ಉಜಿರೆ: 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಆಸ್ಪತ್ರೆ ಶಾಂತಿವನದಲ್ಲಿ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಪ್ರಖ್ಯಾತ ಕಿರುತೆರೆ ಚಲನಚಿತ್ರ ನಟಿ ದೀಪಿಕಾ ದಾಸ್ ಭಾಗವಹಿಸಿ ಮಾತನಾಡಿ ಈ ದೇಶಕ್ಕೆ ಸ್ವತಂತ್ರ ಸಿಗುವಲ್ಲಿ ನಮ್ಮ ವೀರ ಯೋಧರ ತ್ಯಾಗ ಬಲಿದಾನದ ಬಗ್ಗೆ ಮಾತನಾಡಿದರು ಹಾಗೂ ಸ್ವಾತಂತ್ರದ ಮಹತ್ವ ಅದರಿಂದ ದೇಶ ಅಭಿವೃದ್ಧಿ ಹೊಂದುತ್ತಿರುವ ಬಗ್ಗೆ ಹಾಗೂ ಶಾಂತಿವನ ಪ್ರಕೃತಿ ಚಿಕಿತ್ಸೆಯ ಬಗ್ಗೆ ಮಾತನಾಡುತ್ತ ಶಾಂತಿವನದ ಸೇವೆ ಹಾಗೂ ಶಾಂತಿವನದ ವೈದ್ಯಧಿಕಾರಿಗಳು, ಕಲಿಕಾ ವೈದ್ಯರು, ಸ್ನಾತಕೋತ್ತರ ವೈದ್ಯರು ಹಾಗೂ ಚಿಕಿತ್ಸೆಕರ ನಿಸ್ವಾರ್ಥ ಸೇವೆಯನ್ನು ಹಾಗೂ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಪ್ರಕೃತಿ ಚಿಕಿತ್ಸೆಯ ಕೊಡುಗೆಯನ್ನು ಕೊಂಡಾಡಿದರು.
ಕಾರ್ಯಕ್ರಮದಲ್ಲಿ ದೀಪಿಕಾ ದಾಸ್ ರವರ ಸಹಪಾಠಿ ತಾಯಿಬಾರವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಯೋಗ ನೈತಿಕ ಶಿಕ್ಷಣದ ನಿರ್ದೇಶಕ ಡಾ| ಶಶಿಕಾಂತ್ ಜೈನ, ಶಾಂತಿವನದ ಆಡಳಿತಧಿಕಾರಿ ಜಗನ್ನಾಥ, ಆಸ್ಪತ್ರೆಯ ವೈದ್ಯ ಸಿಬ್ಬಂದಿಗಳು, ಕಲಿಕಾ ವೈದ್ಯರು, ಸ್ನಾತಕೋತ್ತರ ವಿದ್ಯಾರ್ಥಿಗಳು, ಚಿಕಿತ್ಸೆಕ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಶಾಂತಿವನದ ಮುಖ್ಯ ವೈದ್ಯಾಧಿಕಾರಿ ಡಾ| ಶಿವಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ವೈದ್ಯಾಧಿಕಾರಿಗಳಾದ ಡಾ. ಬಿಂದು ಮುಖ್ಯ ಅತಿಥಿಗಳ ಬಗ್ಗೆ ಪರಿಚಯವನ್ನು ಮಾಡಿದರು. ಡಾ. ಶಶಿಕಿರಣ್ ವಂದಿಸಿದರು.