ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಸೆ.7-11: ಬೆಳ್ತಂಗಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ 63ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬೆಳ್ತಂಗಡಿಯಲ್ಲಿ 63ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸೆ.೭ರಿಂದ ಸೆ.೧೧ರವರೆಗೆ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾ ಭವನ ಸಮಾಜ ಮಂದಿರ ರಸ್ತೆ, ಬೆಳ್ತಂಗಡಿಯಲ್ಲಿ ವಿಜೃಂಭಣೆಯಿಂದ ನಡೆಯಲಿದೆ.

ಸೆ.7ರಂದು ಬೆಳಿಗ್ಗೆ ಮೂರ್ಜೆ ಶಿವಶಂಕರ ಪ್ರಭು ಇವರಿಂದ ಉದ್ಘಾಟನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸೆ.೮ರಂದು ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ ೬.೩೦ರಿಂದ ಶಿರಡಿ ಶ್ರೀ ಸತ್ಯಸಾಯಿ ಕ್ಷೇತ್ರ ಹಳೆಕೋಟೆ ಇವರಿಂದ ಇವರಿಂದ ಭಜನೆ, ಸೆ.9 ರಂದು ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ 6ರಿಂದ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆ ಇವರಿಂದ ಪ್ರದರ್ಶನ ಭೃಗು ಲಾಂಛನ-ಶ್ರೀನಿವಾಸ ಕಲ್ಯಾಣ ಶಬರಾರ್ಜುನ ಯಕ್ಷಗಾನ ಪ್ರದರ್ಶನ, ಸೆ.10ರಂದು ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆಮ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ 7ರಿಂದ ಉಜಿರೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಂದ “ಕಲಾ ವೈಭವ”, ಸೆ.11ರಂದು ಬೆಳಿಗ್ಗೆ ಧಾರ್ಮಿಕ ಸಭೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಮಹಾಪೂಜೆ, ಪ್ರಸಾದ ವಿತರಣೆ ನಂತರ ವೈಭವ ಪೂರ್ಣ ಶೋಭಾಯಾತ್ರಯೊಂದಿಗೆ ಬೆಳ್ತಂಗಡಿಯ ಪುಣ್ಯನದಿಯಲ್ಲಿ ಶ್ರೀ ವಿಘ್ನೇಶ್ವರನ ವಿಗ್ರಹ ವಿಸರ್ಜನೆ ನಡೆಯಲಿದೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ.

Related posts

ಬೆಳ್ತಂಗಡಿ ಸರಕಾರಿ ಐ.ಟಿ.ಐ 2024ನೇ ಸಾಲಿನ ಪ್ರವೇಶಕ್ಕೆ ಅರ್ಜಿ ಆಹ್ವಾನ

Suddi Udaya

ಕುತ್ಲೂರು ಶ್ರೀ ಗುರುನಾರಾಯಣ ಸೇವಾ ಸಂಘದಲ್ಲಿ ಬೃಹತ್ ಆಧಾರ್ ನೋಂದಣಿ/ತಿದ್ದುಪಡಿ, ಅಪಘಾತ ಹಾಗೂ ಆರೋಗ್ಯ ವಿಮೆ ಮೇಳ

Suddi Udaya

ಮಾ 26-29: ಕೊಕ್ರಾಡಿಯ ಬಾಕ್ಯಾರು ಹೇರ್ದಂಡಿ ಗರಡಿಯಲ್ಲಿ ದೈವಗಳ ಪುನರ್ ಪ್ರತಿಷ್ಠೆ, ಬ್ರಹ್ಮಕುಂಭಾಭಿಷೇಕ, ನೇಮೋತ್ಸವ

Suddi Udaya

ಕಾರು ಹಾಗೂ ಒಮಿನಿ ವಾಹನದಲ್ಲಿ ಬಂದ ತಂಡದಿಂದ ಜೀವ ಬೆದರಿಕೆ ಆರೋಪ: ಬೆಳ್ತಂಗಡಿ ಪೊಲೀಸರಿಗೆ ದೂರು

Suddi Udaya

ಸೀನಿಯರ್ ನ್ಯಾಶನಲ್ ನೆಟ್ಬಾಲ್ ಪಂದ್ಯಾಟ : ಉಜಿರೆಯ ಎಸ್.ಡಿ.ಎಂ ವಿದ್ಯಾರ್ಥಿಗಳ ಸಾಧನೆ

Suddi Udaya

ಸುಲ್ಕೇರಿ ಬ್ರಹ್ಮ ಶ್ರೀ ಗುರುನಾರಾಯಣ ಸೇವಾ ಸಮಿತಿಯಿಂದ ಶ್ರೀ ಗುರುಪೂಜೆ: ಮಾತೃ ಸಂಘದಿಂದ ಮಂಜೂರಾದ 2 ಅಶಕ್ತ ಕುಟುಂಬಗಳಿಗೆ ಸಹಾಯಧನ ವಿತರಣೆ

Suddi Udaya
error: Content is protected !!