25.4 C
ಪುತ್ತೂರು, ಬೆಳ್ತಂಗಡಿ
May 18, 2025
Uncategorized

ಭಾರಿ ಮಳೆಗೆ ಕಾಶಿಪಟ್ಣ ಶಾಲೆಯ ಕೋಣೆಗಳ ಮೇಲ್ಚಾವಣಿ ಕುಸಿತ: ದುರಸ್ತಿ ಕಾರ್ಯ ಮತ್ತು 4 ಹೊಸ ತರಗತಿಗಳನ್ನು ಮಂಜೂರುಗೊಳಿಸುವಂತೆ ಮನವಿ

ಕಾಶಿಪಟ್ಣ ಸ.ಹಿ.ಪ್ರಾ. ಶಾಲೆಯ ಕೋಣೆಗಳ ಮೇಲ್ಛಾವಣಿ ಸೆ.1 ರಂದು ರಾತ್ರಿ ಸುರಿದ ಭಾರಿ ಮಳೆಗೆ ಕುಸಿದಿದ್ದು ಇದರ ದುರಸ್ತಿ ಕಾರ್ಯ ಮತ್ತು 4 ಹೊಸ ತರಗತಿಗಳನ್ನು ಮಂಜೂರುಗೊಳಿಸುವಂತೆ ಶಾಸಕ ಹರೀಶ್ ಪೂಂಜ ಹಾಗೂ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವಾರಂ ರವರಿಗೆ ಶಾಲಾ ಅಧ್ಯಕ್ಷರು, ಮುಖ್ಯೋಪಾಧ್ಯಾಯರು ಮನವಿಯನ್ನು ಸಲ್ಲಿಸಿದರು.

ಕಾಶಿಪಟ್ಣ ಸ.ಹಿ.ಪ್ರಾ. ಶಾಲೆಯು 1951 ರಲ್ಲಿ ಸ್ಥಾಪನೆಯಾಗಿದ್ದು 2025-26 ನೇ ಸಾಲಿಗೆ 75 ವರ್ಷಗಳು ಪೂರೈಸಿರುತ್ತದೆ. ಪ್ರಸುತ್ತ ಶೈಕ್ಷಣಿಕ ವರ್ಷದಲ್ಲಿ 162 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಶಾಲೆಯ 4 ತರಗತಿಗಳನ್ನು ನಡೆಸುತ್ತಿರುವ ತರಗತಿ ಕೋಣೆಗಳ ಛಾವಣಿ ಸೆ.1 ರಂದು ರಾತ್ರಿ ಕುಸಿದಿರುತ್ತದೆ. ಕುಸಿದಿರುವ ತರಗತಿ ಕೋಣೆಗಳಲ್ಲಿ ತರಗತಿಗಳನ್ನು ನಡೆಸಲು ಅಸಾಧ್ಯವಾಗಿರುತ್ತದೆ. ಆದುದರಿಂದ ಸದ್ರಿ ಶಾಲೆಯ 4 ತರಗತಿ ಕೋಣೆಗಳ ಛಾವಣಿ ದುರಸ್ತಿ ಮಾಡಬೇಕಾಗಿರುವುದರಿಂದ ಅದಕ್ಕೆ ಬೇಕಾಗಿರುವ ಅನುದಾನವನ್ನು ಮಂಜೂರುಗೊಳಿಸಬೇಕಾಗಿ ವಿನಂತಿಸುತ್ತಿದ್ದೇವೆ. ಅಲ್ಲದೆ ಸದ್ರಿ ಶಾಲೆಗೆ 4 ಹೊಸ ತರಗತಿ ಕೋಣೆಗಳ ಅವಶ್ಯಕತೆ ಇರುವುದರಿಂದ ಮಂಜೂರುಗೊಳಿಸಬೇಕಾಗಿ ಸತೀಶ್ ಕಾಶಿಪಟ್ಣ ವಿನಂತಿಸಿದ್ದಾರೆ.

Related posts

ಮಡಂತ್ಯಾರು ಗ್ರಾ.ಪಂ ಪಾರೆಂಕಿ 1 ನೇ ಕ್ಷೇತ್ರದ ಉಪಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ತಡೆ

Suddi Udaya

ಕಡಿರುದ್ಯಾವರದಲ್ಲಿ ಬೈಕ್ ಸವಾರನಿಗೆ ಎದುರಾದ ಕಾಡಾನೆ: ಮಕ್ಕಳ ಸಹಿತ ಕೃಷಿಕ ಜಾರ್ಜ್ ಕೆ.ಜೆ‌. ಅಪಾಯದಿಂದ ಪಾರು

Suddi Udaya

ವಾಣಿ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಪೋಷಕರ ಸಭೆ

Suddi Udaya

ನಾವೂರು: 78 ನೇ ವರ್ಷದ ಸ್ವಾತಂತ್ರ್ಯೋತ್ಸವ

Suddi Udaya

ಬಂದಾರು ಗ್ರಾ.ಪಂ. ದ್ವಿತೀಯ ಹಂತದ ಗ್ರಾಮ ಸಭೆ

Suddi Udaya

ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ದುರ್ವಾಸಾತಿಥ್ಯ ತಾಳಮದ್ದಳೆ

Suddi Udaya
error: Content is protected !!