ಧರ್ಮಸ್ಥಳ : ನಡುಗುಡ್ಡೆಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪತ್ತೆ: ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟ ಧರ್ಮಸ್ಥಳದ ಉರಗ ರಕ್ಷಕ ಸ್ನೇಕ್ ಪ್ರಕಾಶ್

Suddi Udaya

ಧರ್ಮಸ್ಥಳ ಗ್ರಾಮದ ನಡುಗುಡ್ಡೆ ಕೃಷ್ಣಪ್ಪ ಗೌಡ ರವರ ಮನೆಯಲ್ಲಿ ಬೃಹತ್ ಗಾತ್ರದ ಹೆಬ್ಬವೊಂದು ಪತ್ತೆಯಾದ ಘಟನೆ ರಾತ್ರಿ ಸುಮಾರು 11.30 ರ ಸಮಯದಲ್ಲಿ ನಡೆದಿದೆ.


ಮನೆಯ ಬೆಕ್ಕೊಂದನ್ನು ಹಿಡಿದು ನುಂಗುತಿರುವ ವೇಳೆ ಬೆಕ್ಕು ಕಿರುಚುವ ಶಬ್ದ ಕೇಳಿ ಮನೆಯವರು ಮನೆಯ ಹಿಂಬದಿಯಲ್ಲಿ ನೋಡಿದಾಗ ಹೆಬ್ಬಾವು ಬೆಕ್ಕನ್ನು ನುಂಗುತ್ತಿದ್ದು ತಕ್ಷಣವೇ ಧರ್ಮಸ್ಥಳದ ಉರಗ ರಕ್ಷಕರಾದ ಶೌರ್ಯ ವಿಪತ್ತು ನಿರ್ವಹಣಾ ತಂಡದ ಮಾಸ್ಟರ್ ಸ್ನೇಕ್ ಪ್ರಕಾಶ್ ರವರಿಗೆ ತಿಳಿಸಿದರು. ತಕ್ಷಣದಲ್ಲಿಯೇ ಮನೆಗೆ ಬಂದು ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿರುತ್ತಾರೆ,

ಸುಮಾರು (60) ಕೇಜಿ ತೂಕ ಇದ್ದ ಹೆಬ್ಬಾವು, ನಡುಗುಡ್ಡೆಯ ಸತೀಶ್ ಆಚಾರಿ, ದಿವಾಕರ, ಪೂವಪ್ಪ, ವಿಠಲ ಇವರೆಲ್ಲರೂ ಸಹಕರಿಸಿದರು.

Leave a Comment

error: Content is protected !!