30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ವಾಲಿಬಾಲ್ ಪಂದ್ಯಾಟ: ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಗಳು ಹಾಗೂ ಪದ್ಮುಂಜ ಪ್ರೌಢಶಾಲಾ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ಎರಡು ತಂಡಗಳು ತಾಲೂಕು ಮಟ್ಟಕ್ಕೆ ಆಯ್ಕೆ

ಪುಂಜಾಲಕಟ್ಟೆ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳ ವಾಲಿಬಾಲ್ ಪಂದ್ಯಾಟವು ಸರಕಾರಿ ಪ್ರೌಢಶಾಲೆ ಗುರುವಾಯನಕೆರೆ ಇಲ್ಲಿ ನಡೆಯಿತು.

ಸ್ಪರ್ಧೆಯಲ್ಲಿ ವಲಯಕ್ಕೆ ಸಂಬಂಧಿಸಿದ ಪ್ರೌಢಶಾಲಾ ವಿದ್ಯಾರ್ಥಿಗಳ ತಂಡ ಭಾಗವಹಿಸಿತ್ತು. ಅಂತಿಮವಾಗಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆಯ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಹಾಗೂ ಪದ್ಮುಂಜ ಪ್ರೌಢಶಾಲಾ ವಿದ್ಯಾರ್ಥಿಗಳ ಬಗ್ಗೆ ಹಣಹಣಿ ನಡೆದು ಅತ್ಯುತ್ತಮ ಪ್ರದರ್ಶನ ನೀಡಿದ ಎರಡು ತಂಡಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಈ ವಿಜೇತ ಪುಂಜಾಲಕಟ್ಟೆಯ ತಂಡಕ್ಕೆ ಹಾಗೂ ತರಬೇತಿ ನೀಡಿದ ರಾಜೇಶ್ ರವರಿಗೆ ಹಾಗೂ ಅತ್ಯುತ್ತಮ ಪ್ರದರ್ಶನ ನೀಡಿ ತಾಲೂಕು ಮಟ್ಟಕ್ಕೆ ಆಯ್ಕೆಯಾದ ತಂಡದ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಉಪ ಪ್ರಾಂಶುಪಾಲರಾದ ಉದಯಕುಮಾರ್ ಬಿ ಯವರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.

Related posts

ಮುಗೇರಡ್ಕ ದೈವಗಳ ಸೇವಾ ಸಮಿತಿಯಿಂದ ಮೊಗ್ರು ಶಾಲೆಗೆ ವಿದ್ಯುತ್ ಚಾಲಿತ ನೀರು ಶುದ್ದಿಕರಣ ಯಂತ್ರ ಕೊಡುಗೆ

Suddi Udaya

ಪತ್ರಕರ್ತ ನಿಶಾಂತ್ ಬಿಲ್ಲಂಪದವು ಮೇಲಿನ ಹಲ್ಲೆ ಪ್ರಕರಣ: ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಖಂಡನೆ: ಆರೋಪಿಯ ವಿರುದ್ಧ ಸೂಕ್ತ ತನಿಖೆಗೆ ರಾಜ್ಯಪಾಲರಿಗೆ ಹಾಗೂ ಪೊಲೀಸ್ ಇಲಾಖೆಗೆ ಮನವಿ

Suddi Udaya

ಇಂದಬೆಟ್ಟು: ಕೃಷಿ ಮತ್ತು ಕುಡಿಯುವ ನೀರಿಗೆ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡುವ ಬಗ್ಗೆ ಮೆಸ್ಕಾಂ ಅಧಿಕಾರಿಗೆ ಗ್ರಾಮಸ್ಥರಿಂದ ಮನವಿ

Suddi Udaya

ಬೆಳ್ತಂಗಡಿ ಎಸ್‌ಡಿಪಿಐ ಕ್ಷೇತ್ರ ಸಮಿತಿ ವತಿಯಿಂದ ಪಕ್ಷ ಸಮಾವೇಶ ಕಾರ್ಯಕ್ರಮ

Suddi Udaya

ಶ್ರೀ ಭಗವದ್ಗೀತಾ ಸ್ಪರ್ಧೆ : ಉಜಿರೆಯ ಎಸ್.ಡಿ.ಎಂ ಪ.ಪೂ ಕಾಲೇಜಿನ ವಿದ್ಯಾರ್ಥಿನಿ ಹಂಸಿನಿ ಭಿಡೆಗೆ ರಾಜ್ಯಮಟ್ಟದಲ್ಲಿ ತೃತೀಯ ಬಹುಮಾನ

Suddi Udaya

ನಾರಾವಿ ಪೇಟೆಯಲ್ಲಿ ಬಿಜೆಪಿ ಬಿರುಸಿನ ಮತಪ್ರಚಾರ

Suddi Udaya
error: Content is protected !!