September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ನಡ: ಪಣಿಕ್ಕಲ ನಿವಾಸಿ ಧರ್ಣಪ್ಪ ಪೂಜಾರಿ ನೇಣು ಬಿಗಿದು ಆತ್ಮಹತ್ಯೆ

ನಡ: ಮಂಜೊಟ್ಟಿ ಪಣಿಕ್ಕಲ ನಿವಾಸಿಯಾದ ಧರ್ಣಪ್ಪ ಪೂಜಾರಿ(55 ವರ್ಷ) ಇವರು ಸೆ.4ರಂದು ಸಂಜೆ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ನಡ ಗ್ರಾಮದ ಪಣಿಕ್ಕಲ ನಿವಾಸಿ ಲಲಿತ ರವರ ದೂರಿನಂತೆ ಲಲಿತ ರವರ ಪತಿ ದರ್ಣಪ್ಪ ಪೂಜಾರಿ ರವರು ಮದುವೆಯಾಗಿ 28 ವರ್ಷಗಳಾಗಿದ್ದು ಮಕ್ಕಳಾಗಿರುವುದಿಲ್ಲ ಇದೇ ವಿಚಾರದಲ್ಲಿ ಲಲಿತ ಪತಿ ಧರ್ಣಪ್ಪ ಪೂಜಾರಿ ರವರು ಮಾನಸಿಕವಾಗಿ ಮನನೊಂದು ಮಾನಸಿಕ ಖಾಯಿಲೆಗೆ ತುತ್ತಾಗಿದ್ದವರು ಸುಮಾರು 10 ವರ್ಷಗಳಿಂದ ಮಾನಸಿಕ ತಜ್ಞರಿಂದ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದವರು ಸುಮಾರು 5 ತಿಂಗಳಿನಿಂದ ಯಾವುದೇ ಕೆಲಸಕ್ಕೂ ಹೋಗದೆ ಮನೆಯಲ್ಲಿಯೇ ಇದ್ದುದಾಗಿರುತ್ತದೆ. ಹೀಗಿರುವಾಗ ಸೆ.04 ರಂದು ಲಲಿತ ರವರು ಸಂಜೆ 4.30 ಗಂಟೆಗೆ ಮಂಜೊಟ್ಟಿ ಹಾಲಿನ ಡಿಪೊಗೆ ಹೋಗಿದ್ದು ಸಂಜೆ 5.30 ಗಂಟೆಗೆ ಮನೆಗೆ ವಾಪಾಸ್ಸು ಬಂದು ನೋಡಿದಾಗ ಲಲಿತ ಗಂಡ ಮನೆಯ ಛಾವಡಿಗೆ ಹಾಕಿದ ಮರದ ಅಡ್ಡಕ್ಕೆ ನೇಣು ಬಿಗಿದುಕೊಂಡಿರುವುದನ್ನು ಕಂಡು ನೆರೆ ಮನೆಯ ಲಲಿತ ರವರ ಅಣ್ಣ ಉಮೇಶ್ ಎಂಬಾತನನ್ನು ಬರಮಾಡಿಕೊಂಡು ಕುತ್ತಿಗೆಗೆ ಬಿಗಿದುಕೊಂಡಿದ್ದ ಬೈರಾಸ್ ನ್ನು ತುಂಡು ಮಾಡಿ ಚಿಕಿತ್ಸೆಯ ಬಗ್ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಆಸ್ಪತ್ರೆಯ ವೈಧ್ಯಾಧಿಕಾರಿಯವರು ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ.

ಈ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣಾ ಅಪರಾದ 38/2024 ಕಲಂ: 194 ಬಿಎನ್ ಎಸ್ ಎಸ್ ಯಂತೆ ಪ್ರಕರಣ ದಾಖಲಾಗಿರುತ್ತದೆ.

Related posts

ಆದಿಚುಂಚನಗಿರಿ ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿರವರನ್ನುಭೇಟಿ ಮಾಡಿದ ಕಿರಣ್ ಚಂದ್ರ ಪುಷ್ಪಗಿರಿ

Suddi Udaya

ರಕ್ತಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿರುವ ಎರಡು ವರ್ಷದ ಮಗುವಿನ ಚಿಕಿತ್ಸೆಗೆ ನೆರವಾಗಿ

Suddi Udaya

ರಾಜಕೇಸರಿ ಸೇವಾ ಟ್ರಸ್ಟ್ ವತಿಯಿಂದ ಆರಂಬೋಡಿ ಕಿ. ಪ್ರಾ. ಶಾಲೆಗೆ ಬಟ್ಟಲು ಮತ್ತು ಗ್ಯಾಸ್ ಸ್ಟವ್ ವಿತರಣೆ

Suddi Udaya

ಬೆಳ್ತಂಗಡಿ ಮಹಿಳಾ ವೃಂದದ ನೂತನ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ನೇತ್ರಾ ಅಶೋಕ್, ಪ್ರ.ಕಾರ್ಯದರ್ಶಿಯಾಗಿ ಪ್ರೀತಿ ರತೀಶ್ ರಾವ್, ಕೋಶಾಧಿಕಾರಿಯಾಗಿ ರೇಖಾ ಸುಧೀರ್ ರಾವ್

Suddi Udaya

ಉಜಿರೆ ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ಗ್ರಂಥಪಾಲಕರ ದಿನಾಚರಣೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ಅಂತರಾಷ್ಟ್ರೀಯ ಆರೋಗ್ಯ ದಿನದ ಆಚರಣೆ

Suddi Udaya
error: Content is protected !!