April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಡಿರುದ್ಯಾವರ ಆನೆ ಸಂತ್ರಸ್ತರ ಹೋರಾಟ ಸಮಿತಿಯಿಂದ ಕಾಡಂಚಿನಲ್ಲಿ ಆನೆಕಂದಕ ಮತ್ತು ಸೋಲಾರ್ ವಿದ್ಯುತ್ ಬೇಲಿ ರಚನೆಯ ಬೇಡಿಕೆಗೆ ಮನವಿ

ಕಡಿರುದ್ಯಾವರ : ಆನೆ ಸಂತ್ರಸ್ತರ ಹೋರಾಟ ಸಮಿತಿ ಕಡಿರುದ್ಯಾವರ ಗ್ರಾಮ ಇದರ ವತಿಯಿಂದ ಕಡಿರುದ್ಯಾವರ ಗ್ರಾಮದಲ್ಲಿ ಕಾಡಾನೆ ಉಪಟಳವನ್ನು ಶಾಶ್ವತವಾಗಿ ತಪ್ಪಿಸುವ ಸಲುವಾಗಿ ಕಾಡಂಚಿನಲ್ಲಿ ಆನೆಕಂದಕ ಮತ್ತು ಸೋಲಾರ್ ವಿದ್ಯುತ್ ಬೇಲಿ ರಚನೆ ಮಾಡುವ ಮುಖ್ಯ ಬೇಡಿಕೆಯೊಂದಿಗೆ ಇನ್ನೂ ಅನೇಕ ಬೇಡಿಕೆಗಳೊಂದಿಗೆ ಶಾಸಕ ಹರೀಶ್ ಪೂಂಜಾ ಇವರಿಗೆ, ಕೆ.ಪಿ.ಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಇವರಿಗೆ ಹಾಗೂ ವಲಯ ಅರಣ್ಯಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಸಂತೋಷ್ ಗೌಡ ವಳಂಬ್ರ, ಪಧಾನ ಕಾರ್ಯದರ್ಶಿ ಪ್ರಸಾದ್ ಗೌಡ ಕುಚ್ಚೂರು, ಸಂಚಾಲಕರುಗಳಾದ ಕಿರಣ್ ಹೆಬ್ಬಾರ್ ಶಿರಿಬೈಲು, ಜೋರ್ಜ್ ಟಿವಿ ಮಲ್ಲಡ್ಕ, ಲಿಜೋ ಸ್ವರಿಯ ಬಲ್ಲಾಲ್ ಬೆಟ್ಟು, ಪ್ರಸಾದ್ ಗೌಡ ವಳಂಬ್ರ, ಸೂರಜ್ ವಳಂಬ್ರ, ಉದಯ ಗೌಡ ಪನಿಕಲ್ಲು, ಸಂತೋಷ್ ಬಲ್ಲಾಲ್ ಬೆಟ್ಟು ಕಾನೂನು ಸಲಹೆಗಾರರಾದ ಗಣೇಶ್ ಗೌಡ ಬರಮೇಲು, ಮಾಧ್ಯಮ ಸಂಚಾಲಕರಾದ ಬಾಲಚಂದ್ರ ನಾಯಕ್ ಹೇಡ್ಯಾ, ಪ್ರವೀನ್ ಗೌಡ ನರ್ತಂಡ ಮುಂತಾದವರು ಉಪಸ್ಥಿತರಿದ್ದರು.

Related posts

ಅಟ್ಲಾಜೆ ಕ್ರಿಕೆಟರ್ಸ್ ವತಿಯಿಂದ ಬಳಂಜ ಶಾಲಾ ಶಿಕ್ಷಣ ಟ್ರಸ್ಟ್ ಗೆ ರೂ.31 ಸಾವಿರ ಹಸ್ತಾಂತರ

Suddi Udaya

ನಾಲ್ಕೂರು: ಬಾಲಸ್ನೇಹಿ ಅಂಗನವಾಡಿ ಕೇಂದ್ರದಲ್ಲಿ ಶಿಕ್ಷಕರ ದಿನಾಚರಣೆ: ಪುಟಾಣಿ ಮಕ್ಕಳು ಪ್ರೀತಿಯ ಗುರುಗಳಿಗೆ ಪೆನ್ನು,ಹೂ ನೀಡಿ ಗೌರವ ಸಲ್ಲಿಕೆ

Suddi Udaya

ಎಸ್.ಎಸ್.ಎಲ್.ಸಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಅಭಿಷೇಕ್ ಗೆ ಬೆಳ್ತಂಗಡಿ ವಕೀಲರ ಸಂಘದಿಂದ ಸನ್ಮಾನ

Suddi Udaya

ಕುಕ್ಕೇಡಿ: ಕುಂಡದಬೆಟ್ಟು ಮಂಜುಶ್ರೀ ಭಜನಾ ಮಂಡಳಿ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

Suddi Udaya

ನೆಲ್ಯಾಡಿ ಅಲ್ಫೋನ್ಸ ಚರ್ಚ್ ವತಿಯಿಂದ ಡೇವಿಡ್ ಜೈಮಿ ಕೊಕ್ಕಡ ರಿಗೆ ಸನ್ಮಾನ

Suddi Udaya

ಕಳೆಂಜ: ಬಿಜೆಪಿ ಪ್ರಮುಖರು ಕಾಂಗ್ರೆಸ್ ಸೇರ್ಪಡೆ

Suddi Udaya
error: Content is protected !!