವಾ ಕಛೇರಿ ಸಂಖ್ಯೆ 08256-236800 ಅಥವಾ ಪ್ರಾಂಶುಪಾಲರ ದೂರವಾಣಿ ಸಂಖ್ಯೆ 9449200768 ಸಂಪರ್ಕಿಸಬಹುದು.

Related posts

ಜಂಇಯ್ಯತುಲ್ ಉಲಮಾ ಶತಮಾನೋತ್ಸವ, ಗುರುವಾಯನಕೆರೆ ಮಸ್ಜಿದ್ ನಲ್ಲಿ ಧ್ವಜಾರೋಹಣ

Suddi Udaya

ಗುರುವಾಯನಕೆರೆ ಎಕ್ಸೆಲ್ ಪಿಯು ಕಾಲೇಜಿನಲ್ಲಿ CSEET ಓರಿಯೆಂಟೇಷನ್ ಕಾರ್ಯಾಗಾರ

Suddi Udaya

ನಾರಾವಿ ಪ್ರಾ.ಕೃ.ಪ.ಸ. ಸಂಘದ ವತಿಯಿಂದ ಅತ್ಯುತ್ತಮ ಶಾಸಕ ಪ್ರಶಸ್ತಿ ಪುರಸ್ಕೃತ ಶಾಸಕ ಹರೀಶ್ ಪೂಂಜರಿಗೆ ಅಭಿನಂದನೆ

Suddi Udaya

ಅ.24: ಕಲ್ಲೇರಿ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya

ಪುಂಜಾಲಕಟ್ಟೆ: ಪ್ರಸೂತಿ ತಜ್ಞೆ, ನಾಟಿ ವೈದ್ಯೆ ಶ್ರೀಮತಿ ಅಪ್ಪಿ ಪೂಜಾರಿ ಉರ್ಕಲೊಟ್ಟು ನಿಧನ

Suddi Udaya

ವೇಣೂರು ಗೋಳಿದಡ್ಕ ನಿವಾಸಿ ಮಂಜಪ್ಪ ದೇವಾಡಿಗ ನಿಧನ

Suddi Udaya
error: Content is protected !!