April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಹದಗೆಟ್ಟ ರಸ್ತೆಗಳ ಸಮಸ್ಯೆಯನ್ನು ಇತ್ಯರ್ಥ ಪಡಿಸಿದ ಶಿಬಾಜೆ ಗ್ರಾ.ಪಂ.

ಶಿಬಾಜೆ: ಇತ್ತೀಚೆಗೆ ಸುರಿದ ಭಾರಿ ಮಳೆಗೆ ಶಿಬಾಜೆ ಗ್ರಾ.ಪಂ ವ್ಯಾಪ್ತಿಯ ಶಾಲೆತ್ತಡ್ಕ-ಕುರುಂಜ, ಬೈಕರ-ಶಾಂತಿಗುಡ್ಡೆ, ಮಾರ್‍ಯಾಡಿ-ಕಾಡುಹಿತ್ಲು ರಸ್ತೆಯು ತೀರಾ ಹದಗೆಟ್ಟಿರುವ ಬಗ್ಗೆ ಗ್ರಾಮಸಭೆಯಲ್ಲಿ ಚರ್ಚೆ ನಡೆದಿತ್ತು.


ಈ ಬಗ್ಗೆ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರು, ಸರ್ವ ಸದಸ್ಯರು, ಪಂ. ಅಭಿವೃದ್ಧಿ ಅಧಿಕಾರಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ರಸ್ತೆಗಳ ಇಕ್ಕೆಲಗಳಲ್ಲಿ ಮಣ್ಣು ಜರಿದು ಬಿದ್ದಿರುವುದು ಹಾಗೂ ಕಿರಿದಾದ ರಸ್ತೆಗಳಿಂದಾಗಿ ಈ ಸಮಸ್ಯೆ ಉಂಟಾಗಿತ್ತು. ಈ ಸಂದರ್ಭ ನಿಕಟಪೂರ್ವ ಅಧ್ಯಕ್ಷ ರತೀಶ್ ಗೌಡ ಬಿ. ಜಾಗದ ಮಾಲೀಕರೊಡನೆ ಮಾತುಕತೆ ನಡೆಸಿ ರಸ್ತೆಗಳನ್ನು ಅಗಲ ಮಾಡಲು ಒಪ್ಪಿಸಿ ಸ್ಥಳೀಯರೇ ರಿಪೇರಿ ಮಾಡಿಕೊಳ್ಳುವಂತೆ ಮಾತುಕತೆ ನಡೆಸುವುದರ ಮೂಲಕ ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾ.ಪಂ,. ಅಧ್ಯಕ್ಷೆ ಶ್ರೀಮತಿ ರತ್ನ, ಉಪಾಧ್ಯಕ್ಷ ದಿನಕರ ಕುರುಪ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯರಾಜ್, ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.

Related posts

ಕಾಜೂರು ದರ್ಗಾ ಹಾಗೂ ರಹ್ಮಾನಿಯಾ ಮಸ್ಜಿದ್ ನಲ್ಲಿ ಈದ್ ಆಚರಣೆ

Suddi Udaya

ಬಳ್ಳಮಂಜ : ರಾಜೀವಿ ಶೆಟ್ಟಿ ನಿಧನ

Suddi Udaya

ಗಂಡಿಬಾಗಿಲು ಸಿಯೋನ್ ಆಶ್ರಮ : ಗಾಂಧಿ ಜಯಂತಿ ಹಾಗೂ ಹಿರಿಯ ನಾಗರಿಕರ ದಿನಾಚರಣೆ

Suddi Udaya

ಧರ್ಮಸ್ಥಳ ಕಾಮಧೇನು ಸಂಘದ ವತಿಯಿಂದ ಆಟಿಡೊಂಜಿ ದಿನ ಆಚರಣೆ

Suddi Udaya

ಅಂಡಿಂಜೆ : ನೆಲ್ಲಿಂಗೇರಿ ಸ.ಕಿ.ಪ್ರಾ. ಶಾಲೆ ಮತ್ತು ಅಂಗನವಾಡಿ ಕೇಂದ್ರದಲ್ಲಿ ಶ್ರೀಮತಿ ಇಂದಿರಾ ಗಾಂಧಿಯವರ ಜನ್ಮದಿನಾಚರಣೆ

Suddi Udaya

ಹಿಂದೂ ಧರ್ಮದ ವಿರುದ್ಧ ನೀಡಿರುವ ಹೇಳಿಕೆಗೆ ದ.ಕ. ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಂಘ ಮತ್ತು ಸಮಗ್ರ ಹಿಂದೂ ಸಮಾಜ ಖಂಡನೆ: ಡಾ| ಎಂ.ಎಂ. ದಯಾಕರ್

Suddi Udaya
error: Content is protected !!