September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮನನೊಂದು ಸುತ್ತಾಡುತ್ತಿದ್ದ ಮಹಿಳೆಗೆ ಸಾಂತ್ವನ ಹೇಳಿ, ಕುಟುಂಬದ ಜೊತೆ ಕಳಿಸಿ ಮಾನವೀಯತೆ ಮೆರೆದ ಸಮಾಜ ಸೇವಕ ರವಿ ಕಕ್ಕೆಪದವು

ಬೆಳ್ತಂಗಡಿ:ಕುಕ್ಕೆ ಸುಬ್ರಮಣ್ಯ ಕುಮಾಧಾರದ ಹತ್ತಿರ ಮಹಿಳೆಯೊರ್ವರು ಮನನೊಂದು ಅಲ್ಲಿ ಇಲ್ಲಿ ಸುತ್ತಾಡುತ್ತಿರುವ ವೇಳೆ ಬಿಎಂಎಸ್ ಆಟೋ ಚಾಲಕ ಮಾಲಕರ ಸಂಘ ಹಾಗೂ ಸಮಾಜ ಸೇವಾ ಟ್ರಸ್ಟ್ ನ ಕೋಶಾಧಿಕಾರಿಯಾದ ಮಣಿಕಂಠನವರು ಇದನ್ನು ಗಮನಿಸಿ ತತಕ್ಷಣವೇ ಸಮಾಜ ಸೇವಕ ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷರಾದ ರವಿ ಕಕ್ಕೆ ಪದವು ರವರಿಗೆ ಮಾಹಿತಿ ನೀಡಿದರು.

ತಕ್ಷಣವೇ ರವಿ ಕಕ್ಯೆಪದವು ಬಂದು ಆ ಮಹಿಳೆಯನ್ನು ವಿಚಾರಿಸಿದಾಗ ಆ ಮಹಿಳೆ ಮನನೊಂದು ನಾನು ಸಾಯಬೇಕು ಎನ್ನುವ ದುಃಖವನ್ನು ತೋಡಿಕೊಂಡರು.ನಂತರ ರವಿ ಕಕ್ಕೆ ಪದವು ಹಾಗೂ ಮಣಿಕಂಠನವರು ಸೇರಿ ಮಹಿಳೆಯ ಕುಟುಂಬಸ್ಥರನ್ನು ಸಂಪರ್ಕಿಸಿ,ಅವರನ್ನು ಕುಕ್ಕೆಸುಬ್ರಹ್ಮಣ್ಯಕ್ಕೆ ಕರೆಸಿ ಮಾತನಾಡಿ ಮಹಿಳೆಯನ್ನು ಕುಟುಂಬದ ಜೊತೆ ಕಳಿಸುವ ಕೆಲಸ ಮಾಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರು.

Related posts

ಬೆಳ್ತಂಗಡಿ :ಸ್ಕ್ರೀನ್ ಪ್ರಿಂಟ್ ಮಾಲಕ ಬಿ.ಕೆ. ಹರಿಪ್ರಸಾದ್ ಆಚಾರ್ಯ ಹೃದಯಾಘಾತದಿಂದ ನಿಧನ

Suddi Udaya

ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ಧೇಶ ಸಹಕಾರ ಸಂಘ ಕಕ್ಕಿಂಜೆ ಶಾಖೆ ಉದ್ಘಾಟನೆ

Suddi Udaya

ಜೀವ ಬೆದರಿಕೆ ಆರೋಪ : ಕೆ.ಎನ್ ಗೌಡರಿಂದ ಠಾಣೆಗೆ ದೂರು

Suddi Udaya

ತಣ್ಣೀರುಪಂತ ರುದ್ರಗಿರಿ ಶ್ರೀ ಮೃತ್ಯುಂಜಯ ದೇವಸ್ಥಾನದ ಪ್ರತಿಷ್ಠಾ ದಿನ ಹಾಗೂ ವಾರ್ಷಿಕ ಜಾತ್ರೆ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಕುಕ್ಕೆ ಸುಬ್ರಹಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ದಂಪತಿ ಭೇಟಿ

Suddi Udaya

ವೇಣೂರು ಐಟಿಐಯಲ್ಲಿ ವಾರ್ಷಿಕ ಕ್ರೀಡೋತ್ಸವ

Suddi Udaya
error: Content is protected !!