38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಬೆಳ್ತಂಗಡಿ ಡಿ.ಕೆ.ಆರ್.ಡಿ.ಎಸ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

ಬೆಳ್ತಂಗಡಿ: ಡಿ.ಕೆ.ಆರ್.ಡಿ.ಎಸ್ ಬೆಳ್ತಂಗಡಿ, ಇದರ ನೇತೃತ್ವದಲ್ಲಿ ಹೆಚ್.ಐ.ವಿ/ಏಡ್ಸ್ ಸೋಂಕಿತ ಹಾಗೂ ಬಾಧಿತ ವ್ಯಕ್ತಿಗಳಿಗೋಸ್ಕರ ನಡೆಸುತ್ತಿರುವ ನವಜೀವನ ಆರೈಕೆ ಹಾಗೂ ಬೆಂಬಲ ಕಾರ್ಯಕ್ರಮ ಇದರ ಅಡಿಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮವನ್ನು ಎಸ್.ಎಂ.ವೈ.ಎಂ ಧರ್ಮಪ್ರಾಂತ್ಯ ಬೆಳ್ತಂಗಡಿ, ಕೃಪ ಸ್ವ-ಸಹಾಯ ಸಂಘ ತೋಟತ್ತಾಡಿ ಇವುಗಳ ಸಹಕಾರದೊಂದಿಗೆ ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಎಸ್.ಎಂ.ವೈ .ಎಂ, ಮಾತೃವೇದಿ, ಫ್ಯಾಮಿಲಿ ಅಪೋಸ್ಟೆಲೆಟ್ ಬೆಳ್ತಂಗಡಿ ಸಂಘಟನೆಗಳ ನಿರ್ದೇಶಕ ವಂ.ಫಾದರ್ ಜೋಬಿ ಪುಲ್ಲಾಟ್ ಶೋಷಿತ ವರ್ಗದವರಿಗೋಸ್ಕರ ಸಂಸ್ಥೆಯು ಮಾಡುತ್ತಿರುವ ಕೆಲಸ ಕಾರ್ಯಗಳನ್ನು ಅಭಿನಂದಿಸುತ್ತಾ, ಜೀವನದಲ್ಲಿ ಪರಸ್ಪರ ಜೊತೆಯಾಗಿ ನಿಲ್ಲುವ ಮೂಲಕ ವಂಚಿತರಾಗುತ್ತಿರುವ ವ್ಯಕ್ತಿಗಳ ಹಕ್ಕುಗಳಿಗೋಸ್ಕರ ಪ್ರವೃತಿಸಬೇಕೆಂದು ಕರೆ ನೀಡಿದರು.

ನೂತನವಾಗಿ ಎಸ್.ಎಂ.ವೈ.ಎಂ ಬೆಳ್ತಂಗಡಿ ಧರ್ಮಪ್ರಂತ್ಯದ ಅಧ್ಯಕ್ಷ ಸಿರಿನ್ ತೋಮಸ್ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮರನ್ನು ಸ್ಮರಿಸುತ್ತಾ, ಭಾರತೀಯರು ನಿಷ್ಠಾವಂತ ಪ್ರಜೆಗಳಾಗಿ ಬದುಕುವ ಮೂಲಕ ಸಮಾಜದ ಯಶಸ್ವಿಗೆ ಕಾರಣರಾಗಬೇಕು ಎಂದು ಕರೆ ನೀಡಿದರು.

ಕೃಪ ಸಂಘ ತೋಟತ್ತಾಡಿ ಇದರ ಅಧ್ಯಕ್ಷೆ ಶ್ರೀಮತಿ ಜಯ ಇವರ ನೇತತ್ವದಲ್ಲಿ ಕಾರ್ಯಕ್ರಮದ ಊಟದ ವ್ಯವಸ್ಥೆಗೆ ಆರ್ಥಿಕ ನೆರವನ್ನು ನೀಡಿ ಶುಭಹಾರೈಸಿದರು. ಅತಿಥಿ ಗಣ್ಯರು ಜತೆ ಸೇರಿ ಪೌಷ್ಟಿಕ ಆಹಾರದ ಕಿಟ್ಟ್‌ಗಳನ್ನು ವಿತರಿಸಿದರು.

ಎಸ್.ಎಂ.ವೈ.ಎಂ.ಬೆಳ್ತಂಗಡಿ, ಹಾಗೂ ನವಜೀವನ ಸಂಘದ ಸದಸ್ಯರಿಂದ ದೇಶಭಕ್ತಿ ಗೀತೆಗಳನ್ನು ಹಾಡಲಾಯಿತು. ಸಂಸ್ಥೆಯ ನಿರ್ದೇಶಕ ವಂ. ಫಾ. ಬಿನೋಯಿ ಎ.ಜೆ ದೇಶಕೋಸ್ಕರ ನಮ್ಮತನದ ಕೊಡುಗೆಗಳನ್ನು ನೀಡುವ ಮೂಲಕ ರಾಷ್ಟ್ರ ನಿರ್ಮಾಣದ ವಿನೂತನ ಹೆಜ್ಜೆಗಳನ್ನು ಇಡಲು ಶ್ರಮಿಸಬೇಕೆಂದು ಕರೆ ನೀಡುತ್ತಾ ಪ್ರಾಸ್ತಾವಿಕ ನುಡಿಯನ್ನಾಡಿದರು.

ಪುಷ್ಪರಾಜ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ನವ ಜೀವನ ಬೆಂಬಲ ಕಾರ್ಯಕ್ರಮದ ಸದಸ್ಯೆ ಶ್ರೀಮತಿ ಶಾರದಾ ಪ್ರಾರ್ಥನೆ ಹಾಡಿದರು. ಎಂ.ಎಸ್.ಡಬ್ಲ್ಯೂ ವಿದ್ಯಾರ್ಥಿ ಭರತ್ ಸ್ವಾಗತಿಸಿದರು. ಡಿ.ಕೆ.ಆರ್.ಡಿ.ಎಸ್ ಬೆಳ್ತಂಗಡಿ ಕಾರ್ಯಕರ್ತ ಜಾನ್ಸನ್ ವಂದಿಸಿದರು. ಸಂಯೋಜಕಿ ಶ್ರೇಯ ಕಾರ್ಯಕ್ರಮ ನಿರೂಪಿಸಿದರು.

Related posts

ಕಲ್ಮಂಜ: ನಿಡಿಗಲ್ ನಿವಾಸಿ ರಾಜು ಮಡಿವಾಳ ನಿಧನ

Suddi Udaya

ಶ್ರೀ ಶಿಶಿಲೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಸಭೆಗೆ ಸದಸ್ಯರ ಗೈರು

Suddi Udaya

ಬಳ್ಳಮಂಜ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮೇಷ ಜಾತ್ರೆಗೆ ಚಾಲನೆ

Suddi Udaya

ಜಿಲ್ಲಾ ಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕರ ಮ್ಯಾಟ್ ಕಬಡ್ಡಿ ಪಂದ್ಯಾಟ : ಹೊಸಂಗಡಿ ಇಂದಿರಾಗಾಂಧಿ ವಸತಿ ಶಾಲೆಗೆ ಪ್ರಶಸ್ತಿ

Suddi Udaya

ಸೌಜನ್ಯ ಕೊಲೆ ಪ್ರಕರಣ: ಮೊಗ್ರು, ಬಂದಾರು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ

Suddi Udaya

ರಸ್ತೆಯಲ್ಲಿ ನಿಂತ ಮಳೆ ನೀರನ್ನು ಹಾರೆ ಹಿಡಿದು ಚರಂಡಿಗೆ ಬಿಡಿಸಿಕೊಟ್ಟತೆಕ್ಕಾರು ಗ್ರಾ.ಪಂ.ಸದಸ್ಯ ಅಬ್ದುಲ್ ರಝಾಕ್

Suddi Udaya
error: Content is protected !!