25.7 C
ಪುತ್ತೂರು, ಬೆಳ್ತಂಗಡಿ
May 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಉಜಿರೆ: ಮಳೆಯಿಂದ ಹಾನಿಯಾದ ಸ್ಥಳಕ್ಕೆ ಶಾಸಕ ಹರೀಶ್ ಪೂಂಜ ಭೇಟಿ, ಪರಿಶೀಲನೆ

ಉಜಿರೆ : ಉಜಿರೆ ಗ್ರಾಮದ ಯಳಚಿತ್ತಾಯ ನಗರ ನಿವಾಸಿ ಜಗದೀಶ್ ಆಚಾರ್ಯ ಅವರ ಮನೆಗೆ ಇತ್ತೀಚೆಗೆ ಬಂದ ವಿಪರೀತ ಮಳೆಗೆ ಗುಡ್ಡ ಕುಸಿದು ವಾಸ್ತವ್ಯ ಮನೆಗೆ ಹಾನಿಯಾಗಿತ್ತು. ಹಾಗೂ ಲಕ್ಷ್ಮಣ ಇವರ ಮನೆಯ ಹಿಂಭಾಗ ಗುಡ್ಡ ಕುಸಿದು ಅಪಾಯದ ಮುನ್ಸೂಚನೆಯಲ್ಲಿದ್ದು ಆಗಸ್ಟ್ 14 ರಂದು ಸ್ಥಳಕ್ಕೆ ಶಾಸಕ ಹರೀಶ್ ಪೂಂಜಾ ಬೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಮಂಡಲ ಬಿಜೆಪಿ ಅಧ್ಯಕ್ಷರಾದ ಶ್ರೀನಿವಾಸ್ ರಾವ್, ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ್ ಪಾರೆಂಕಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಜಯಂತ್ ಕೋಟ್ಯಾನ್, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾಕಿರಣ್ ಕಾರಂತ್, ಉಪಾಧ್ಯಕ್ಷರಾದ ರವಿ ಬರಮೇಲು, ಸದಸ್ಯರಾದ ಶಶಿಕಲಾ ದೇವಪ್ಪ ಗೌಡ, ಜಗನ್ನಾಥ ರೈ, ಉಜಿರೆ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ನಿರಂಜನ ಶೆಟ್ಟಿ, ವಾರ್ಡ್ ಅಧ್ಯಕ್ಷರಾದ ಅಶ್ವಿನಿ ಹಾಗೂ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

ಮುಂಡಾಜೆ ಪ್ರೌಢಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya

ಮಚ್ಚಿನ ಅಂಗನವಾಡಿ ಕೇಂದ್ರದಲ್ಲಿ ಪರಿಸರ ದಿನಾಚರಣೆ

Suddi Udaya

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ: ಮೂರು ಅರ್ಜಿಗಳನ್ನು ವಜಾಗೊಳಿಸಿದ ಹೈಕೋರ್ಟ್

Suddi Udaya

ಜ್ವರದಿಂದ ಬಳಲಿ ಗಂಡಿಬಾಗಿಲಿನ ಯುವತಿ ಸಾವು

Suddi Udaya

ಬಂದಾರು ಸರಕಾರಿ ಶಾಲೆಯಲ್ಲಿ ಪೋಷಕರಿಂದ ಶ್ರಮದಾನ

Suddi Udaya

ಲಾಯಿಲ ಪ್ರಸನ್ನ ಪ.ಪೂ. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ತರಬೇತಿ

Suddi Udaya
error: Content is protected !!