September 6, 2026
ಪ್ರಮುಖ ಸುದ್ದಿ

ಆದರ್ಶನಗರ ಕ್ರಾಸ್ ಬಳಿ ಟ್ಯಾಂಕರ್ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಲಾರಿಯೊಂದಿಗೆ ಚಾಲಕನು ಪರಾರಿ

ಬೆಳ್ತಂಗಡಿ : ಆದರ್ಶನಗರ ಕ್ರಾಸ್ ಬಳಿ ಟ್ಯಾಂಕರ್ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಲಾರಿಯೊಂದಿಗೆ ಚಾಲಕನು ಪರಾರಿಯಾಗಿದ್ದು, ಇದನ್ನು ಕಂಡ ಎಸ್. ಡಿ. ಟಿ. ಯು ಆಟೋ ಯೂನಿಯನ್ ಹಳೆಪೇಟೆ ಇದರ ಅಧ್ಯಕ್ಷರಾದ ಶರೀಫ್ ಎಸ್. ಎಂ ತನ್ನ ಬಾಡಿಗೆದಾರರನ್ನು ಬಿಟ್ಟು ಅಪಘಾತಕ್ಕೆ ಒಳಗಾದವರನ್ನು ತನ್ನದೇ ರಿಕ್ಷಾದಲ್ಲಿ ಸಾಗಿಸಿ ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದರು.
ಅಪಘಾತಕ್ಕೆ ಒಳಗಾದವರು ಯು. ಪ್ಲಸ್ ಚಾನೆಲ್ ನ ಸಿಬ್ಬಂದಿಗಳಾಗಿರುತ್ತಾರೆ.
ಟ್ಯಾಂಕರ್ ಲಾರಿಯನ್ನು ಚರ್ಚ್ ರಸ್ತೆಯ ಬಳಿ ತನ್ನ ರಿಕ್ಷಾದಲ್ಲಿ ಹಿಂಬಾಲಿಸಿ ತಡೆದು ನಿಲ್ಲಿಸಿ, ಬೆಳ್ತಂಗಡಿ ಠಾಣೆಗೆ ದೂರು ನೀಡಿದರು. ಆ ಕೂಡಲೇ ಠಾಣೆಯ ಪೊಲೀಸರು ತಕ್ಷಣ ಸ್ಪಂದಿಸಿ ಟ್ಯಾಂಕರ್ ಹಾಗೂ ಟ್ಯಾಂಕರ್ ಚಾಲಕನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Related posts

ಸೇಕ್ರೆಡ್ ಹಾರ್ಟ್ ಪ.ಪೂ.ಕಾಲೇಜು-ಪೋಕ್ಸೋ ಕಾಯಿದೆ ಮಾಹಿತಿ ಕಾರ್ಯಕ್ರಮ

Suddi Udaya

ಕೊಕ್ಕಡ: ಉಪ್ಪಾರಪಳಿಕೆಯಲ್ಲಿ ಕೃಷ್ಣಜನ್ಮಾಷ್ಟಮಿ ಆಚರಣೆ ಮತ್ತು ಶ್ರೀಕೃಷ್ಣ ಮಂದಿರದ ಭೂಮಿ ಪೂಜೆ ಹಾಗೂ ಸಸಿಗಳ ನಾಟಿ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಪ.ಪಂ. ಆಡಳಿತಾಧಿಕಾರಿಯಾಗಿ ತಹಶೀಲ್ದಾರ ಟಿ. ಸುರೇಶ್‌ ಕುಮಾರ್ ಅಧಿಕಾರ ಸ್ವೀಕಾರ

Suddi Udaya

ಹೊಸಂಗಡಿ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಜಗದೀಶ್ ಹೆಗ್ಡೆ, ಉಪಾಧ್ಯಕ್ಷರಾಗಿ ಶಾಂತಾ ಕೃಷ್ಣಪ್ಪ ಅವಿರೋಧವಾಗಿ ಆಯ್ಕೆ

Suddi Udaya

ಜು.8ರಿಂದ ಗಡಾಯಿಕಲ್ಲು ಚಾರಣಕ್ಕೆ ನಿರ್ಬಂಧ

Suddi Udaya

ನೀಟ್ ಪ್ರಶ್ನಾ ಪತ್ರಿಕೆ ಸೋರಿಕೆ: ವಿದ್ಯಾರ್ಥಿಗಳ ಹೋರಾಟವನ್ನು ಹತ್ತಿಕ್ಕುವುದು ಖಂಡನೀಯ -ಕೆ.ಎಂ. ನಾಗೇಶ್ ಕುಮಾರ್ ಗೌಡ

Suddi Udaya
error: Content is protected !!