ಆರಂಬೋಡಿ:ಆರಂಬೋಡಿ ಗ್ರಾಮ ಪಂಚಾಯತ್ ನ 2024-25ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷ ಪ್ರವೀಣಚಂದ್ರ ಜೈನ್ ಇವರ ಅಧ್ಯಕ್ಷತೆಯಲ್ಲಿ ಗುಂಡೂರಿ ತುಂಬೆದಲ್ಕೆ ಶ್ರೀ ಸತ್ಯನಾರಾಯಣ ಭಜನಾ ಮಂದಿರದಲ್ಲಿ ಆ.23ರಂದು ನಡೆಯಿತು.
ಮಾರ್ಗದರ್ಶಿ ಅಧಿಕಾರಿಯಾಗಿ ಬೆಳ್ತಂಗಡಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಚಂದ್ರಶೇಖರ ರವರು ಗ್ರಾಮಸಭೆಯನ್ನು ಮುನ್ನಡೆಸಿದರು.ಬ್ರಹ್ಮಶ್ರೀ ನಾರಾಯಣ ಗುರುಗಳ ಸರ್ಕಲ್ ಕೆಲಸ ಪ್ರಾರಂಭಿಸಿ ಮೂರು ವರ್ಷ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ಶೀಘ್ರವಾಗಿ ಗುರುಗಳ ಸರ್ಕಲ್ ಪೂರ್ಣವಾಗಬೇಕೆಂದು ಹರೀಶ್ ಕುಮಾರ್ ಪೊಕ್ಕಿ ಒತ್ತಾಯಿಸಿದರು.ಆದಷ್ಟು ಬೇಗ ಗುರುಗಳ ಸರ್ಕಲ್ ಕೆಲಸ ಪೂರ್ಣಗೊಳಿಸುವ ಭರವಸೆಯನ್ನು ಪಂಚಾಯತ್ ಪಿಡಿಓ ತಿಳಿಸಿದರು.
ಪೊಕ್ಕಿಯಲ್ಲಿರುವ ಸುಂದರವಾದ ರಸ್ತೆ ಬಲ್ಲೆಗಳಿಂದ ಕೂಡಿದೆ. ಶೀಘ್ರ ತೆರವಿಗೆ ಗ್ರಾಮಸ್ಥರು ಒತ್ತಾಯಿಸಿದರು.ಪಾದೆಗುರಿ ಎಂಬಲ್ಲಿ ರಸ್ತೆ ಕಾಂಕ್ರೀಟಿನವಾಗಿದ್ದು,ಕೇವಲ 2ವರ್ಷದಲ್ಲಿ ರಸ್ತೆಯ ಸಿಮೆಂಟ್ ಹೋಗಿ ಜಲ್ಲಿಕಲ್ಲು ಇರುವುದಾಗಿದೆ.ಶಾಲಾ ಮಕ್ಕಳಿಗೆ ನಡೆಯಲು ಕಷ್ಟವಾಗಿದೆ. ಕೂಡಲೇ ಸರಿಪಡಿಸುವಂತೆ ಒತ್ತಾಯಿಸಿದರು ಆರಂಬೋಡಿ 149 ಮತ 118 ಸರ್ವೆ ನಂಬರಲ್ಲಿ ತುಂಬಾ ಸಮಸ್ಯೆಯಿದೆ.ಕಳೆದ ಗ್ರಾಮ ಸಭೆಯಲ್ಲಿಯೂ ಪ್ರಸ್ತಾಪ ಮಾಡಿದ್ದೇವೆ. ನಿರ್ಣಯ ಮಾಡಿ ತಹಿಶೀಲ್ದಾರ್ ಅವರಿಗೆ ಯಾಕೆ ನೀಡಿಲ್ಲವೆಂದು ಸುದರ್ಶನ್ ಪ್ರಶ್ನಿಸಿದರು.ಕಾಂತರಬೆಟ್ಟು ಪರಿಸರದಲ್ಲಿ ಹದಗೆಟ್ಟ ರಸ್ತೆಯಿಂದ ವೃದ್ದರು,ಬಾಣಂತಿಯರು ಆಸ್ಪತ್ರೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಕೆಲ ಕುಟುಂಬದವರು ರಸ್ತೆಯ ಅವ್ಯವಸ್ಥೆಗೆ ಬೇಸತ್ತು ಬಾಡಿಗೆ ರೂಮಿನಲ್ಲಿದ್ದಾರೆ. ಆದಷ್ಟು ಬೇಗ ರಸ್ತೆ ಸರಿಪಡಿಸಬೇಕು ಎಂದು ಗ್ರಾಮಸ್ಥರೊರ್ವರು ಆಗ್ರಹಿಸಿದರು.
ಪಂ.ಅಭಿವೃದ್ಧಿ ಅಧಿಕಾರಿ ಡಾ.ಸ್ಮೃತಿ ಯು ಎಲ್ಲರನ್ನೂ ಸ್ವಾಗತಿಸಿದರು.ಗ್ರಾ.ಪಂ ಉಪಾಧ್ಯಕ್ಷೆ ತೇಜಸ್ವಿನಿ,ಸದಸ್ಯರಾದ ಪ್ರಭಾಕರ ಪೂಜಾರಿ ಹೆಚ್,ಸುರೇಂದ್ರ,ಸತೀಶ್ ಪೂಜಾರಿ,ಮೋಹಿನಿ, ದೀಕ್ಷಿತಾ, ಗೀತಾ ಉಪಸ್ಥಿತರಿದ್ದರು. ಪಂಚಾಯತ್ ಸಿಬ್ಬಂದಿಗಳು, ಆಶಾ,ಅಂಗನವಾಡಿ ಕಾರ್ಯಕರ್ತರು ಸಹಕರಿಸಿದರು.ವಿವಿಧ ಇಲಾಖಾಧಿಕಾರಿಗಳು ತಮ್ಮ ಇಲಾಖೆಯ ಮಾಹಿತಿ ನೀಡಿದರು. ಪದ್ಮನಾಭರವರು ವಾರ್ಡ್ ಸಭೆಗಳಲ್ಲಿ ಬಂದ ಬೇಡಿಕೆಗಳನ್ನು ಸಭೆಯ ಮುಂದಿಟ್ಟರು.