April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಧರ್ಮಾಧ್ಯಕ್ಷರ ಪೀಠಾರೋಹಣ ವರ್ದಂತಿ: ನೆಲ್ಯಾಡಿ ಅಲ್ಫೋನ್ಸ ಚರ್ಚ್ ವತಿಯಿಂದ ಶುಭಾಶಯ

ಬೆಳ್ತಂಗಡಿ: ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂದನೀಯ ಪರಮಪೂಜ್ಯ ಲಾರೆನ್ಸ್ ಮುಕ್ಕುಯಿ ಅವರ ಪೀಠಾರೋಹಣ ವರ್ಧಂತಿ ಮತ್ತು ನಾಮಕರಣ ಹಬ್ಬದ ಶುಭಾಶಯಗಳನ್ನು ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್‌ನ ಟ್ರಸ್ಟಿಗಳು ಹಾಗೂ ಸೆಂಟ್ ಮೇರಿಸ್ ಚರ್ಚ್ ಆರ್ಲದ ಟ್ರಸ್ಟಿಗಳು ಧರ್ಮಾಧ್ಯಕ್ಷರ ನಿವಾಸದಲ್ಲಿ ಭೇಟಿಯಾಗಿ ಹಾರೈಸಿದರು.

ಈ ಸಂದರ್ಭದಲ್ಲಿ ಧರ್ಮಗುರುಗಳಾದ ವಂದನೀಯ ಶಾಜಿ ಮಾತ್ಯು, ಸರ್ವರ ಪರವಾಗಿ, ಪೂಜ್ಯರಿಗೆ ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ಹಾರೈಸಿದರು. ಚರ್ಚ್ ಸಹಾಯಕ ಧರ್ಮಗುರುಗಳಾದ ರೆ. ಫಾ. ಎಬಿನ್ ಕುರಿಯನ್, ನೆಲ್ಯಾಡಿ ಅಲ್ಫೋನ್ಸ ಚರ್ಚ್‌ನ ಟ್ರಸ್ಟಿ ಶಿಬು ಪನಚಿಕ್ಕಲ್, ಸಂಡೆ ಸ್ಕೂಲ್ ಮುಖ್ಯಶಿಕ್ಷಕ ರೊಯ್ ಕೊಳಂಗರಾತ್, ಆರ್ಲ ಚರ್ಚ್ ಸೆಂಟ್ ಮೇರಿಸ್ ಚರ್ಚ್‌ನ ಟ್ರಸ್ಟಿ ಸಂತೋಷ್ ಪುದುಮನ, ಮತ್ತು ಪಾಲನಾ ಸಮಿತಿಯ ರೆಜಿ ಕವಳಕಾಟ್ಟ್ ಉಪಸ್ಥಿತರಿದ್ದರು.

Related posts

ಶಿರ್ಲಾಲು ಶ್ರಿ ಮಹಾಲಿಂಗೇಶ್ವರ ದೇವರಿಗೆ ಬ್ರಹ್ಮ ಕಲಶಾಭಿಷೇಕ

Suddi Udaya

ಬೆಳ್ತಂಗಡಿ ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ

Suddi Udaya

ಉಜಿರೆ ಎಸ್‌ಡಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಾಳೆಯಿಂದ ಉಚಿತ ಡಯಾಲಿಸಿಸ್ ಸೇವೆ

Suddi Udaya

ಉಜಿರೆ ಶ್ರೀ ಧ.ಮಂ. ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳಿಗೆ ವ್ಯಕ್ತಿತ್ವ ವಿಕಸನದ ಕಾರ್ಯಾಗಾರ

Suddi Udaya

ಬಂದಾರು ಗ್ರಾ.ಪಂ. ನಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳ ಸಂಪೂರ್ಣತಾ ಅಭಿಯಾನ ಕಾರ್ಯಕ್ರಮ

Suddi Udaya

ಪುಂಜಾಲಕಟ್ಟೆ ಯುವಕ ಸೈನೇಡ್ ಸೇವಿಸಿ ಆತ್ಮಹತ್ಯೆ

Suddi Udaya
error: Content is protected !!