ವೇಣೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕುಂಭಶ್ರೀ ವಸತಿ ಶಾಲೆ ಮತ್ತು ಕಾಲೇಜು ಇದರ ಸಹಭಾಗಿತ್ವದಲ್ಲಿ ವಲಯ ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟವು ಸೆ. 3 ರಂದು ಕುಂಭಶ್ರೀ ವಿದ್ಯಾ ಸಂಸ್ಥೆಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂಭಶ್ರೀ ಸಂಸ್ಥೆಯ ಸಂಸ್ಥಾಪಕರಾದ ಗಿರೀಶ್ ಕೆ ಎಚ್ ತಮ್ಮ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಎಲ್ಲರನ್ನೂ ಸ್ಮರಿಸಿಕೊಂಡರು, ಸೂಕ್ತ ಸಮಯದಲ್ಲಿ ಕಬಡ್ಡಿ ಪಂದ್ಯಾವಳಿಗೆ ಮ್ಯಾಟ್ ನ್ನು ಒದಗಿಸಿ ಸಹಕರಿಸಿದ ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ಇವರ ಹೃದಯ ವೈಶಾಲ್ಯತೆಯನ್ನು ಸ್ಮರಿಸಿದರು. ಮಂಗಳೂರು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಧರಣೇಂದ್ರ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ವಲಯ ಮಟ್ಟದ ಮ್ಯಾಟ್ ಕಬ್ಬಡಿ ಪಂದ್ಯಾಟವು ಇದುವರೆಗೆ ಎಲ್ಲಿಯೂ ನಡೆದಿಲ್ಲ ಇವತ್ತು ಈ ಕುಂಭಶ್ರೀ ವಿದ್ಯಾ ಸಂಸ್ಥೆಯಲ್ಲಿ ನಡೆಯಬೇಕಾದರೆ ಆಡಳಿತ ಮಂಡಳಿ ಪಟ್ಟ ಶ್ರಮವೇ ಇದಕ್ಕೆ ಕಾರಣ. ಈ ವಿದ್ಯಾಸಂಸ್ಥೆಯು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಕುಕ್ಕೆಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಮತಿ ಅನಿತಾ ಪಾಣೂರುಕಾರ್ಯಕ್ರಮವನ್ನು ಉದ್ದೇಶಿಸಿ ಸಂಸ್ಥೆಯು ಸಂಸ್ಕಾರಯುತ ಶಿಕ್ಷಣವನ್ನು ನೀಡುತ್ತಿದ್ದು ಇಲ್ಲಿನ ವಿದ್ಯಾರ್ಥಿಗಳು ಉತ್ತಮ ಮಟ್ಟದಲ್ಲಿ ಬೆಳೆಯುತ್ತಿದ್ದಾರೆ ಎಂದು ತಿಳಿಸಿದರು. ಅತಿಥಿಯಾಗಿ ನಿಟ್ಟಡೆ ಮತ್ತು ಪಡ್ಡ0ದಡ್ಕ ಕ್ಲಸ್ಟರ್ ನ ಸಿ ಆರ್ ಪಿ ಯಾದ ಆರತಿ ಪಂದ್ಯಾಳುಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಕುಂಭಶ್ರೀ ವಿದ್ಯಾ ಸಂಸ್ಥೆಯ ಸಂಚಾಲಕರು ಅಶ್ವಿತ್ ಕುಲಾಲ್ ,ಶೇಖರ್ ಎಂ ನೋಡಲ್ ಅಧಿಕಾರಿ, ಫಾರೂಕ್ ಏ ಒನ್ ಟ್ರೇಡರ್ಸ್ ಮಂಗಳೂರು, ಶ್ರೀಮತಿ ಸುಜಾತ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರು, ಹರೀಶ್ ನಾಯಕ್ ನಾಯಕ್ ಸ್ವೀಟ್ ವೇಣೂರು , ಸತೀಶ್ ಚಿಗುರು ಗಣೇಶ್ ಎಲೆಕ್ಟ್ರಿಕಲ್ಸ್ ವೇಣೂರು, ಕುಂಭಶ್ರೀ ಕಾಲೇಜಿನ ಪ್ರಾಂಶುಪಾಲರಾದ ಓಮನ ,ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರುಗಳು ಮತ್ತು ವೈಭವ ಸಮಿತಿಯ ಮಾಜಿ ಅಧ್ಯಕ್ಷರುಗಳು ಹಾಗೂ ಎಲ್ಲಾ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಹಿರಿಯ ಪ್ರಾಥಮಿಕ ವಿಭಾಗದ ಶಿಕ್ಷಕಿ ಸುಜಾತ ಮತ್ತು ಕಿರಿಯ ಪ್ರಾಥಮಿಕ ವಿಭಾಗದ ಶಿಕ್ಷಕಿ ಭವಾನಿ ದಿವ್ಯ ನಿರೂಪಿಸಿ, ಪ್ರೌಢಶಾಲಾ ವಿಭಾಗದ ಕನ್ನಡ ಶಿಕ್ಷಕಿ ಗೌತಮಿ ಸ್ವಾಗತಿಸಿ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಅಕ್ಷತಾ ವಂದಿಸಿದರು.