25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ದಿಡುಪೆ: ಮರದಿಂದ ಬಿದ್ದು ವ್ಯಕ್ತಿ ಸಾವು

ಬೆಳ್ತಂಗಡಿ: ಮಲವಂತಿಗೆ ಗ್ರಾಮದ ದಿಡುಪೆ ಸಮೀಪ ಸಿಂಗನಾರುವಿನಲ್ಲಿ ವ್ಯಕ್ತಿಯೊಬ್ಬ ಮನೆಯ ಸಮೀಪದ ಮರದಿಂದ ಜೀಗುಜ್ಜೆ ಕೀಳುತ್ತಿದ್ದ ವೇಳೆ ಜಾರಿ ಬಿದ್ದು ಕಲ್ಲಿಗೆ ತಲೆ ತಾಗಿ ಗಾಯಗೊಂಡು ಮೃತಪಟ್ಟ ಘಟನೆ ಆ.29 ರಂದು ಸಂಜೆ ಸಂಭವಿಸಿದೆ.


ಮೃತ ವ್ಯಕ್ತಿ ಸಿಂಗನಾರು ನಿವಾಸಿ ಶ್ರೀನಿವಾಸ (47ವ) ಎಂಬವರಾಗಿದ್ದಾರೆ.
ಮನೆಯಿಂದ ಹೊರಗೆ ಹೋದ ಇವರು ಹಿಂತಿರುಗಿ ಬಾರದ ಹಿನ್ನಲೆಯಲ್ಲಿ ಮನೆಯವರು ಹುಡುಕಾಟ ನಡೆಸಿದಾಗ ತೋಟದ ಬದಿಯಲ್ಲಿ ಜೀಗುಜ್ಜೆ ಮರದ ಕೆಳಗೆ ಗಂಭೀರವಾಗಿ ಗಾಯಗೊಂಡು ಬಿದ್ದಿರುವುದು ಕಂಡುಬಂದಿದೆ. ತಲೆಗೆ ಗಂಭೀರವಾಗಿ ಗಾಯವಾಗಿದ್ದು ಜೀಗುಜ್ಜೆ ಕೀಳುವ ವೇಳೆ‌ ಇವರು ಕಾಲು ಜಾರಿ ಬಿದ್ದಿರಬಹುದು ಎಂದು ಅನುಮಾನಿಸಲಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ತಂದರೂ ಆವೇಳೆಗೆ ಅವರು ಮೃತಪಟ್ಟಿದ್ದರು ಎಂದು ಮನೆಯವರು ಮಾಹಿತಿ ನೀಡಿದ್ದಾರೆ.


ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು ಬೆಳ್ತಂಗಡಿ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ತಿಳಿದು ಬರಬೇಕಾಗಿದೆ

Related posts

ಎಕ್ಸೆಲ್ ನಿಂದ ಗುರುವಾಯನಕೆರೆ ಸರ್ಕಾರಿ ಶಾಲೆಗೆ ಪೀಠೋಪರಣಗಳ ಖರೀದಿಗೆ ಲಕ್ಷ ಮೊತ್ತದ ಚೆಕ್ ಹಸ್ತಾಂತರ

Suddi Udaya

ಧರ್ಮಸ್ಥಳದಲ್ಲಿ 51ನೇ ವರ್ಷದ ಸಾಮೂಹಿಕ ವಿವಾಹ 201 ಜೋಡಿ ಸತಿ-ಪತಿಗಳಾಗಿ ಗೃಹಸ್ಥಾಶ್ರಮಕ್ಕೆ

Suddi Udaya

ನಿಡ್ಲೆ: 90 ವರ್ಷದ ವಯೋವೃದ್ಧೆ ಸರಸ್ವತಿಯವರಿಂದ ಮತದಾನ

Suddi Udaya

ಮರೋಡಿ: ಹಲ್ಲೆ, ಜೀವ ಬೆದರಿಕೆ ಆರೋಪ, ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಅರಸಿನಮಕ್ಕಿ: ವಿಶ್ವ ಮಹಿಳಾ ದಿನ ಹಾಗೂ ಅರಸಿನಮಕ್ಕಿ ಗೊಂಚಲು ಸ್ತ್ರೀ ಶಕ್ತಿ ಸಂಘದ ಬೆಳ್ಳಿಹಬ್ಬದ ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆ

Suddi Udaya

ಬೆಳ್ತಂಗಡಿಯಲ್ಲಿ ಗಾಂಧಿ ಸ್ಮೃತಿ ಮತ್ತು ನವಜೀವನ ಸಮಿತಿ ಸದಸ್ಯರ ಸಮಾವೇಶ: ನವಜೀವನ ಸಾಧಕರಿಗೆ ಸನ್ಮಾನ

Suddi Udaya
error: Content is protected !!