September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೌದ್ಧ ಮಹಾಸಭಾ ಮಾಲಾಡಿ ಇದರ ವತಿಯಿಂದ ಬುದ್ಧ ಪೂರ್ಣಿಮೆ ಆಚರಣೆ

ಮಾಲಾಡಿ: ಬೌದ್ಧ ಮಹಾಸಭಾ ಮಾಲಾಡಿ ಇದರ ವತಿಯಿಂದ ಮೇ 12 ರಂದು ಮಾಲಾಡಿ ಅಂಬೇಡ್ಕರ್ ಭವನದಲ್ಲಿ ಪವಿತ್ರ ಬುದ್ಧ ಪೂರ್ಣಿಮೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ‌

ಬೌದ್ಧ ಮಹಾಸಭಾದ ಅಧ್ಯಕ್ಷ ಸುನೀಲ್ ಮಾಲಾಡಿ ಹಾಗೂ ಅದೇ ದಿನ 25 ನೇ ವರ್ಷದ ಮದುವೆ ದಿನದ ಸಂಭ್ರಮದಲ್ಲಿದ್ದ ಗುಲಾಬಿ ಆನಂದ ದಂಪತಿಗಳು ಭಗವಾನ್ ಬುದ್ಧನ ಮೂರ್ತಿಯ ಎದುರು ಕ್ಯಾಂಡಲ್ ಉರಿಸಿ ಚಾಲನೆ ನೀಡಿದರು. ಹಿರಿಯರಾದ ಬಿ.ಕೆ.ಚೆನ್ನಪ್ಪ ಹಾಗೂ ಕೇಶವ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.‌

ಕಿರಿಯರಾದ ಪ್ರಣಮ್ ಶರಣ್ ಸುಜ್ನಾತ್ ಹಾಗೂ ಶ್ರವಣ್ ದೀಪ ಬೆಳಗಿಸಿದರು.‌ ಬಳಿಕ ಹಿರಿಯ ಉಪಾಸಕರಾದ ಬಾಬಿ ಮಡಂತ್ಯಾರು ಇವರು ಬುದ್ಧವಂದನೆ, ಧಮ್ಮವಂದನೆ ಹಾಗೂ ಸಂಘವಂದನೆಯನ್ನು ನಡೆಸಿಕೊಟ್ಟರು. ಸುಕೇಶ್ ಕೆ ಸ್ವಾಗತಿಸಿದರು.

Related posts

ಎ.30-ಮೇ.3: ಮಾನ್ಯ ಸತ್ಯಚಾವಡಿ ತರವಾಡು ಮನೆಯ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ: ಸಮಾಲೋಚನೆ ಸಭೆ, ಭರದಿಂದ ಸಾಗುತ್ತಿದೆ ಜೀರ್ಣೋದ್ಧಾರ ಕೆಲಸ

Suddi Udaya

ಕಿಲ್ಲೂರು ಎನ್ನೆಸ್ಸೆಸ್ ಶಿಬಿರದ ಸ್ಥಳೀಯ ಸಮಿತಿ ರಚನೆ

Suddi Udaya

ಜ.16-25: ಕಾಜೂರು ಮಖಾಂ ಉರೂಸ್: ಶಾಂತಿ ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ಪೊಲೀಸ್ ಇಲಾಖೆ ಜೊತೆ ಸಮನ್ವಯ ಸಭೆ

Suddi Udaya

ಡಾ| ವೀಣಾ ಬನ್ನಂಜೆ ಅವರಿಂದ ಸಂಪೂರ್ಣ ರಾಮಾಯಣ ಪ್ರವಚನ ಸಪ್ತಾಹ

Suddi Udaya

ರಸ್ತೆಯಲ್ಲೇ ಹರಿದ ಮಳೆ ನೀರು: ಶಾಸಕ ಹರೀಶ್ ಪೂಂಜರಿಂದ ತುರ್ತು ಸ್ಪಂದನೆ , ಚರಂಡಿ ದುರಸ್ತಿ

Suddi Udaya

ಶ್ರೀ ಧ.ಮಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದ ನೂತನ ಪ್ರಾಂಶುಪಾಲರಾಗಿ ಡಾ. ಶಿವಪ್ರಸಾದ್ ಶೆಟ್ಟಿಆಯ್ಕೆ

Suddi Udaya
error: Content is protected !!