24.8 C
ಪುತ್ತೂರು, ಬೆಳ್ತಂಗಡಿ
April 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಸುಲ್ಕೇರಿಮೊಗ್ರುವಿನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ: ಕಂಬಳ ಕ್ಷೇತ್ರದಲ್ಲಿ ಸಾಧನೆಗೈದ ಕಿಂಗ್ ತಾಟೆ ಕೋಣಕ್ಕೆ ಸನ್ಮಾನ ಹಾಗೂ ಅಸಕ್ತರಿಗೆ ಅಕ್ಕಿ, ಧನಸಹಾಯ ವಿತರಣೆ

ಸುಲ್ಕೇರಿಮೊಗ್ರು: ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ, ಸುಲ್ಕೇರಿಮೊಗ್ರು ಇದರ ಆಶ್ರಯದಲ್ಲಿ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 10ನೇ ವರ್ಷದ ಮೊಸರು ಕುಡಿಕೆ ಉತ್ಸವದಲ್ಲಿ ಕಂಬಳ ಕ್ಷೇತ್ರದಲ್ಲಿ ಸಾಧನೆಗೈದ ದಿ| ಬಾಡ ಪೂಜಾರಿ ಇರುವೈಲು ಪಾಣಿಲ ಇವರ ಕಿಂಗ್ ತಾಟೆ ಕೋಣಕ್ಕೆ ಸನ್ಮಾನ ಕಾರ್ಯಕ್ರಮ, ಮತ್ತು ಸುಲ್ಕೇರಿಮೊಗ್ರುವಿನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಪ್ರಥಮವಾಗಿ ಆರಂಭಿಸಿದ ಶ್ರೀಧರ ಪೂಜಾರಿಯವರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ಅಸಕ್ತ ಕುಟುಂಬಗಳಿಗೆ ಅಕ್ಕಿ ಹಾಗೂ ಧನಸಹಾಯ ವಿತರಣಾ ಕಾರ್ಯಕ್ರಮವು ಸೆ.1ರಂದು ಜರಗಿತು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಸುಲ್ಕೇರಿಮೊಗ್ರು. ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯ ಅಧ್ಯಕ್ಷ ಸತೀಶ್ ದೇವಾಡಿಗ ವಹಿಸಿದ್ದರು. ವೇದಿಕೆಯಲ್ಲಿ ಉಜಿರೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ, ಸತೀಶ್ಚಂದ್ರ ಸಾಲ್ಯಾನ್ ಇರುವೈಲು ಪಾಣಿಲ,
ಗಣೇಶ್ ನಾರಾಯಣ ಪಂಡಿತ್ ಮೂಡುಕೋಡಿ, ಶ್ರೀಮತಿ ನಮಿತ ಸದಾನಂದ ಪೂಜಾರಿ, ಮಾಳಿಗೆ ಶ್ರೀಮತಿ ವಿಶಾಲಾಕ್ಷಿ, ಬಿ.ಸಿ ರೋಡು. ನಾರಾಯಣ ಗುರು ಸೇವಾ ಸಂಘ ಸುಲ್ಕೇರಿಮೊಗ್ರು ಅಧ್ಯಕ್ಷ ಸಂಕೇತ್ ಬಂಗೇರ, ಸತೀಶ್ ಕುಮಾರ್ ನಮನ ಡಾಬ, ನಾರಾಯಣ ಪೂಜಾರಿ ಪರಂಟ್ಯಾಲ, ಅಳದಂಗಡಿ ಹಾಲು ಉತ್ಪಾದಕರ ಸಂಘ ಉಪಾದ್ಯಕ್ಷ ಅಶೋಕ್ ಉಪಸ್ಥಿತರಿದ್ದರು.

ಸಮೀಕ್ಷಾ ಶಿರ್ಲಾಲು ಕಾರ್ಯಕ್ರಮವನ್ನು ನಿರೂಪಿಸಿ, ನಂದನ್ ಕುಮಾರ್ ಸ್ವಾಗತಿಸಿ, ಸತೀಶ್ ಎಸ್.ಎಂ. ಧನ್ಯವಾದವಿತ್ತರು.

Related posts

ಶಿರ್ಲಾಲು ರಿಕ್ಷಾ ಮಾಲಕ -ಚಾಲಕ ಸಂಘದಿಂದ ಸ್ವಾತಂತ್ರ್ಯ ದಿನಾಚರಣೆ

Suddi Udaya

ವಿದ್ವತ್ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ನೇತ್ರಾ ತಪಾಸಣಾ ಶಿಬಿರ

Suddi Udaya

ಗುರುವಾಯನಕೆರೆ: ಎಕ್ಸೆಲ್ ಕಾಲೇಜಿನಲ್ಲಿ ಅಕ್ಷರೋತ್ಸವ

Suddi Udaya

ಮಾಜಿ ಶಾಸಕ ವಸಂತ ಬಂಗೇರರ ಅಗಲುವಿಕೆಗೆ ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷ ಹರೀಶ್ ಎಳನೀರ್ ಸಂತಾಪ

Suddi Udaya

ವಾಣಿ ಕಾಲೇಜಿನಲ್ಲಿ ನಿಹಾರ್ ಎಸ್. ಆರ್‌ಗೆ ಅಭಿನಂದನೆ

Suddi Udaya

ಕೆದ್ದುವಿನಲ್ಲಿ ಅನಾಥವಾಗಿದ್ದ ಬಾಡಜ್ಜನಿಗೆ ಆಶ್ರಯ ಕಲ್ಪಿಸಿದ ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ ಸಮಾಜ ಸೇವಾ ಸಂಘಟನೆ

Suddi Udaya
error: Content is protected !!