ಮುಂಡಾಜೆ : ಇಲ್ಲಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ನಿರ್ಮಿಸಲಾದ ನೂತನ ವಾಸ್ತವ್ಯದ ಮನೆಗಳ, ಸಭಾಭವನದ ಉದ್ಘಾಟನೆ ಹಾಗೂ ದಿ. ಎನ್.ಎಸ್. ಗೋಖಲೆ ಸ್ಮರಣಾರ್ಥ ವಿದ್ಯಾನಿಧಿ ವಿತರಣೆ ಕಾರ್ಯಕ್ರಮ ಸಂಘದ ಸಭಾಭವನದಲ್ಲಿ ಆ. 18ರಂದು ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ನೂಜಿ ಜನಾರ್ದನ ಗೌಡ ಮಾತನಾಡಿ, ‘ಸಹಕಾರಿ ಸಂಘಗಳು ಒಂದು ಕುಟುಂಬದಂತೆ ತಮ್ಮ ಕೆಲಸ, ಕಾರ್ಯ ಮಾಡಿದಾಗ ಅಭಿವೃದ್ಧಿ ಪಥದಲ್ಲಿ ಮುನ್ನುಗ್ಗಲು ಸಾಧ್ಯ. ಯುವಜನತೆ ಸಹಕಾರಿ ಸಂಘಗಳ ಕಡೆ ಒಲವು ತೋರಬೇಕು,” ಎಂದರು.
ಮುಂಡಾಜೆ ಶ್ರೀ ಸನ್ಯಾಸಿಕಟ್ಟೆ ಮುಂಡಾಜೆ ಪರಶುರಾಮ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಅಡೂರು ವೆಂಕಟ್ರಾಯ ಕಾರ್ಯಕ್ರಮ ಉದ್ಘಾಟಿಸಿದರು.
ಈ ವೇಳೆ ಪಿಯುಸಿ, ಎಸ್ಸೆಸ್ಸೆಲ್ಸಿಯಲ್ಲಿ ಶೇ.90ಕ್ಕಿಂತ ಅಧಿಕ ಅಂಕ ಪಡೆದ ಸಂಘದ ಸದಸ್ಯರ 40 ಮಂದಿ ಮಕ್ಕಳಿಗೆ ದಿ.ಎನ್.ಎಸ್. ಗೋಖಲೆ ಸ್ಮರಣಾರ್ಥ ವಿದ್ಯಾನಿಧಿ ವಿತರಿಸಲಾಯಿತು.
ಮುಂಡಾಜೆ ಗ್ರಾ.ಪಂ. ಅಧ್ಯಕ್ಷ ಗಣೇಶ ಬಂಗೇರ, ಕಲ್ಮ0ಜ ಗ್ರಾ.ಪಂ. ಅಧ್ಯಕ್ಷೆ ವಿಮಲಾ, ಚಾರ್ಮಾಡಿ ಗ್ರಾ.ಪಂ. ಅಧ್ಯಕ್ಷೆ ಶಾರದಾ ಎ. ಶುಭ ಹಾರೈಸಿದರು. ನಿರ್ದೇ ಶಕರಾದ ಜ್ಯೋತಿ ಜೆ. ಫಡಕೆ, ಶಶಿಧರ ಎಂ. ಕಲ್ಮ0ಜ , ರಾಘವ ಕಲ್ಮ0ಜ, ಸುಮಾ ಗೋಖಲೆ ಶಶಿಧರ, ನಯನಾ, ವೃತ್ತಿಪರ ನಿರ್ದೇಶಕ ಗಜಾನನ ವಝ, ಸಿಇಒ ಚಂದ್ರಕಾಂತ ಪ್ರಭು ಉಪಸ್ಥಿತರಿದ್ದರು.
ಆಂತರಿಕ ಲೆಕ್ಕಪರಿಶೋಧಕ ನಾರಾಯಣ ಫಡಕೆ ಪ್ರಾಸ್ತಾವಿಕ ಮಾತನಾಡಿದರು. ಉಪಾಧ್ಯಕ್ಷ ಪ್ರಕಾಶ ನಾರಾಯಣ ಕೆ. ಸ್ವಾಗತಿಸಿದರು. ನಿರ್ದೇಶಕ ಕೊರಗಪ್ಪ ನಾಯ್ಕ ಮತ್ತು ಸಿಬ್ಬಂದಿ ಸುಷ್ಮಾ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಸಂಜೀವ ಗೌಡ ಎಂ. ವಂದಿಸಿದರು.