ಪಡಂಗಡಿ: ಶ್ರೀ ಕ್ಷೇತ್ರ ಓಡೀಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ, 34ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ವಿವಿಧ ವೈಧಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸೆ.7ರಿಂದ ಸೆ.9 ರವರೆಗೆ ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರುಗಲಿದೆ.
ಸೆ.7ರಂದು ಸಾರ್ವಜನಿಕರಿಗೆ ಆಟೋಟ ಸ್ಪರ್ಧೆ, ಸೆ.8ರಂದು ಬೆಳಿಗ್ಗೆ 11ರಿಂದ ಶ್ರೀ ಕೃಷ್ಣ ಗಾನಸುಧ ಕವಿತಾ ಕೋರ್ನಾಯ ಇವರ ಶಿಷ್ಯವೃಂದದವರಿಂದ ಸಂಗೀತ ಕಾರ್ಯಕ್ರಮ, ರಾತ್ರಿ 7 ರಿಂದ ಕಲಾ ಸಿಂಧೂ ಕಲಾವತಿ ದಯಾನಂದ ಸಂಗೀತ ಬಳಗ, ಉಡುಪಿ ಕರ್ನಾಟಕ ಸ್ಟೇಟ್ ಅವಾರ್ಡ್ ವಿನ್ನರ್, ಕಲರ್ಸ್ ಕನ್ನಡ ಕನ್ನಡ ಕೋಗಿಲೆ ಖ್ಯಾತಿಯ ಕಲಾವತಿ ದಯಾನಂದ್ ಇವರ ಬಳಗದಿಂದ ಸಂಗೀತ ಸಂಜೆ ಸುಗಮ ಸಂಗೀತ ಜಾನಪದ ತತ್ವಪದಗಳು, ಭಾವಗೀತೆ, ದಾಸ ಸಾಹಿತ್ಯ ಭಕ್ತಿ ಗೀತೆ, ದೇಶ ಭಕ್ತಿ ಗೀತೆ, ಒಳಗೊಂಡ ಕಾರ್ಯುಕ್ರಮ, ಸೆ9 ರಂದು ಸಂಜೆ 6 ರಿಂದ ಝೀ ಕನ್ನಡ ಡ್ಯಾನ್ಸ್ ಕರ್ನಾಟಕ ಡಾನ್ಸ್ ಖ್ಯಾತಿಯ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿ ವಿಜೇತ ತಂಡವಾದ ಜಿತೇಶ್ ಕುಮಾರ್ ನೇತೃತ್ವದ ಬೀಟ್‌ರಾಕರ್ಸ್ ಡ್ಯಾನ್ಸ್ ಅಕಾಡೆಮಿ ಬೆಳ್ತಂಗಡಿ ತಂಡದವರಿಂದ ‘ನೃತ್ಯ ವೈಭವ’ ರಾತ್ರಿ 8ರಿಂದ ಶ್ರೀ ವಿಶ್ವೇಶ್ವರನ ವೈಭವ ಪೂರ್ಣ ಶೋಭಾಯಾತ್ರೆಯು ಚೆಂಡೆ ಕುಣಿತ ಭಜನೆಯ ಮೂಲಕ ಶ್ರೀ ಕ್ಷೇತ್ರ ಓಡೀಲು ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರಟು ದೇವಸ್ಥಾನದ ಪುಷ್ಕರಣಿಯಲ್ಲಿ ಶ್ರೀ ವಿಶ್ವೇಶ್ವರನ ಮೂರ್ತಿಯನ್ನು ಜಲಸ್ಥಂಭನಗೊಳಿಸಲಾಗುವುದು ಎಂದು ರಾಜ್ ಪ್ರಕಾಶ್ ಶೆಟ್ಟಿ ಪಡ್ಡೈಲು ತಿಳಿಸಿದ್ದಾರೆ.