ಹಿಂದೂ ರುದ್ರಭೂಮಿಗಾಗಿ ನೆರಿಯ ಗ್ರಾಮಸಭೆಯಲ್ಲಿ ಪಂಚಾಯತ್ ಮತ್ತು ಗ್ರಾಮಸ್ಥರ ನಡುವೆ ಚರ್ಚೆ,

Suddi Udaya

ನೆರಿಯ:ನೆರಿಯ ಗ್ರಾಮ ಪಂಚಾಯತ್ ನ 2024-25 ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯು ಪಂಚಾಯತ್ ಅಧ್ಯಕ್ಷೆ ವಸಂತಿಯವರ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಹೇಮಚಂದ್ರ ಮಾರ್ಗದರ್ಶಿ ಅಧಿಕಾರಿಯಾಗಿ ಗ್ರಾಮಸಭೆಯನ್ನು ಮುನ್ನಡೆಸಿದರು.

ಕಳೆದ ಹಲವಾರು ವರ್ಷಗಳ ಗ್ರಾಮಸ್ಥರ ಬೇಡಿಕೆಯಾದ ಹಿಂದೂರುದ್ರ ಭೂಮಿ ಮಾಡಲಾಗದಿದ್ದರೆ ಪಂಚಾಯತ್ ಅಧ್ಯಕ್ಷೆ ರಾಜೀನಾಮೆ ನೀಡಬೇಕು.ಅತೀ ಅಗತ್ಯವಾಗಿ ಬೇಕಾಗಿದ್ದ ಹಿಂದೂ ರುದ್ರಭೂಮಿ ಬೇಡಿಕೆ ಇನ್ನೂ ಈಡೇರಿಲ್ಲ.ಸಾವಿರ ಗಟ್ಟಲೆ ಜಾಗವಿರುವ ನೆರಿಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರುದ್ರಭೂಮಿ ನಿರ್ಮಿಸಲು ಜಾಗವಿಲ್ವ, ಒಂದು ಹಿಂದೂ ಮರಣವಾದರೆ ಅವರ ಅಂತಿಮ‌ ಸಂಸ್ಕಾರ ಎಲ್ಲಿ ಮಾಡುವುದು. ಶ್ರೀಮಂತರಿಗೆ ಜಾಗವಿದೆ. ಬಡವರಿಗೆ ಏನೂ ಮಾಡೋದು.ಮೊದಲು ಗುರುತಿಸಿದ ಜಾಗದಲ್ಲೇ ಹಿಂದೂ ರುದ್ರಭೂಮಿ ಆಗಬೇಕೆಂದು ಗ್ರಾಮಸ್ಥ ಪ್ರಮೋದ್ ಬಂಗೇರ ಹಾಗೂ ಗ್ರಾಮಸ್ಥರು ಒತ್ತಾಯಿಸಿದರು.

ಇಗಾಗಲೇ ಹಿಂದೂ ರುದ್ರಭೂಮಿಗೆ ಸ್ಥಳ ಗುರುತಿಸಿ, ಸರ್ವೆ ಕೆಲಸ ನಡೆದಿದೆ ಎಂದು ಪಂಚಾಯತ್ ಅಧ್ಯಕ್ಷೆ ವಸಂತಿಯವರು ಸ್ಪಷ್ಟನೆ ನೀಡಿದರು.

ಬೆಳೆವಿಮೆ ಸಮೀಕ್ಷೆ ಸರಿಯಾಗಿ ನಡೆಯದಿರುವುದರಿಂದ ಫಲಾನುಭಾವಿಗಳಿಗೆ ಸರಿಯಾಗಿ ಪರಿಹಾರ ಸಿಗುತ್ತಿಲ್ಲ. ಈಗಾಗಲೇ ರೈತರು ಇರುವುದೆ ಕಡಿಮೆ. ಅದರಲ್ಲೂ ಕಷ್ಟದ ಬದುಕು. ಯುವಕರು ನಗರ ಪ್ರದೇಶಗಳಲ್ಲಿ ಉದ್ಯೋಗದಲ್ಲಿದ್ದಾರೆ. ಬೆಳೆ ಸಮೀಕ್ಷೆಯಲ್ಲಿ ತೊಂದರೆಯಾದರೆ ನಾವು ಕೃಷಿಕರು ಯಾರಲ್ಲಿ ಕೇಳುವುದು ಎಂದು ರಾಮ್ ಕುಮಾರ್ ಕೃಷಿ ಅಧಿಕಾರಿಯನ್ನು ಪ್ರಶ್ನಿಸಿದರು.

ನೆರಿಯ ಗ್ರಾಮ‌ ಪಂಚಾಯತ್ ವ್ಯಾಪ್ತಿಯ ನೆಕ್ಕರೆ ಪ್ರದೇಶದಲ್ಲಿ ಹಲವಾರು ಮನೆಗಳಲಿದ್ದು ಹಕ್ಕುಪತ್ರ ಇನ್ನೂ ದೊರೆಯದೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಅಸಾಧ್ಯವಾಗಿದೆ. ಈ ಪ್ರದೇಶ ಅರಣ್ಯ ವ್ಯಾಪ್ತಿಯಲ್ಲಿ ಬರುವುದಿಲ್ಲವೆಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ದಾಖಲೆಯಲ್ಲಿ ಅರಣ್ಯ ಬರುತ್ತದೆ. ಇದರಿಂದ ಹಲವು ಕುಟುಂಬಗಳಿಗೆ ತೊಂದರೆಯಾಗಿದೆ. ಶೀಘ್ರ ಸರಿಪಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು.

ಸುಮಾರು 19 ಮನೆಗಳಿಗೆ 94 ಸಿ ಹಕ್ಕುಪತ್ರ ಸಿಕ್ಕಿರುತ್ತದೆ. 33 ಮನೆಗಳಿಗೆ ಸಿಗಲಿಲ್ಲ. ಇಂತಹ ಸಮಸ್ಯೆಗಳನ್ನು ಕಂದಾಯ ಇಲಾಖೆ,ಅರಣ್ಯ ಇಲಾಖೆ ಜಂಟಿ ಸರ್ವೆ ಮಾಡಿ ಸರಿಪಡಿಸಬೇಕಾಗಿ ಗ್ರಾಮಸ್ಥರು ಒತ್ತಾಯಿಸಿದರು.

ಈ ಸಲ ಸುರಿದ ಬಾರಿ‌ ಮಳೆಗೆ ನೆರಿಯದ ಹಲವಡೆ ಪ್ರಕೃತಿ ವಿಕೋಪದಿಂದ 120 ಕಂಬಗಳು ಬಿದ್ದಿವೆ. ಆದರೆ ಮೆಸ್ಕಾಂ ಇಲಾಖೆ ಒಳ್ಳೆಯ ಕೆಲಸ ಮಾಡಿ,ಶೀಘ್ರವಾಗಿ ಸ್ಪಂದಿಸಿದೆ. ಮೆಸ್ಕಾಂ ಇಲಾಖೆಗೆ ಗ್ರಾಮಸ್ಥರು ಅಭಿನಂದನೆ ತಿಳಿಸಿದರು.

ಕಾಟಾಜೆಯಲ್ಲಿ ಕರೆಂಟ್ ಇಲ್ಲದಿದ್ದರೆ ಬಾಂದಡ್ಕದ ಸುಮಾರ್ 12 ಮನೆಗಳು ಕತ್ತಲೆಯಲ್ಲಿ ಇರಬೇಕಾಗುತ್ತದೆ. ಇಲ್ಲಿ ಟ್ರಾನ್ಸ್ಫರ್ ನ್ನು ಲೈನ್ ಮ್ಯಾನ್ ಬಿಟ್ಟು ಬಾಂದಡ್ಕಕ್ಕೆ ವಿದ್ಯುತ್ ಇರಬಾರದೆಂಬ ಕೆಟ್ಟ ಉದ್ದೇಶದಿಂದ ಬೇರೆಯವರು ಆಫ್ ಮಾಡುತ್ತಿದ್ದಾರೆ ಎಂದು ಮಹಿಳೆಯೊಬ್ಬರು ಮೆಸ್ಕಾಂ ಅಧಿಕಾರಿಯನ್ನು ಕೇಳಿದರು. ಈ ವಿಚಾರದ ಬಗ್ಗೆ ಕ್ರಮ ಕೈಗೊಳ್ಳುತ್ತೇವೆಂದು ಮೆಸ್ಕಾಂ ಅಧಿಕಾರಿ ತಿಳಿಸಿದರು.

ಧರ್ಮಸ್ಥಳದಿಂದ ಬರುವ ಕೆ.ಎಸ್‌‌.ಆರ್.ಟಿ.ಎಸ್ ಬಸ್ಸು ನೆಕ್ಕರೆ,ಪಿಲಿಕ್ಕಳಕ್ಕೆ ಬರುತ್ತೆದೆ.ಮುಂದೆ ಪುದುವಟ್ಟುತನಕ ಬಸ್ಸು ಬರಬೇಕೆಂದು ಮಹಿಳೆಯೊಬ್ಬರು ಒತ್ತಾಯಿಸಿದರು.

ಪಂಚಾಯತ್ ಉಪಾಧ್ಯಕ್ಷೆ ಸಜಿತಾ, ಸದಸ್ಯರು ಉಪಸ್ಥಿತರಿದ್ದರು. ವಿವಿಧ ಇಲಾಖೆಯ ಇಲಾಖಾಧಿಕಾರಿಗಳು ತಮ್ಮ ಇಲಾಖೆಯ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಿದರು.

ಪಂಚಾಯತ್ ಸಿಬ್ಬಂದಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು,ಗ್ರಾಮಸ್ಥರು ಸಹಕರಿಸಿದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಮಾ ಎ ಎಸ್ ಅನುಪಾಲನ ವರದಿ ಮಂಡಿಸಿದರು. ಪಂಚಾಯತ್ ಕಾರ್ಯದರ್ಶಿ ಅಜಿತ್ ಎಂ.ಬಿ ಸ್ವಾಗತಿಸಿದರು.ಮೀನಾಕ್ಷಿ ವಿವಿಧ ಬೇಡಿಕೆಗಳ ವಿವಿರ ನೀಡಿದರು.ಮಧುಮಾಲ ಸಹಕರಿಸಿದರು.

Leave a Comment

error: Content is protected !!