
ನಾವೂರು : ನಾವೂರು ಗ್ರಾ.ಪಂ. ,ಪಶುಸಂಗೋಪನೆ ಮತ್ತು ಪಶು ವೈಧ್ಯಕೀಯ ಸೇವಾ ಇಲಾಖೆ ಬೆಳ್ತಂಗಡಿ, ಸಿ ಎ ಬ್ಯಾಂಕ್ ಬಂಗಾಡಿ, ಹಾಗೂ ಹಾಲು ಉತ್ಪಾದಕರ ಸಹಕಾರಿ ಸಂಘ ನಾವೂರು ಇವರ ಜಂಟಿ ಆಶ್ರಯದಲ್ಲಿ ಉಚಿತ ಹುಚ್ಚು ನಾಯಿ ರೋಗ ನಿರೋಧಕ ಲಸಿಕಾ ಶಿಬಿರದ ಉದ್ಘಾಟನೆ ಕಾರ್ಯಕ್ರಮವು ನಾವೂರು ಗ್ರಾಮ ಪಂಚಾಯತ್ ನ ಸಭಾಂಗಣದಲ್ಲಿ ನಾವೂರು ಗ್ರಾಮ ಪಂಚಾಯತ್ ನ ಅಧ್ಯಕ್ಷೆ ಶ್ರೀಮತಿ ಸುನಂದ ನಡೆಸಿಕೊಟ್ಟರು.


ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷೆ ಶ್ರೀಮತಿ ಮಮತಾ, ಗ್ರಾಮ ಪಂಚಾಯತ್ ಸದಸ್ಯರಾದ ಗಣೇಶ್ ಗೌಡ , ಎನ್ ಹಸೈನಾರ್, ಬಾಲಕೃಷ್ಣ, ಪಶುಸಂಗೋಪನೆ ಮತ್ತು ಪಶು ವೈಧ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ರವಿ ಕುಮಾರ್ , ಡಾ.ಸುಕಿರ್ತಿ ಜೈನ್ ,ಡಾ.ಪ್ರಶಾಂತ್ ಕುಮಾರ್, ಡಾ.ರಾಜ ವರ್ಮಜೈನ್, ಡಾ.ಗಂಗಾಧರ ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಸಂತ ಪೂಜಾರಿ, ಸಿ ಎ ಬ್ಯಾಂಕ್ ನ ಅಧ್ಯಕ್ಷ ಹರೀಶ್ ಸಾಲಿಯಾನ್ ಮೊರ್ತಾಜೆ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಉಮೇಶ್ ಪ್ರಭುಹಾಡಿಲು, ಪಶು ಸಖಿ ಶ್ರೀಮತಿ ತುಳಸಿ ಮತ್ತು ವಸಂತ ಮೈತ್ರಿ ಕಾರ್ಯಕರ್ತ, ತೃಪ್ತಿ ಸಂಜೀವಿನಿ ಒಕ್ಕೂಟದ ಎಂ ಬಿ ಕೆ ,ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗದವರು ಮತ್ತು ಗ್ರಾಮಸ್ಧರು ಉಪಸ್ಧಿತರಿದ್ದರು.

ಶಿಬಿರದಲ್ಲಿ 350 ಕ್ಕೂ ಮಿಕ್ಕಿ ಸಾಕುನಾಯಿಗಳಿಗೆ ಉಚಿತ ಲಸಿಕೆ ನೀಡಲಾಯಿತು.