ವೇಣೂರು ದೇವಾಡಿಗರ ಸೇವಾ ವೇದಿಕೆ ಹಾಗೂ ದೇವಾಡಿಗರ ಮಹಿಳಾ ವೇದಿಕೆ ವೇಣೂರು ಇವರ ಜಂಟಿ ಆಶ್ರಯದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮವು ಆ.11 ರಂದು ನಿಟ್ಟಡೆ-ವೇಣೂರು ದೇವಾಡಿಗರ ಸಮುದಾಯ ಭವನದಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ಕಳಸಕ್ಕೆ ಭತ್ತ ಹಾಕುವ ಮೂಲಕ ಧರ್ಮಸ್ಥಳ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ನಿವೃತ್ತ ಪ್ರಬಂಧಕರು ಶೀನ ದೇವಾಡಿಗ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅಧ್ಯಕ್ಷತೆಯನ್ನು ವೇಣೂರು ದೇವಾಡಿಗರ ಸೇವಾ ವೇದಿಕೆಯ ಗೌರವಾಧ್ಯಕ್ಷ ಸುಂದರ ಎಂ. ದೇವಾಡಿಗ ವಹಿಸಿದರು.
ನಡ ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರು ಚಂದ್ರಶೇಖರ್, ರವರು ಆಟಿಯ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಗಳಾಗಿ ಪಂಚಾಯತು ಅಭಿವೃದ್ಧಿ ಅಧಿಕಾರಿ, ಬೆಳ್ತಂಗಡಿ ಅಶೋಕ್ ದೇವಾಡಿಗ ಕಾಂಜರಕಟ್ಟೆ, ವೇಣೂರು ದೇವಾಡಿಗರ ಮಹಿಳಾ ವೇದಿಕೆ ಅಧ್ಯಕ್ಷೆ ಶ್ರೀಮತಿ ಸುಮತಿ ಪಿ.ಎನ್, ಬೆಳ್ತಂಗಡಿ ಹಿಂದುಳಿದ ವರ್ಗಗಳ ವಿಭಾಗ ಅಧ್ಯಕ್ಷ ದಯಾನಂದ ದೇವಾಡಿಗ ಉಪಸ್ಥಿತರಿದ್ದರು,
ಈ ವೇಳೆ ದೇವಾಡಿಗರ ಸೇವಾ ವೇದಿಕೆ ವಲಯ ಹಾಗೂ ದೇವಾಡಿಗರ ಮಹಿಳಾ ವೇದಿಕೆಯ ಎಲ್ಲ ಪದಾಧಿಕಾರಿಗಳು, ಬಾಂಧವರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಭಜನಾ ಕಾರ್ಯಕ್ರಮ ನಡೆಯಿತು. ಆಟಿಯ ತಿಂಡಿ ತಿನಸುಗಳ ಪ್ರದರ್ಶನ, ಆಟಿಯ ಆಟೋಟ ಸ್ಪರ್ಧೆಗಳು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ವೇಣೂರು ದೇವಾಡಿಗರ ಸೇವಾ ವೇದಿಕೆ ಅಧ್ಯಕ್ಷ ಸುರೇಶ್ ಮೊಯಿಲಿ ಸ್ವಾಗತಿಸಿದರು. ಶ್ರೀಮತಿ ಶ್ವೇತಾ ಅಶೋಕ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ವೇಣೂರು ದೇವಾಡಿಗರ ಮಹಿಳಾ ವೇದಿಕೆ ಅಧ್ಯಕ್ಷೆ ಶ್ರೀಮತಿ ಸುಮತಿ ಪಿ. ಯನ್ ಧನ್ಯವಾದವಿತ್ತರು.