38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಬಡ್ಡಿ ಪಂದ್ಯಾಟ: ಮನ್ ಶರ್ ಆಂಗ್ಲ ಮಾಧ್ಯಮ ಶಾಲೆಯ ತಂಡವು ತಾಲೂಕು ಮಟ್ಟಕ್ಕೆ ಆಯ್ಕೆ

ಬೆಳ್ತಂಗಡಿ : ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಆ.23 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಲಂತಬೆಟ್ಟು ಇಲ್ಲಿ ನಡೆದ ವಲಯಮಟ್ಟದ ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ವೀರೋಚಿತ ಆಟದ ಪ್ರದರ್ಶನಗಳನ್ನು ನೀಡಿದ ಮನ್ ಶರ್ ಆಂಗ್ಲ ಮಾಧ್ಯಮ ಶಾಲೆಯ ತಂಡವು ಫೈನಲ್ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿ ತಾಲೂಕು ಮಟ್ಟಕ್ಕೆ ಆಯ್ಕೆಗೊಂಡಿದೆ.


ತಂಡದಲ್ಲಿ ಸುಹೈಲ್(7ನೇ ತರಗತಿ) ಬೆಸ್ಟ್ ರೈಡರ್ ಟ್ರೋಫಿಯನ್ನು ಮುಡಿಗೇರಿಸಿಕೊಂಡರೆ, ಸಫ್ವಾನ್ (7ನೇ), ಶಾದ್ದಾದ್ (7ನೇ), ಆಶಿರ್ ಜವಾದ್ (7ನೇ), ಶಮ್ಮಾಸ್ (7ನೇ), ಇಶಾಮ್ ಅಲಿ (7ನೇ), ಮಹಮ್ಮದ್ ಫಾಜ್ (7ನೇ), ಮೊಹಮ್ಮದ್ ಆಶಿರ್ (7ನೇ), ಸುಫೈನ್ (7ನೇ), ಸಾಬಿತ್(7ನೇ), ತಮೀಮ್ (6ನೇ), ಆಶಿಮ್(6ನೇ) ಇವರು ಕಡೆಯವರೆಗೂ ಪಂದ್ಯಾಟಗಳ ಸ್ಥಿತಿಯನ್ನೇ ಬದಲಾಯಿಸಿ ಮನ್ ಶರ್ ತಂಡವು ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಲು ಪ್ರಮುಖ ಪಾತ್ರ ವಹಿಸಿದರು.


ಪಂದ್ಯಾಟದ ಸಮಯದಲ್ಲಿ ಹಾಗೆಯೇ ಸಮಾರೋಪ ಕಾರ್ಯಕ್ರಮದಲ್ಲಿ ಮನ್ ಶರ್ ವಿದ್ಯಾಸಂಸ್ಥೆಯ ಶಿಕ್ಷಕಿಯರಾದ ರಮ್ಯಾ ಆರ್ ಹಾಗೂ ಸುಧಾ ಬಿ ಉಪಸ್ಥಿತರಿದ್ದರು.

Related posts

ಆಟೋ ಚಾಲಕ ಯಶೋಧರ ಗೌಡ ಅಸೌಖ್ಯದಿಂದ ನಿಧನ

Suddi Udaya

ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಯವರಿಗೆ ಲಯನ್ಸ್ ಕ್ಲಬ್ ನಿಂದ ಹುಟ್ಟುಹಬ್ಬದ ಶುಭಾಶಯ

Suddi Udaya

ಶ್ರೀ ದೇವಿ ಭಗವತಿ ಅಮ್ಮನವರ ದೇವಸ್ಥಾನದ ಬ್ರಹ್ಮಕಲಶೋತ್ಸವ: ಶ್ರೀ ಮೋಹನದಾಸ ಸ್ವಾಮೀಜಿಯರಿಂದ ಧಾರ್ಮಿಕ ಸಂದೇಶ

Suddi Udaya

ಕಳೆಂಜ ನಂದಗೋಕುಲ ಗೋಶಾಲೆಯಲ್ಲಿ ದೀಪೋತ್ಸವ
ಸಾಮೂಹಿಕ ಗೋಪೂಜೆ – ಗೋ ನಂದಾರತಿ ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ಅಪಘಾತ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

Suddi Udaya

ಪುದುವೆಟ್ಟು: ಡಿಸೇಲ್ ಪೈಪ್ ಲೈನ್ ಕೊರೆದು ರೂ. 9 ಲಕ್ಷ ಮೌಲ್ಯದ ಡಿಸೇಲ್ ಕಳ್ಳತನ: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya
error: Content is protected !!