ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಬೆಳ್ತಂಗಡಿ ಹಾಗೂ ಲಯನ್ಸ್ ಕ್ಲಬ್ ಬೆಳ್ತಂಗಡಿಯವರ ಜಂಟಿ ಆಶ್ರಯದಲ್ಲಿ ತಾಲೂಕು ಮಟ್ಟದ ದೇಶಭಕ್ತಿ ಗೀತೆಗಳ ಗೀತ ಗಾಯನ ಸ್ಪರ್ಧೆ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿಯಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಟನೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ದೇವದಾಸ್ ಎನ್ ಶೆಟ್ಟಿ ನೆರವೇರಿಸಿಕೊಟ್ಟು, ಮಾತನಾಡಿದ ಇವರು ಲಯನ್ಸ್ ಕ್ಲಬ್ ನಂತೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೂಡ ಒಂದು ಸೇವಾ ಮನೋಭಾವದ ಸಂಸ್ಥೆಯಾಗಿದೆ. ಜಂಟಿ ಆಶ್ರಯದಲ್ಲಿ ಸ್ಕೌಟ್ ಗೈಡ್ ನೊಂದಿಗೆ ಸಹಭಾಗಿತ್ವ ವಹಿಸಿ ರುವುದು ಪುಣ್ಯದ ಕೆಲಸವಾಗಿದೆ ಎಂದು ಶ್ಲಾಘಿಸಿದರು.
ಮುಖ್ಯ ಅತಿಥಿಗಳಾಗಿ ಲ! ವೆಂಕಟೇಶ್ ಹೆಬ್ಬಾರ್ ,ಲ! ಉಮೇಶ್ ಶೆಟ್ಟಿ, ಲ! ಲಯನ್ಸ್ ಕ್ಲಬ್ ನ ಕಾರ್ಯದರ್ಶಿ, ಕಿರಣ್ ಕುಮಾರ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಬೆಳ್ತಂಗಡಿಯ ಅಧ್ಯಕ್ಷ ಎಚ್ ಪದ್ಮಕುಮಾರ್ ವಹಿಸಿದ್ದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ ಸ್ಥಳೀಯ ಸಂಸ್ಥೆ ಬೆಳ್ತಂಗಡಿಯ ಕಾರ್ಯದರ್ಶಿ ಶ್ರೀಮತಿ ಪ್ರಮೀಳ , ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಜೆಸಿಂತಾ ರೋಡ್ರಿಗಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಬ್ ವಿಭಾಗದಲ್ಲಿ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ ಪ್ರಥಮ, ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳ ದ್ವಿತೀಯ, ವಾಣಿ ಆಂಗ್ಲ ಮಾಧ್ಯಮ ಶಾಲೆ ತೃತೀಯ, ಬುಲ್ ಬುಲ್ ವಿಭಾಗದಲ್ಲಿ ಎಸ್ ಡಿ ಎಮ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ ಮೊದಲ ಸ್ಥಾನ, ಎಸ್ ಡಿ ಎಂ ಸಿ ಬಿ ಎಸ್ ಸಿ ಉಜಿರೆ ದ್ವಿತೀಯ, ಎಸ್ ಡಿ ಎಂ ಧರ್ಮಸ್ಥಳ ತೃತೀಯ , ಗೈಡ್ ವಿಭಾಗದಲ್ಲಿ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ, ಉಜಿರೆ, ಮೊದಲ ಸ್ಥಾನ, ಎಸ್ ಡಿ ಎಂ ಬೆಳ್ತಂಗಡಿ ದ್ವಿತೀಯ, ಸೈಂಟ್ ಮೇರಿಸ್ ಲಾಯಿಲ ತೃತೀಯ, ಸ್ಕೌಟ್ ವಿಭಾಗದಲ್ಲಿ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ, ಉಜಿರೆ ಮೊದಲ ಸ್ಥಾನ, ಎಸ್ ಡಿ ಎಂ ಧರ್ಮಸ್ಥಳ ದ್ವಿತೀಯ, ಎಸ್ ಡಿ ಎಂ ಸಿ ಬಿ ಎಸ್ ಸಿ ಉಜಿರೆ ತೃತೀಯ ಸ್ಥಾನ ಪಡೆದುಕೊಂಡು ಕೊಂಡಿರುತ್ತಾರೆ. ಮೊದಲ ಸ್ಥಾನ ಪಡೆದುಕೊಂಡ ಎಲ್ಲಾ ಶಾಲೆಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿರುತ್ತದೆ.
ತೀರ್ಪುಗಾರರಾಗಿ ನಾಗೇಂದ್ರ ನಾಯಕ್ ಉಜಿರೆ, ಸಂಗೀತ ಶಿಕ್ಷಕರು ಹಾಗೂ ಮಮತ ಕಲ್ಲಡ್ಕ ಸಂಗೀತ ಶಿಕ್ಷಕರು ತೀರ್ಪುಗಾರಿಕೆಯನ್ನು ನೀಡಿರುತ್ತಾರೆನಿರೂಪಣೆಯನ್ನು ವಾಸಂತಿ ರೇಂಜರ್ ಲೀಡರ್ ನಡ ಪದವಿ ಪೂರ್ವ ಕಾಲೇಜು ಇವರು ನಡೆಸಿ ಕೊಟ್ಟಿದ್ದು, ಸ್ವಾಗತವನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೋಶಾಧಿಕಾರಿ ಬೆಳಿಯಪ್ಪ ಕೆ, ಧನ್ಯವಾದಗಳು ಲಯನ್ಸ್ ಕಾರ್ಯದರ್ಶಿಗಳಾದ ಕಿರಣ್ ಕುಮಾರ್ ಶೆಟ್ಟಿ ನೆರವೇರಿಸಿಕೊಟ್ಟು ಕಾರ್ಯಕ್ರಮದ ಯಶಸ್ವಿ ಗೊಳಿಸಿರುತ್ತಾರೆ. ಹಿರಿಯ ಸಾಹಿತಿಗಳಾದ ಲಯನ್ಸ್ ಭುಜಬಲಿ, ವಸಂತ್ ಶೆಟ್ಟಿ, ಚಂದ್ರಹಾಸ ಬಳ್ಳಂಜ, ಬನ್ನಿಸ್ ಲೀಡರ್ಸ್ ಸ್ಕೌಟ್ ಗೈಡ್ ಶಿಕ್ಷಕ ಶಿಕ್ಷಕಿಯರು ಫ್ಲಾಕ್ ಲೀಡರ್ಸ್ ಕಬ್ ಮಾಸ್ಟರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.