September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ


ಮಡಂತ್ಯಾರು: ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟವು ಸೇಕ್ರೆಡ್ ಹಾರ್ಟ್ ಪ್ರೌಢಶಾಲೆ, ಮಡಂತ್ಯಾರು ಇವರ ಪ್ರಾಯೋಜಕತ್ವದಲ್ಲಿ ಆ. 10 ರಂದು ಸೇಕ್ರೆಡ್ ಹಾರ್ಟ್ ಒಳ ಕ್ರೀಡಾಂಗಣದಲ್ಲಿ ನಡೆಯಿತು.

ಈ ಪಂದ್ಯಾಟದಲ್ಲಿ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ 14 ರ ವಯೋಮಾನದ ಪ್ರಾಥಮಿಕ ಹಂತದ ಬಾಲಕರ ವಿಭಾಗದಲ್ಲಿ 6ನೇ ತರಗತಿಯ ವಿದ್ಯಾರ್ಥಿಗಳಾದ ಜೇವಿಸ್ ಡಿಕುನ್ಹಾ, ಜೀತನ್ ಸಿಕ್ವೇರಾ, ಜಿಯಾನ್ ಸಿಕ್ವೇರಾ ಹಾಗೂ 7ನೇ ತರಗತಿಯ ವಿದ್ಯಾರ್ಥಿಗಳಾದ ಎಲ್ಟನ್ ಡಿಸೋಜ, ಚಿರಾಯು ರವೀಂದ್ರ ಪೂಜಾರಿ ಹಾಗೂ 14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ 8 ನೇ ತರಗತಿಯ ವಿದ್ಯಾರ್ಥಿನಿಯಾದ ಅಲಿಶಾ ಡೇಸರವರು ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಹಾಗೂ 14 ರ ವಯೋಮಾನದ ಪ್ರಾಥಮಿಕ ಹಂತದ ಬಾಲಕಿಯರ ವಿಭಾಗದಲ್ಲಿ 6ನೇ ತರಗತಿಯ ವಿದ್ಯಾರ್ಥಿಗಳಾದ ಆದ್ಯ ಜೆ, ಸುಶ್ಮಿತಾ ಶೆಣೈ, ಅನ್ಯ ಪಿ ಜೈನ್, ಫ್ಲಾವಿಟ ಲಿವಿಯ ಡಿಸೋಜ, ನಿಶೆಲ್ ರಿಯೋನ ಡಿಸೋಜ ಹಾಗೂ ೧೪ರ ವಯೋಮಾನದ ಬಾಲಕರ ವಿಭಾಗದಲ್ಲಿ ೮ನೇ ತರಗತಿಯ ಯಶ್ವೀಜ್ ಶೆಟ್ಟಿ ರವರು ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ .

ಇವರಿಗೆ ನಮ್ಮ ಶಾಲಾ ದೈಹಿಕ ಶಿಕ್ಷಕ ವಲೇರಿಯನ್ ಡಿಸೋಜ ಮತ್ತು ಮಂಜುನಾಥರವರು ತರಬೇತಿಯನ್ನು ನೀಡಿರುತ್ತಾರೆ.

Related posts

ಸ್ನಾತಕೋತ್ತರ ವಿಭಾಗದಲ್ಲಿ ನೈನಾಡಿನ ಚೇತನಾ ರವರಿಗೆ ನಾಲ್ಕು ಚಿನ್ನದ ಪದಕ

Suddi Udaya

ರಾಜ್ಯದ 5,8 ಮತ್ತು 9ನೇ ತರಗತಿ “ಬೋರ್ಡ್​” ಪರೀಕ್ಷೆಗೆ “ಸುಪ್ರೀಂ ಕೋರ್ಟ್” ತಡೆಯಾಜ್ಞೆ

Suddi Udaya

ಬಿಜೆಪಿ ಯುವಮೋರ್ಚಾ ಬೆಳ್ತಂಗಡಿ ಮಂಡಲ ವತಿಯಿಂದ ಕಾರ್ಗಿಲ್ ವಿಜಯ ದಿವಸ್ ಪ್ರಯುಕ್ತ “ಪಂಜಿನ ಮೆರವಣಿಗೆ”

Suddi Udaya

ಎಸ್‌ಎಸ್‌ಎಲ್‌ಸಿ ಪರೀಕ್ಷೆ-2: ವಾಣಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಪ್ತಿ ಗೌಡ ರಾಜ್ಯಕ್ಕೆ ಪ್ರಥಮ

Suddi Udaya

ಕಾಂಗ್ರೆಸ್ ಸಕ್ರಿಯ ಕಾರ್ಯಕರ್ತ ದಿನೇಶ್ ನಾಯ್ಕ ನಿಂತಿಕಲ್ಲು ಭಾರತೀಯ ಜನತಾ ಪಾರ್ಟಿ ಸಿದ್ಧಾಂತ ಒಪ್ಪಿ ಪಕ್ಷಕ್ಕೆ ಸೇರ್ಪಡೆ

Suddi Udaya

ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಿದ ಜಯಂತ್ ಟಿ

Suddi Udaya
error: Content is protected !!