24.4 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿ

78ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸೋಶಿಯಲ್ ಡೆಮೋಕ್ರಟಿಕ್ ಟ್ರೇಡ್ ಯೂನಿಯನ್ ಹಳೆಪೇಟೆ, ಉಜಿರೆ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ

ಉಜಿರೆ: ಆಗಸ್ಟ್ 15 ಗುರವಾರ 78 ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸೋಶಿಯಲ್ ಡೆಮೋಕ್ರಟಿಕ್ ಟ್ರೇಡ್ ಯೂನಿಯನ್ ಹಳೆಪೇಟೆ, ಉಜಿರೆ ಇದರ ವತಿಯಿಂದ ಟಿ. ಬಿ. ಕ್ರಾಸ್ ಜಂಕ್ಷನಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.ಶರೀಫ್ ಎಸ್. ಎಂ (ಅಧ್ಯಕ್ಷರು SDTU ಹಳೆಪೇಟೆ ಉಜಿರೆ) ಹಾಗೂ ಹಿರಿಯರ ಸಮ್ಮುಖದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ಶರೀಫ್ ಎಸ್. ಎಂ (ಅಧ್ಯಕ್ಷರು SDTU ಹಳೆಪೇಟೆ ಉಜಿರೆ) ಬಂದಂತಹ ಎಲ್ಲಾ ಅಥಿತಿಗಳನ್ನು ಮರ್ಷಾದ್ ಉಜಿರೆ ಸ್ವಾಗತಿಸಿ, ಯಸಿರ್ ಫಾಝಿಲ್ ಅಲ್ ಫುರ್ಕಾನಿ (ಮುದರ್ರಿಸರು ಹಾಗೂ ಖತೀಬರು ಎಂ. ಜೆ. ಎಂ ಹಳೆಪೇಟೆ-ಉಜಿರೆ) ಹಿತನುಡಿಗಳೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಖಾದರ್ ಫರಂಗಿಪೇಟೆ (SDTU ರಾಜ್ಯ ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ) ಹಾಗೂ ಶರೀಫ್ ಬೆಳಾಲು ( ಸಾಮಾಜಿಕ ಚಿಂತಕರು, ಮಾಜಿ ಅಧ್ಯಕ್ಷರು-ಚುಟುಕು ಸಾಹಿತ್ಯ ಅಕೇಡೆಮಿ ಬೆಳ್ತಂಗಡಿ ತಾಲೂಕು) ಸಂದೇಶ ಮಾತುಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಸಾಲಿಹ್ ಮದ್ದಡ್ಕ (ಅಧ್ಯಕ್ಷರು, ಎಸ್. ಡಿ. ಟಿ. ಯೂ ಬೆಳ್ತಂಗಡಿ ಘಟಕ) ಡಾ. ಸೂರ್ಯ ನಾರಾಯಣ (ಚೇತನಾ ಕ್ಲಿನಿಕ್ ಟಿ. ಬಿ. ಕ್ರಾಸ್) ರಫೀಕ್ ಮುಗುಳಿ, ರಶೀದ್ ಶಾಮಿಯಾನ (ಉದ್ಯಮಿಗಳು),ಅಲ್ ಬುಖಾರಿ ಜುಮಾ ಮಸ್ಜಿದ್ ಮಾಜಿ ಅಧ್ಯಕ್ಷರಾದ ಮುಹಮ್ಮದ್ ಕತ್ತಾರ್,ಸಾರ್ವಜನಿಕರು ಹಾಗೂ ಹಿರಿಯರು ಉಪಸ್ಥಿತರಿದ್ದರು.ಹಾಗೂ ವೇದಿಕೆಯಲ್ಲಿ ಇದ್ದಂತಹ ಎಲ್ಲ ಅತಿಥಿಗಳಿಗೆ SDTU ಹಳೆಪೇಟೆ ಸಮಿತಿ ವತಿಯಿಂದ ಸನ್ಮಾನಿಸಲಾಯಿತು .ಕೊನೆಯದಾಗಿ ಸಹಲ್ ನೀರ್ಸಾಲ್ ಧನ್ಯವಾದ ಮಾಡಿದರು.

Related posts

ಹೊಸಂಗಡಿ ಗ್ರಾಮ ಪಂಚಾಯತ್ ನಲ್ಲಿ ವಿಶೇಷ ಚೇತನರ ಸಮನ್ವಯ ಗ್ರಾಮ ಸಭೆ

Suddi Udaya

ಪುತ್ತಿಲ ಹೇರಾಜೆ ಶ್ರೀ ವಿಘ್ನೇಶ್ವರ ಭಜನಾ ಮಂಡಳಿ ಯಿಂದ ಮದೂರು ಶ್ರೀ ಮದನಂತೇಶ್ವರ ದೇವಸ್ಥಾನದಲ್ಲಿ ಭಜನಾ ಸೇವೆ

Suddi Udaya

ಗೃಹಲಕ್ಷ್ಮೀ ಯೋಜನೆ: ಬ್ಯಾಂಕ್‌ಖಾತೆಗೆ ಆಧಾರ್ ಜೋಡಣೆ ಪರಿಶೀಲನೆ ; ಕೊಕ್ಕಡ ಗ್ರಾ.ಪಂದಲ್ಲಿ ನಡೆದ ಕಾರ್ಯಕ್ರಮದ ಮಾಹಿತಿ ನೀಡದಿರುವುದನ್ನು ವಿರೋಧಿಸಿ, ಪಂಚಾಯತು ಎದುರು ಅಧ್ಯಕ್ಷ-ಉಪಾಧ್ಯಕ್ಷ ಸದಸ್ಯರ ಪ್ರತಿಭಟನೆ

Suddi Udaya

ನಡ ಗ್ರಾ.ಪಂ ನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ತಯಾರಿ ಬಗ್ಗೆ ವಿಶೇಷ ಗ್ರಾಮ ಸಭೆ

Suddi Udaya

ಕೊಕ್ಕಡ : ಗಾಳಿ ಮಳೆಗೆ ಹಾರಿ ಹೋದ ಮನೆಯ ಛಾವಣಿ

Suddi Udaya

ಮುಂಡಾಜೆ ಹಾ.ಉ. ಸ. ಸಂಘದ ಕಾರ್‍ಯದರ್ಶಿ ದಿ| ಅಶೋಕ್ ಕುಮಾರ್ ರಿಗೆ ಶ್ರದ್ಧಾಂಜಲಿ ಸಭೆ

Suddi Udaya
error: Content is protected !!