September 6, 2026
ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮಂಜೊಟ್ಟಿ ದ್ವಿಚಕ್ರ ವಾಹನಕ್ಕೆಬಸ್‌ ಡಿಕ್ಕಿ: ಗಂಭೀರ ಗಾಯಗೊಂಡಿದ್ದ ಯುವಕ ಸಾವು

ಬೆಳ್ತಂಗಡಿ: ಬಸ್ಸೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಪರಿಣಾಮ ದ್ವಿಚಕ್ರ ಸವಾರ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತ ಯುವಕ ಮಂಜೊಟ್ಟಿ ಸಮೀಪದ ಪರಾರಿ ನಿವಾಸಿ ಉಮೇಶ್ ಪೂಜಾರಿಯವರ ಮಗ ಧರಣೇಂದ್ರ ಪೂಜಾರಿ (24ವ) ಎಂದು ಗುರುತಿಸಲಾಗಿದೆ.

ಬೆಳ್ತಂಗಡಿ ಕಡೆಯಿಂದ ತನ್ನ ಮನೆ ಮಂಜೊಟ್ಟಿ ಗೆ ಮಧ್ಯಾಹ್ನ ತನ್ನ ದ್ವಿಚಕ್ರ ವಾಹನದಲ್ಲಿ ತೆರಳುತಿದ್ದ ವೇಳೆ ಬೆಳ್ತಂಗಡಿ ಕಡೆಗೆ ಅತೀ ವೇಗದಲ್ಲಿ ಸಂಚಾರಿಸುತಿದ್ದ ಖಾಸಗಿ ಬಸ್‌ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸವಾರ ಬಸ್ಸಿನಡಿ ಸಿಲುಕಿದ್ದು ಸ್ಥಳೀಯರು ಹರಸಾಹಸ ಪಟ್ಟು ಹೊರತೆಗೆದು ಉಜಿರೆ ಖಾಸಗಿ ಆಸ್ಪತ್ರೆಗೆ ಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕೊಂಡುವ ಮಾರ್ಗದ ಮಧ್ಯೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ವೃತ್ತಿಯಲ್ಲಿ ಮೇಸ್ತ್ರಿ ಕೆಲಸ ಮಾಡುತಿದ್ದ ಧರಣೇಂದ್ರ ಪೂಜಾರಿಯವರ ತಂದೆ ವಿಕಲಚೇತನರಾಗಿದ್ದು ಕುಟುಂಬದ ಜೀವನ ನಿರ್ವಹಣೆ ಇವರ ದುಡಿಮೆಯಲ್ಲೇ ಸಾಗುತಿತ್ತು ಎನ್ನಲಾಗಿದೆ. ಬೆಳ್ತಂಗಡಿ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Related posts

ತ್ವೈಬಾ ಮರ್ಕಝ್ ಮೂಡಬಿದ್ರೆ ಧಾರ್ಮಿಕ ಕಾರ್ಯಕ್ರಮ

Suddi Udaya

ವಿ.ಪ. ಮಾಜಿ ಶಾಸಕ ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ರವರ ಮುತುವರ್ಜಿಯಿಂದ ಸರಕಾರದ ವಿಶೇಷ ರೂ.50 ಲಕ್ಷ ಅನುದಾನದಿಂದ ಗೇರುಕಟ್ಟೆ – ಹೇರೋಡಿ ಕಾಂಕ್ರೀಟ್ ರಸ್ತೆ ಶಿಲಾನ್ಯಾಸ

Suddi Udaya

ಮುಂಡಾಜೆ ಪ.ಪೂ. ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ

Suddi Udaya

ಶ್ರೀ ಕ್ಷೇತ್ರ ತೆಕ್ಕಾರು ಬ್ರಹ್ಮಕಲಶ: ತಾಲೂಕು ಮಟ್ಟದ ಬೃಹತ್ ಹಸಿರು ಹೊರೆ ಕಾಣಿಕೆ ಸಮರ್ಪಣೆ -‌ಮೆರವಣಿಗೆ

Suddi Udaya

ಆ.15: ನಾಲ್ಕೂರು ಶ್ರೀ ಪಂಚಲಿಂಗೇಶ್ವರ ಭಜನಾ ಮಂಡಳಿಯಿಂದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮ ಹಾಗೂ ವಿವಿಧ ಆಟೋಟ ಸ್ಪರ್ಧೆಗಳು

Suddi Udaya

ಅರಸಿನಮಕ್ಕಿಯಲ್ಲಿ ಮಕ್ಕಳ ಸಂಸ್ಕಾರ ಶಿಬಿರ ಸಂಪನ್ನ

Suddi Udaya
error: Content is protected !!