24.8 C
ಪುತ್ತೂರು, ಬೆಳ್ತಂಗಡಿ
April 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮುಂಡಾಜೆ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ಕೌಟಿಂಗ್ ಗೈಡಿಂಗ್ ಚಳುವಳಿಯ ಪ್ರಾರಂಭೋತ್ಸವ

ಮುಂಡಾಜೆ: ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ.) ಇದರ ಅಧೀನಕ್ಕೊಳಪಟ್ಟ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆ ಮುಂಡಾಜೆಯ ಕಬ್, ಬುಲ್ ಬುಲ್, ಸ್ಕೌಟ್ & ಗೈಡ್ ಘಟಕಗಳ ಪ್ರಾರಂಭೋತ್ಸವ ಹಾಗೂ ರೋವರ್ & ರೇಂಜರ್ ಘಟಕದ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭವು ಅದ್ದೂರಿಯಾಗಿ ನಡೆಯಿತು.


ಕಾರ್ಯಕ್ರಮದ ಉದ್ಘಾಟನೆಯನ್ನು ಭಾರತ್ ಸ್ಕೌಟ್ & ಗೈಡ್ಸ್, ಕರ್ನಾಟಕ ಇದರ ಸಹಾಯಕ ರಾಜ್ಯ ಸಂಘಟನಾ ಆಯುಕ್ತರಾದ ಭರತ್ ರಾಜ್ ಕೆ ಇವರು ನೆರವೇರಿಸಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಸ್ಕೌಟಿಂಗ್ ಗೈಡಿಂಗ್ ನ ಪಾತ್ರವನ್ನು ತಿಳಿಸಿದರು.


ಮುಖ್ಯ ಅತಿಥಿಗಳಾಗಿ ಭಾರತ್ ಸ್ಕೌಟ್ ಗೈಡ್ಸ್ ಸ್ಥಳೀಯ ಸಂಸ್ಥೆ ಬೆಳ್ತಂಗಡಿಯ ಕಾರ್ಯದರ್ಶಿಯಾದ ಪ್ರಮೀಳಾ ಕಬ್, ಬುಲ್ ಬುಲ್, ಸ್ಕೌಟ್ & ಗೈಡ್ ದಳಗಳು ಉತ್ತಮವಾಗಿ ಮುಂದುವರೆದು ಕೀರ್ತಿಯನ್ನು ಗಳಿಸಲಿ ಎಂಬುದಾಗಿ ಶುಭಹಾರೈಸಿದರು.
ಇನ್ನೋರ್ವ ಅತಿಥಿಗಳಾದ ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಳ್ತಂಗಡಿಯ ಸಹಾಯಕ ಪ್ರಾಧ್ಯಾಪಕರಾದ ಡಾ. ರವಿ ಎಂ ಎನ್ ಮಾತನಾಡಿ ಜೀವನದಲ್ಲಿ ಮೌಲ್ಯಗಳನ್ನು ರೂಪಿಸುವಲ್ಲಿ ಸ್ಕೌಟಿಂಗ್ ಗೈಡಿಂಗ್ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆ ಮುಂಡಾಜೆಯ ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಚಂದ್ರಮತಿ ಘಟಕಗಳಿಗೆ ಶುಭಹಾರೈಸಿದರು.


ಸರಸ್ವತಿ ಪ್ರಾಥಮಿಕ ಶಾಲೆಯ ಸಂಯೋಜಕಿ ಶ್ರೀಮತಿ ಶ್ರೀಜಾ ಹಾಗೂ ಮುಂಡಾಜೆ ಪದವಿ ಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕಿ ಶ್ರೀಮತಿ ಗೀತಾ ಉಪಸ್ಥಿತರಿದ್ದರು.


ರೇಂಜರ್ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ರೇಂಜರ್ ಲೀಡರ್ ಶ್ರೀಮತಿ ವಸಂತಿ ನಿರೂಪಿಸಿ, ಫ್ಲಾಕ್ ಲೀಡರ್ ಶ್ರೀಮತಿ ಭಾರತಿ ಡಿ ಸ್ವಾಗತಿಸಿ, ಗೈಡ್ ಕ್ಯಾಪ್ಟನ್ ಶ್ರೀಮತಿ ರೇವತಿ ಧನ್ಯವಾದಗೈದರು. ರೋವರ್ ಸ್ಕೌಟ್ ಲೀಡರ್ ಕೃಷ್ಣ ಕಿರಣ್ ಕೆ, ಸ್ಕೌಟ್ ಮಾಸ್ಟರ್ ಬಾಲಕೃಷ್ಣ, ಕಬ್ ಮಾಸ್ಟರ್ ಶ್ರೀಮತಿ ಪ್ರೇಮ ಸಹಕರಿಸಿದರು.

Related posts

ಸೆ.17: ನಾರಾವಿ ಸಂತ ಅಂತೋನಿ ಪದವಿ ಕಾಲೇಜು ಎನ್ ಎಸ್ ಎಸ್ ವತಿಯಿಂದ ಉಚಿತ ಫಿಸಿಯೋಥೆರಪಿ ಹಾಗೂ ಹೊಮಿಯೋಪತಿಕ್ ತಪಾಸಣಾ ಶಿಬಿರ

Suddi Udaya

ರಮ್ಯ 1 ಗ್ರಾಂ ಗೋಲ್ಡ್ & ಫ್ಯಾನ್ಸಿಯಲ್ಲಿ ಲ್ಯಾಕ್ಮಿ ಶೋಕೇಸ್ ಅಳವಡಿಕೆ

Suddi Udaya

ಆರಂಬೋಡಿ : ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹ ಬಾವಿಯಲ್ಲಿ ಪತ್ತೆ

Suddi Udaya

ಕಳೆಂಜ: ಕೊತ್ತೋಡಿ ನಿವಾಸಿ ಸುಂದರ ಗೌಡ ನಿಧನ

Suddi Udaya

ಜಡಿಮಳೆ: ಕಳೆಂಜ ಕುಟ್ರುಪ್ಪಾಡಿ ರಾಮಣ್ಣ ನಾಯ್ಕರ ಸೋಗೆ ಮನೆ ಛಾವಣಿ ಸಂಪೂರ್ಣ ಕುಸಿತ

Suddi Udaya

ತಾಲೂಕು ಪರಿಶಿಷ್ಟ ವರ್ಗಗಳ ದೊಡ್ಡ ಪ್ರಮಾಣದ ವಿವಿದೋದ್ಧೇಶ ಸಹಕಾರ ಸಂಘ ಅಧ್ಯಕ್ಷರಾಗಿ ಲಿಂಗಪ್ಪ ನಾಯ್ಕ, ಉಪಾಧ್ಯಕ್ಷರಾಗಿ ಲಲಿತಾ

Suddi Udaya
error: Content is protected !!