April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಶಿಬಾಜೆ ಗ್ರಾ.ಪಂ. ಪ್ರಥಮ ಸುತ್ತಿನ ಗ್ರಾಮಸಭೆ

ಶಿಬಾಜೆ ಗ್ರಾಮ ಪಂಚಾಯತ್ ನ 2024-25ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಆ. 13ರಂದು ರಾಜೀವ ಗಾಂಧಿ ಸೇವಾ ಕೇಂದ್ರ ಪೆರ್ಲದಲ್ಲಿ ಪಂಚಾಯತ್ ಅಧ್ಯಕ್ಷರಾದ ರತ್ನ ಬಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.


ಗ್ರಾಮಸಭೆಯ ಮಾರ್ಗದರ್ಶಿ ಅಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆಯ ಹೇಮಲತಾ ರವರು ಭಾಗವಹಿಸಿದ್ದರು.

ಹಲವು ವರ್ಷಗಳಿಂದ ಪಂಚಾಯತ್ ನಲ್ಲಿ ಪಂಪ್ ಆಪರೇಟರ್ ಆಗಿ ಕೆಲಸ ನಿರ್ವಹಿಸಿ ಇದೆ ತಿಂಗಳು ನಿವೃತ್ತಿ ಹೊಂದಲಿರುವ ಸೇಸಪ್ಪ ಗೌಡ ರವರನ್ನು ಸನ್ಮಾನಿಸಲಾಯಿತು.

ಬೇರೆ ಬೇರೆ ಇಲಾಖೆಯ ಅಧಿಕಾರಿಗಳು ಇಲಾಖೆಯಿಂದ ಸಿಗುವ ಸೌಲಭ್ಯಗಳ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷ ದಿನಕರ್ ಕುರುಪ್, ನಿಕಟ ಪೂರ್ವ ಉಪಾಧ್ಯಕ್ಷರಾದ ವಿನಯಚಂದ್ರ ಟಿ, ಸದಸ್ಯರುಗಳಾದ ವನಿತಾ ವಿ ಶೆಟ್ಟಿಗಾರ್, ಯಮುನಾ ಹಾಗೂ ಗ್ರಾಮಲೆಕ್ಕಾಧಿಕಾರಿ ತೇಜಸ್ವಿ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನಾಡ ಗೀತೆಯನ್ನು ಓಂಕಾರ ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯರು ಹಾಡಿದರು. ಸ್ವಾಗತ ಮತ್ತು ವರದಿಯನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯರಾಜ್ ನೆರವೇರಿಸಿದರು.

Related posts

ಮಡಂತ್ಯಾರು: ಬುಲೆಟ್ ಟ್ಯಾಂಕರ್ ಮತ್ತು ಓಮ್ನಿ ಕಾರ್ ಮುಖಾಮುಖಿ ಡಿಕ್ಕಿ

Suddi Udaya

ಚಂದ್ರನ ಮೇಲೆ ಸ್ಪರ್ಶ, ಎಕ್ಸೆಲ್ ನಲ್ಲಿ ಹರ್ಷ

Suddi Udaya

ಬೆಳ್ತಂಗಡಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಪ್ರಖಂಡ ಮತ್ತು ಘಟಕ ಸಮಿತಿಗಳ ಸಮಾಲೋಚನಾ ಬೈಠಕ್

Suddi Udaya

ಮುಂಡಾಜೆ ಬಂಟರ ಗ್ರಾಮ ಸಮಿತಿಯಿಂದ ಆಟಿದ ಕೂಟ

Suddi Udaya

ಆರಂಬೋಡಿ : ಬಡ ಕುಟುಂಬಕ್ಕೆ ಶೌಚಾಲಯ ನಿರ್ಮಿಸಿಕೊಟ್ಟ ಕಿರಣ್ ಕುಮಾರ್ ಮಂಜಿಲ: ಗ್ರಾಮಸ್ಥರಿಂದ ಮೆಚ್ಚುಗೆ

Suddi Udaya

ಗುರುವಾಯನಕೆರೆ: ಸುಪ್ರಿಂ ಎಲೆಕ್ಟ್ರಾನಿಕ್ ನಲ್ಲಿ ದೀಪಾವಳಿ ಪ್ರಯುಕ್ತ ಭರ್ಜರಿ ಡಿಸ್ಕೌಂಟ್ ಸೇಲ್

Suddi Udaya
error: Content is protected !!