April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಭಾರತೀಯ ಜೈನ್ ಮಿಲನ್ ಬೆಳ್ತಂಗಡಿ ಮತ್ತು ಧೀಮತಿ ಮಹಿಳಾ ಸಂಘ ಉಜಿರೆ ವತಿಯಿಂದ ಆಹಾರೋತ್ಸವ ಕಾರ್ಯಕ್ರಮ

ಉಜಿರೆ: ಭಾರತೀಯ ಜೈನ್ ಮಿಲನ್, ಬೆಳ್ತಂಗಡಿ ಹಾಗೂ ಧೀಮತಿ ಮಹಿಳಾ ಸಂಘ , ಉಜಿರೆ ಜಂಟಿ ಆಶ್ರಯದಲ್ಲಿ ನಡೆದ ಆಷಾಡ ಮಾಸದ ವಿಶೇಷ ಆಹಾರೋತ್ಸವ ಕಾರ್ಯಕ್ರಮ ಜರಗಿತು,

ಕಾರ್ಯಕ್ರಮವನ್ನು ಎರಡೂ ಸಂಸ್ಥೆಗಳ ಗೌರವ ಸಲಹೆಗಾರ ರಾಗಿರುವ ಶ್ರೀಮತಿ ಸೋನಿಯಾ ಯಶೋವರ್ಮ ಅವರು
ಚೆನ್ನೆ ಮಣೆ ಆಡುವ ಮೂಲಕ ಉದ್ಘಾಟಿಸಿ ,ನಮ್ಮ ಸಂಸ್ಕೃತಿ,ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ಈ ಕಾರ್ಯಕ್ರಮದ ಮೂಲಕ ಆಗುತ್ತಿದೆ, ಔಷಧೀಯ ಗುಣ ಇರುವ , ಕಾಲ,ಕಾಲಕ್ಕೆಹೊಂದುವ,ದೊರೆಯುವ ಪದಾರ್ಥ ವಸ್ತುಗಳನ್ನು ಉಪಯೋಗಿಸುವಂತೆ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಲಯ ನಿರ್ದೇಶಕರಾದ ಬಿ. ಪ್ರಮೋದ್ ಕುಮಾರ್, ಪ್ರಾಂಶುಪಾಲರು ಮಾತನಾಡಿ ವರ್ಷದ ಪ್ರತಿ ತಿಂಗಳಿಗೂ ಅದರದ್ದೇ ಆದ ಮಹತ್ವ ಇದೆ, ಆಷಾಡ ಮಾಸದ ವಿಶೇಷ ಗಳನ್ನು,ಮುಂದಿನ ಜನಾಂಗ ಅರಿತು ,ನಮ್ಮ ಪರಂಪರೆಯನ್ನು ಬೆಳೆಸಿ ಕೊಂಡು ಹೋಗಲು ಇಂತಹ ಕಾರ್ಯಕ್ರಮ ಅವಶ್ಯಕ ಎಂದು ತಿಳಿಸಿದರು,

ವಲಯ ನಿರ್ದೇಶಕರಾದ ಬಿ.ಸೋಮಶೇಖರ ಶೆಟ್ಟಿ ಮಾತನಾಡಿ, ಹಿಂದಿನ ಕಾಲದಲ್ಲಿ ಅನಿವಾರ್ಯವಾಗಿದ್ದ ಆಷಾಡ ಮಾಸದ ತಿಂಡಿ ತಿನಸುಗಳು ಇಂದು ಆಹಾರೋತ್ಸವವಾಗಿ ಆಚರಿಸಲ್ಪಡುತ್ತದೆ, ಆರೋಗ್ಯಕ್ಕೆ ಪೂರಕವಾದ ಆಹಾರ ಪದ್ಧತಿಯನ್ನು ನಾವು ಅನುಸರಿಸುವುದರಿಂದ ಅನೇಕ ಬಗೆಯ ಕಾಯಿಲೆಗಳಿಂದ ದೂರ ಇರಬಹುದು,ಇಂತಹ ಆಹಾರ ವಸ್ತುಗಳಲ್ಲಿ ಇರುವ ಆರೋಗ್ಯಪೂರಕ ಮಹತ್ವದ ಅರಿವು ಮೂಡಿಸಲು ಮತ್ತು ಹಿಂದಿನ ಕಾಲದ ಜನ ಜೀವನದ ಪರಿಚಯ ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಈ ಕಾರ್ಯಕ್ರಮ ಯಶಸ್ವಿ ಆದ ಬಗ್ಗೆ,ಮತ್ತು ಅಪಾರ ಸಂಖ್ಯೆ ಯಲ್ಲಿ ಸೇರಿದ ಸದಸ್ಯರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ದೀಮತಿ ಮಹಿಳಾ ಸಮಾಜದ ಅಧ್ಯಕ್ಷೆ ಶ್ರೀಮತಿ ರಜತ ಪಿ.ಶೆಟ್ಟಿ ಮಾತನಾಡಿ ಈ ಕಾರ್ಯಕ್ರಮವನ್ನು ವಿಶೇಷ ರೀತಿಯಲ್ಲಿ ಆಯೋಜಿಸಿದ ಹಿನ್ನಲೆಯನ್ನು ವಿವರಿಸಿದರು,ಪ್ರಕೃತಿಯಲ್ಲಿ ದೊರೆಯುವ ಆಹಾರ ಪದಾರ್ಥಗಳನ್ನು ಉಪಯೋಗಿಸುವಾಗ ವಹಿಸ ಬೇಕಾದ ಮುಂಜಾಗ್ರತಾ ಕ್ರಮ ಗಳಬಗ್ಗೆ ವಿವರಿಸಿ ತಿಳಿಸಿದರು.

ಜೈನ್ ಮಿಲನ್ ಅಧ್ಯಕ್ಷರಾದ ಡಾ, ನವೀನ್ ಕುಮಾರ್ ಜೈನ್ ಅವರು ಮಾತನಾಡಿ,ಆಹಾರ ಪದ್ಧತಿಯ ಹಿನ್ನೆಲೆಯನ್ನು ವೈಜ್ಞಾನಿಕವಾಗಿ ವಿವರಿಸಿ, ಉಪ್ಪಿನ ಕಾಯಿಯಂತಹ ವಸ್ತುಗಳನ್ನು ಪ್ಲಾಸ್ಟಿಕ್ ಡಬ್ಬಗಳಲ್ಲಿ ತುಂಬಿಸಿ ಇಟ್ಟು ಉಪಯೋಗಿಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ, ಆಹಾರ ಪದಾರ್ಥಗಳು ಮತ್ತು ಅದನ್ನು ತಯಾರಿಸುವ ಬಗ್ಗೆ,ಸಂಗ್ರಹಿಸಿ ಇಡುವ ವಸ್ತುಗಳಬಗ್ಗೆ ವಿಶೇಷ ಮಾಹಿತಿಯನ್ನು ವೈಜ್ಞಾನಿಕ ಅಧ್ಯಯನ ಹಿನ್ನೆಲೆಯಲ್ಲಿ ವಿವರಿಸಿ ತಿಳಿಸಿದರು, ಈ ದಿನದ ಕಾರ್ಯ ಕ್ರಮದ ಯಶಸ್ಸಿಗೆ ಸಹಕರಿಸಿದ ಧೀಮತಿ ಮಹಿಳಾ ಸಮಾಜದ ಸರ್ವರಿಗೂ ,ಮಿಲನ್ ನ ಸರ್ವ ಸದಸ್ಯರಿಗೂ ಕೃತಜ್ಞತೆ ಸಲ್ಲಿಸಿದರು,

ಧೀಮತಿ ಮಹಿಳಾ ಸಮಾಜದ ಕಾರ್ಯದರ್ಶಿ ಪ್ರಾಧ್ಯಾಪಕಿ ಶ್ರೀಮತಿ ದಿವ್ಯ ಪ್ರಧಾನ್ ಪ್ರಾಸ್ತಾವಿಕ ಮಾತಿನೊಂದಿಗೆ ಸರ್ವರನ್ನೂ ಸ್ವಾಗತಿಸಿದರು. ಜೈನ್ ಮಿಲನ್ ಕಾರ್ಯದರ್ಶಿ ವೀರ್ ಸಂಪತ್ ಕುಮಾರ್ ಜೈನ್ ನಿರ್ವಹಿಸಿದ ಕಾರ್ಯಕ್ರಮದಲ್ಲಿ ವೀರ್ ನಿಖಿತ್ ಕುಮಾರ್ ವಂದಿಸಿದರು,ಶ್ರೀಮತಿ ಸ್ಮಿತಾ ಪ್ರಶಾಂತ್ ಶಾಂತಿ ಮಂತ್ರ ಪಠಿಸಿದರು, ವಿಶೇಷ ಖಾದ್ಯಗಳನ್ನು ಅಳದಂಗಡಿಯ ಸುನಿಲ್ ಕುಮಾರ್ ಜೈನ್ ತಯಾರಿಸಿದ್ದು ಎಲ್ಲರ ಪ್ರಶಂಸೆಗೆ ಪಾತ್ರರಾದರು.

Related posts

ಅಯೋಧ್ಯೆಯಲ್ಲಿ ಶ್ರೀ ರಾಮಚಂದ್ರನ ಪ್ರತಿಷ್ಠಾಪನೆಗೆ ಮೂಹೂರ್ತ ನಿಗದಿ: ಜ.21ರಿಂದ 3 ದಿನ ಕಾರ್ಯಕ್ರಮ: ಪ್ರಧಾನಿ ನರೇಂದ್ರ ಮೋದಿ ಸಹಿತ ಅನೇಕ ನಾಯಕರು ಭಾಗಿ

Suddi Udaya

ವಾಣಿ ಸೌಹಾರ್ದಕೋ ಆಪರೇಟಿವ್ ಸೊಸೈಟಿ ಮಹಾಸಭೆ

Suddi Udaya

ಹಳ್ಳಿಂಗೇರಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡಕ್ಕೆ ಶಿಲಾನ್ಯಾಸ

Suddi Udaya

ಕುತ್ಲೂರು: ಸೇತುವೆಗೆ ಅಡ್ದಲಾಗಿ ಬಿದ್ದಿದ್ದ ಮರದ ದಿಮ್ಮಿಯನ್ನು ತೆರವುಗೊಳಿಸಿದ ಶಿವಶಕ್ತಿ ಫ್ರೆಂಡ್ಸ್ ಕ್ಲಬ್ ನ ಯುವಕರು

Suddi Udaya

ವೇಣೂರಿನಲ್ಲಿ ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ ವತಿಯಿಂದ ದಶಲಕ್ಷಣ ಪರ್ವ ಆಚರಣೆ

Suddi Udaya

ಲೋಕಸಭಾ ಚುನಾವಣೆ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬೂತುವಾರು ಮತದಾನದ ವಿವರ

Suddi Udaya
error: Content is protected !!