ಗ್ರಾಮಾಂತರ ಸುದ್ದಿಚಿತ್ರ ವರದಿ

ಬೆಳ್ತಂಗಡಿ : ಕಸ್ತೂರಿ ರಂಗನ್ ವರದಿ ಭಾಧ್ಯಸ್ಥರೊಂದಿಗೆ ಸಮಾಲೋಚನೆ ನಡೆಸಲು ಬೆಳ್ತಂಗಡಿ ಧರ್ಮಪ್ರಾಂತ್ಯದ ಕೆ ಎಸ್ ಎಂ ಸಿ ಎ ವತಿಯಿಂದ ಅಗ್ರಹ

ಬೆಳ್ತಂಗಡಿ : ಕಸ್ತೂರಿ ರಂಗನ್ ವರದಿಯ ಅನುಷ್ಠಾನದ ಬಗ್ಗೆ ರಾಜ್ಯದ ಮಲೆನಾಡಿನ ರೈತರಲ್ಲಿ ಗೊಂದಲ ಹಾಗೂ ಭಯಮೂಡಿದೆ ಈ ಬಗ್ಗೆ ಕೃಷಿಕರಲ್ಲಿ ಮೂಡಿರುವ ಭಯ ಹೋಗಲಾಡಿಸಿ ರೈತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಬೆಳ್ತಂಗಡಿ ಧರ್ಮಪ್ರಾಂತ್ಯ ಕೆ.ಎಸ್.ಎಂ.ಸಿ. ಎ ವತಿಯಿಂದ ಸಂಘಟನೆಯ ಅಧ್ಯಕ್ಷ ಬಿಟ್ಟಿ ಬಿ ನೆಡುನಿಲಂ ಅವರ ನೇತೃತ್ವದಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಕಸ್ತೂರಿ ರಂಗನ್ ವರದಿ ಅನುಷ್ಠಾನಗೊಂಡರೆ ತಮ್ಮ ಬದುಕನ್ನು ಕೃಷಿಭೂಮಿಯನ್ನು ಕಳೆದುಕೊಳ್ಳಬೇಕಾಗಲಿದೆ ಹಾಗೂ ತನ್ನಷ್ಟಕ್ಕೆ ಒಕ್ಕಲೇಳುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂಬ ಭಯ ಸಾವಿರಾರು ಮಂದಿಯಲ್ಲಿದೆ.ಈ ಹಿನ್ನಲೆಯಲ್ಲಿ ಕಸ್ತೂರಿ ರಂಗನ್ ವರದಿಯ ಸಾದಕ – ಭಾದಕ ಗಳ ಬಗ್ಗೆ ಮರು ಚಿಂತನೆ ನಡೆಸಿ ಕೃಷಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ವಹಿಸಿ ಪಶ್ಚಿಮ ಘಟವನ್ನು ರಕ್ಷಣೆ ಮಾಡಬೇಕಾಗಿದೆ. ಪಶ್ಚಿಮ ಘಟದ ಜನವಾಸ ಯೋಗ್ಯವಲ್ಲದ ಪ್ರದೇಶದಲ್ಲಿರುವ ಜನರಿಗೆ ಬೇಕಾದ ಮಾಹಿತಿ ನೀಡಿ ಅಂತವರಿಗೆ ವಸತಿ ಹಾಗೂ ಪರಿಹಾರವನ್ನು ನೀಡುವ ಯೋಜನೆ ಯನ್ನು ರೂಪಿಸಿ ಕಸ್ತೂರಿ ರಂಗನ್ ವರದಿ ಜಾರಿ ಮಾಡಬೇಕು ಎಂದು ಅಗ್ರಹಿಸಿದರು.

ಆ. 11 ರಂದು ಮಡಂತ್ಯಾರಿನಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಸಂಘಟನೆಯ ವತಿಯಿಂದ‌ ಸನ್ಮಾನಿಸಿ ಬಳಿಕ ಮನವಿ ನೀಡಲಾಯಿತು.ಈ ಸಂದರ್ಭದಲ್ಲಿ ಕೆ.ಎಸ್.ಎಂ.ಸಿ ಎ ಮುಖಂಡರುಗಳಾದ ಸೇಬಸ್ಟಿಯನ್ ಮಲಯಾಟಿಲ್, ಜೈಸನ್ ಪಟ್ಟೀರಿ, ಟೊಮಿ ವೈಪನ, ರೆಜಿ ಬೆಳ್ತಂಗಡಿ, ಹಾಗೂ ಸದಸ್ಯರು ಉಪಸ್ಥಿತರಿದ್ದರು. ಈಬಗ್ಗೆ ಸರಕಾರದ ಮಟ್ಟದಲ್ಲಿ ಸಚಿವರುಗಳೊಂದಿಗೆ ಮಾತುಕತೆ ನಡೆಸಿ ಸಭೆ ಕರೆದು ನಿಮ್ಮ ಅಹವಾಲುಗಳನ್ನು ಅವರಿಗೆ ತಿಳಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಐವನ್ ಡಿಸೋಜ ಅವರು ಭರವಸೆ ನೀಡಿದರು.

Related posts

ಬೆಳ್ತಂಗಡಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ ಸ್ಥಳೀಯ ಸಂಸ್ಥೆಯ ಜಿಲ್ಲಾ ಮಟ್ಟದ ತೃತೀಯ ಚರಣ ಕಬ್ ಮತ್ತು ಸುವರ್ಣ ಗರಿ ಬುಲ್ ಬುಲ್ ಪರೀಕ್ಷಾ ಶಿಬಿರ

Suddi Udaya

ಕರ್ನೋಡಿ  ಸ.ಉ. ಪ್ರಾ. ಶಾಲೆಯಲ್ಲಿ  ನವೀಕೃತ ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿಯ ಉದ್ಘಾಟನೆ

Suddi Udaya

ದಿವ್ಯಾಂಗರಿಗೆ ಗಾಲಿ ಕುರ್ಚಿ ಗಳ ವಿತರಣೆ

Suddi Udaya

ಬಳಂಜ ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಸಿ.ಎಸ್.ಸಿ ಕೇಂದ್ರ ಸ್ಥಳಾಂತರಗೊಂಡು ಉದ್ಘಾಟನೆ

Suddi Udaya

ಮುಂಡಾಜೆ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ತ್ರೈಮಾಸಿಕ ಸಭೆ

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೆಂಕಿಯಿಲ್ಲದ ಅಡುಗೆ ಸ್ಪರ್ಧೆ

Suddi Udaya
error: Content is protected !!