April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಶಿರ್ಲಾಲು ಗ್ರಾ.ಪಂ. ಪ್ರಥಮ ಸುತ್ತಿನ ಗ್ರಾಮ ಸಭೆ

ಶಿರ್ಲಾಲು : ಗ್ರಾಮ ಪಂಚಾಯತ್ ನ 2024-25ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ಸೆ.3ರಂದು ರಂದು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಉಷಾ ಎಂ ರವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಮಾರ್ಗದರ್ಶಿ ಅಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆ ಶ್ರೀಮತಿ ಹೇಮಾಲತಾ ರವರು ಗ್ರಾಮ ಸಭೆಯನ್ನು ಮುನ್ನಡೆಸಿದರು.

ಪಂಚಾಯತ್ ವತಿಯಿಂದ ವಿದ್ಯಾರ್ಥಿಗಳಿಗೆ ಸಿಗುವ ಸಹಾಯ ಧನದ ಕುರಿತಾದ ಮಾಹಿತಿಗಳು ಗ್ರಾಮಸ್ಥರಿಗೆ ತಿಳಿದಿಲ್ಲ. ಈ ಬಗ್ಗೆ ಪಂಚಾಯತ್ ವತಿಯಿಂದ ಮಾಹಿತಿಗಳನ್ನು ನೀಡುವ ಕೆಲಸವಾಗಬೇಕು ಎಂದು ಬಾಬು ಎರ್ಮೆತ್ತೋಡಿ ಹೇಳಿದರು.

ಸರಕಾರ ಅಕೇಶಿಯ ಮರಗಳನ್ನು ನೆಡಲು ಅವಕಾಶವಿಲ್ಲ ಎಂದು ಹೇಳಿದೆ. ಹಾಗೂ ಅದನ್ನು ಕಡಿಯುವಂತಹ ಆದೇಶ ಹೊರಡಿಸಿದೆ. ಶಿರ್ಲಾಲು ವಿನಲ್ಲಿ ಕೆಲವೊಂದು ಭಾಗದಲ್ಲಿ ಅಕೇಶಿಯ ಮರಗಳು ಇದ್ದು ಇದರಿಂದ ನೀರಿನ ಸಮಸ್ಯೆಗಳು ಉಂಟಾಗುತ್ತದೆ ಎಂದು ಗ್ರಾಮಸ್ಥರೋರ್ವರು ಅರಣ್ಯ ಇಲಾಖಾಧಿಕಾರಿಗಳಲ್ಲಿ ತಿಳಿಸಿದರು.

ಸಭೆಯಲ್ಲಿ ಉಪಾಧ್ಯಕ್ಷ ಸೋಮನಾಥ ಬಂಗೇರ, ಸದಸ್ಯರಾದ ಶ್ರೀಮತಿ ಮಮತಾ ಜೈನ್, ಮಾಧವ, ಕೊರಗಪ್ಪ, ಶ್ರೀಮತಿ ಗೀತಾ, ಶ್ರೀಮತಿ ಜ್ಯೋತಿ ಪೂಜಾರಿ, ಶ್ರೀಮತಿ ಸುಶೀಲ, ಶ್ರೀಮತಿ ಗೀತಾ, ಪ್ರಕಾಶ್ ಹೆಗ್ಡೆ, ತಾರಾನಾಥ ಗೌಡ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಪಂ. ಅಭಿವೃದ್ಧಿ ಅಧಿಕಾರಿ ಸುಶೀಲ ಸ್ವಾಗತಿಸಿ, ಅನುಪಾಲನ ವರದಿ ವಾಚಿಸಿದರು. ಪಂ. ಸಿಬ್ಬಂದಿ ಪವಿತಾ ಜಮಾಖರ್ಚು ವಿವರವನ್ನು ಮಂಡಿಸಿದರು.

Related posts

ಶ್ರೀ ಧ.ಮಂ. ಪ್ರಕೃತಿ ಮತ್ತು ಯೋಗ ಕಾಲೇಜು: ಯಶಸ್ವಿ ಚಿಣ್ಣರ ಯೋಗ ತರಬೇತಿ ಶಿಬಿರದ ಸಮಾರೋಪ

Suddi Udaya

ಕಳೆಂಜ ಗ್ರಾಮದ ಕಾಯ೯ತ್ತಡ್ಕದಲ್ಲಿ ತಾಯಿ ಪುಟ್ಟ ಮಗುವಿನೊಂದಿಗೆ ನಾಪತ್ತೆ

Suddi Udaya

ಬಂದಾರು: ಬೈಹುಲ್ಲು ಸಾಗಾಟದ ಲಾರಿಗೆ ಬೆಂಕಿ

Suddi Udaya

ಮುಂಡಾಜೆ: ಅರಸುಮಜಲು ನಿವಾಸಿ ಗುರುವಪ್ಪ ಪೂಜಾರಿ ನಿಧನ

Suddi Udaya

ವೇಣೂರು ಶ್ರೀ ಬಾಹುಬಲಿ ಬೆಟ್ಟದ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ

Suddi Udaya

ಕನ್ಯಾಡಿ-2 ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya
error: Content is protected !!