ಬೆಳ್ತಂಗಡಿ : ಶಿಕ್ಷಕರ ದಿನಾಚರಣೆ ಸಮಿತಿ, ಬೆಳ್ತಂಗಡಿ (ದ.ಕ.) ತಾಲೂಕು ಪಂಚಾಯತ್, ಬೆಳ್ತಂಗಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಪಟ್ಟಣ ಪಂಚಾಯತ್, ಬೆಳ್ತಂಗಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಡಾ| ಸರ್ವಪಲ್ಲಿ ರಾಧಾಕೃಷ್ಣನ್ ಇವರ ಜನ್ಮದಿನೋತ್ಸವ ಮತ್ತು ಶಿಕ್ಷಕರ ದಿನಾಚರಣೆಯು ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಸೆ. 05 ರಂದು ಜರುಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ ನೆರವೇರಿಸಿ ಶುಭಹಾರೈಸಿದರು.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್, ಬೆಳ್ತಂಗಡಿ ಪ.ಪಂ. ಅಧ್ಯಕ್ಷ ಜಯಾನಂದ ಗೌಡ, ಪಟ್ಟಣ ತಾ.ಪಂ ಆಡಳಿತಾಧಿಕಾರಿ ಪಿ. ಜ್ಞಾನೇಶ್ ಎಂ.ಪಿ, ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್, ಪ.ಪಂ. ಮುಖ್ಯಾಧಿಕಾರಿ ರಾಜೇಶ್, ಶಿಕ್ಷಕ ಸಂಘಟನೆಯ ಅಧ್ಯಕ್ಷರು ಉಪಸ್ಥಿತರಿದ್ದರು.
ಈ ವೇಳೆ 23 ಮಂದಿ ನಿವೃತ್ತ ಶಿಕ್ಷಕರ ಸನ್ಮಾನ ಕಾರ್ಯಕ್ರಮವು ನಡೆಯಿತು. 2023-24 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಶೇ. 100 ಫಲಿತಾಂಶ ಪಡೆದ ಶಾಲೆಗಳಿಗೆ ಗೌರವ ಸಮರ್ಪಣೆ , ಎಸ್.ಎಸ್.ಎಲ್.ಸಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ, ಹಾಗೂ ಎಸ್.ಎಸ್.ಎಲ್.ಸಿ ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿಶೇಷ ಚೇತನ ಮಕ್ಕಳಿಗೆ ಗೌರವಾರ್ಪಣೆ ನಡೆಯಿತು. 2023-24ನೇ ಸಾಲಿನ ರಾಜ್ಯ ಮಟ್ಟದ ಹಾಗೂ ಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರ ನ್ನು ಗೌರವಿಸಲಾಯಿತು.ರಾಮಕೃಷ್ಣ ಭಟ್ ಚೊಕ್ಕಾಡಿ , ಮೇರಿ ಎನ್.ಜೆ. ನಿವೃತ್ತ ಶಿಕ್ಷಕರ ಪರವಾಗಿ ಅನಿಸಿಕೆ ವ್ಯಕ್ತಪಡಿಸಿದರು.
ರಾಜ್ಯ ಪ್ರಶಸ್ತಿ ಪಡೆದ ಪುತ್ತಿಲ ಶಾಲೆಯ ಮಹೇಂದ್ರ ಪೂಜಾರಿ, ಮಾಯಾ ಶ್ರೀಮತಿ ಜ್ಯೋತಿ ರವರಿಗೆ ಅಭಿನಂದಿಸಲಾಯಿತು , ಹಾಗೂ 2022-23 ನೇ ಸಾಲಿನ ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕರಾದ ಪೆರ್ಲ ಬೈಪಾಡಿ ಶಾಲೆಯ ಬಾಲಕೃಷ್ಣ , ಬೆಳ್ತಂಗಡಿ ಮಾದರಿ ಶಾಲೆಯ ಅಖಿಲ್, ಬಡಗಕಾರಂದೂರು ಶಾಲೆಯ ಶ್ರೀಮತಿ ಮಂಗಳ ರವರಿಗೆ ಅಭಿನಂದಿಸಲಾಯಿತು.
ಬಿ. ರಾಜಶೇಖರ ಅಜ್ರಿ ರವರಿಂದ ದತ್ತಿನಿಧಿ ಸಮರ್ಪಣೆ ನಡೆಯಿತು. ಬಹುಮಾನ ವಿತರಣೆಯನ್ನು ನಿರಂಜನ್ ನಡೆಸಿದರು. ಸಾಂಸ್ಕೃತಿಕ ಸ್ಪರ್ಧೆ ಹಾಗೂ ಕ್ರೀಡಾ ಪ್ರತಿಭೆಗಳ ಪುರಸ್ಕಾರವನ್ನು ಬೆಳ್ತಂಗಡಿ ಮಾದರಿ ಶಾಲೆಯ ಶ್ರೀಮತಿ ಶುಭಾ ಕೆ. ಹಾಗೂ ದೈ.ಶಿ. ಪರಿವೀಕ್ಷಣಾಧಿಕಾರಿ ಶ್ರೀಮತಿ ಸುಜಯ ಬಿ. ವಹಿಸಿದರು.
ಪ್ರೌಢ ಶಾಲಾ ಮುಖ್ಯ ಶಿಕ್ಷಕ ಸಂಘದ ಅಧ್ಯಕ್ಷರಾದ ವೆಂಕಟೇಶ್ ತುಳುಪುಳೆ , ರಾಧಕೃಷ್ಣ ತಚ್ಚಮೆ, ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪೆರ್ಲಬೈಪಾಡಿ ಶಾಲೆಯ ಶಿಕ್ಷಕಿ ಶ್ರೀಮತಿ ಮೇಧಾ ಪ್ರಾರ್ಥಿಸಿ, ಬಡಗಕಾರಂದೂರು ಶಾಲೆಯ ಶ್ರೀಮತಿ ಮಂಗಳಾ ಮತ್ತು ತಂಡ ರೈತಗೀತೆ ಹಾಡಿದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ಪ್ರಾಸ್ತವಿಕ ಮಾತನಾಡಿದರು. ಬಿ. ರಾಜಶೇಖರ ಅಜ್ರಿ ನಿರೂಪಿಸಿದರು. ಬೆಳ್ತಂಗಡಿ ಶ್ರೀಮತಿ ಚೇತನಾಕ್ಷಿ ಧನ್ಯವಾದವಿತ್ತರು.