ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಲ್ಪಾಡಿಯಲ್ಲಿ 78ನೇ ಸ್ವಾತಂತ್ರ್ಯದಿನಾಚರಣೆ

Suddi Udaya

ಬೆಳಾಲು: ಇಲ್ಲಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಲ್ಪಾಡಿಯಲ್ಲಿ 78ನೇ ಸ್ವಾತಂತ್ರ್ಯದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಮಾಧವ ಗೌಡ ಓಣಾಜೆ ಧ್ವಜಾರೋಹಣ ನೆರವೇರಿಸಿದರು.ನಂತರ ವಿದ್ಯಾರ್ಥಿಗಳು,ಪೋಷಕರು ಮೆರವಣಿಗೆಯ ಮೂಲಕ ಸಾಗಿ ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಮಡಿದ ನಾಯಕರಿಗೆ ಜೈಕಾರ ಕೂಗಿದರು. ನಂತರ ನಡೆದ ಸಭಾ ಕಾರ್ಯಕ್ರಮ ದಲ್ಲಿ ಶಾಲೆಗೆ ವಿವಿಧ ಕೊಡುಗೆಗಳನ್ನು ನೀಡಿದ ದಾನಿಗಳನ್ನು ಗೌರವಿಸಲಾಯಿತು. ಶಾಲೆಗೆ ಪ್ರಿಂಟರ್ ಕೊಡುಗೆ ನೀಡಿದ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯ ಧರ್ಮದರ್ಶಿಗಳಾದ ಹರೀಶ್ ಗೌಡ,ಬ್ಯಾಂಡ್ ಸೆಟ್ ದಾನಿಗಳಾದ ಯೋಗೀಶ್ ಗೌಡ ಸೌತೆಗದ್ದೆ,ಕಂಪ್ಯೂಟರ್ ದಾನಿಗಳಾದ ವಿಜಯ ಗೌಡ ಸೌತೆಗದ್ದೆ,ಸ್ಟೀಲ್ ತಟ್ಟೆ ಮತ್ತು ಲೋಟ ದಾನಿಗಳಾದ ಜಯಣ್ಣ ಗೌಡ ಮಿನಂದೇಲು ಮತ್ತು ರಂಜನ್ ಗೌಡ ಪನ್ನಾಜೆ ಇವರುಗಳನ್ನು ಶಾಲಾ ಪರವಾಗಿ ಗೌರವಿಸಲಾಯಿತು. ವೇದಿಕೆಯಲ್ಲಿ ಗ್ರಾ.ಪಂ.ಸದಸ್ಯರಾದ ಕೃಷ್ಣಯ್ಯ ಆಚಾರ್ಯ,ಸಿ.ಆರ್.ಪಿ.ಶ್ರೀಮತಿ ಪ್ರತಿಮ,ಎಸ್‌.ಕೆ.ಡಿ.ಆರ್.ಪಿ.ಯ ಸೇವಾ ಪ್ರತಿನಿಧಿ ಶ್ರೀಮತಿ ಪ್ರಮೀಳಾ,
ಎಸ್.ಡಿ.ಎಂ.ಸಿ.ಉಪಾಧ್ಯಕ್ಷೆ ಶ್ರೀಮತಿ ಲೇಖಾವತಿ,ಶಾಲಾ ನಾಯಕ ಮನ್ವಿತ್ ಎಂ.ಎಸ್. ಉಪಸ್ಥಿತರಿದ್ದರು.
ಜ್ಙಾನದೀಪ ಶಿಕ್ಷಕರಾದ ಕರಿಯಣ್ಣ ಗೌಡ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಸುರೇಶ್ ಎಂ ವಂದಿಸಿದರು.ಅತಿಥಿ ಶಿಕ್ಷಕಿ ಶ್ರೀಮತಿ ಹರಿಣಾಕ್ಷಿ ಎನ್ ನಿರೂಪಿಸಿದರು.ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು,ಸಿಹಿಯೂಟದೊಂದಿಗೆ ಸಂಪನ್ನಗೊಂಡಿತು.

Leave a Comment

error: Content is protected !!