ಕಳಿಯ ಗ್ರಾ.ಪಂ. ನಲ್ಲಿ ಹುಚ್ಚು ನಾಯಿ ಉಚಿತ ರೋಗ ನಿರೋಧಕ ಲಸಿಕಾ ಶಿಬಿರ

Suddi Udaya

Updated on:

ಕಳಿಯ : ಗ್ರಾಮ ಪಂಚಾಯಿತಿ ಕಳಿಯ ಮತ್ತು ಪಶುಸಂಗೋಪನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಇದರ ಸಂಯುಕ್ತ ಆಶ್ರಯದಲ್ಲಿ ಹುಚ್ಚು ನಾಯಿ ಉಚಿತ ರೋಗ ನಿರೋಧಕ ಲಸಿಕಾ ಶಿಬಿರವು ಸೆ. 5 ರಂದು ಕಳಿಯ ಗ್ರಾಮ ಪಂಚಾಯಿತಿ ವಠಾರದಲ್ಲಿ ಜರಗಿತು.


ಲಸಿಕ ಶಿಬಿರವನ್ನು ಕಳಿಯ ಗ್ರಾಮ ಪಂಚಾಯತಿ ಅಧ್ಯಕ್ಷ ದಿವಾಕರ ಎಂ ಚಾಲನೆ ನೀಡಿ ಮಾತಾನಾಡಿ ರೇಬಿಸ್ ರೋಗದ ನಿರ್ಮೂಲನೆಗೆ ಪಂಚಾಯತ್ ಕಡೆಯಿಂದ ಸಂಪೂರ್ಣ ಸಹಕಾರ ನೀಡುತ್ತೇವೆಂದು ಭರವಸೆ ನೀಡಿದರು.

ಈ ವೇಳೆ ಪಶು ವೈದ್ಯಕೀಯ ಸೇವಾ ಇಲಾಖೆ ಬೆಳ್ತಂಗಡಿ ಇದರ ಸಹಾಯಕ ನಿರ್ದೇಶಕರಾದ ಡಾ. ರವಿಕುಮಾರ್ ರವರು ಈ ಶಿಬಿರದ ಬಗ್ಗೆ ಮಾಹಿತಿ ನೀಡುತ್ತಾ ಕೇಂದ್ರ ಸರ್ಕಾರದ ಯೋಜನೆಯಂತೆ 2030 ಅವಧಿಗೆ ರೇಬಿಸ್ ರೋಗ ಸಂಪೂರ್ಣ ನಿರ್ಮೂಲನಾ ಬಹುದೊಡ್ಡ ಕನಸಾಗಿದ್ದು ಇದನ್ನು ನನಸುಗೊಳಿಸಬೇಕಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ನಿಕಟಪೂರ್ವ ಅದ್ಯಕ್ಷರಾದ ಶ್ರೀಮತಿ ಸುಭಾಷಿಣಿ ಕೆ , ಪಂಚಾಯತ್ ಸದಸ್ಯರಾದ ವಿಜಯ ಕುಮಾರ್ ಹಾಗೂ ಸ್ಥಳಿಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪಶು ವೈದ್ಯಕೀಯ ಸೇವಾ ಇಲಾಖೆ ಬೆಳ್ತಂಗಡಿ ಇಲ್ಲಿಯ ಸಿಬ್ಬಂದಿಗಳಾದ ರಂಗನಾಥ್ ಸಿ ಆರ್ ಮತ್ತು ಚಂದ್ರಕುಮಾರ್ , ಕಳಿಯ ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ, ರವಿ ಹೆಚ್, ಸುರೇಶ್ ಕುಮಾರ್ ,ಸುಚಿತ್ರಾ, ಶಶಿಕಲಾ , ನಂದಿನಿ, ಮಾನಸ, ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಶುಸಖಿಯಾದ ಕೆ ರೂಪ ಸಹಕರಿಸಿದರು.

ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವೈದ್ಯರ 2 ತಂಡಗಳನ್ನು ರಚಿಸಿ ಸುಮಾರು 17 ಕ್ಕೂ ಹೆಚ್ಚಿನ ಕಡೆ ಸುಮಾರು 20೦ ಕ್ಕೂ ಹೆಚ್ಚು ಸಾಕು ನಾಯಿಗಳಿಗೆ ಹುಚ್ಚು ನಾಯಿ ರೋಗ ನಿರೋಧಕ ಲಸಿಕೆಯನ್ನು ಉಚಿತವಾಗಿ ಹಾಕಿಸಿ ಕೊಂಡರು.

ಪಂಚಾಯತ್ ಕಾರ್ಯದರ್ಶಿಯವರಾದ ಕುಂಞ ಕೆ ಇವರು ಸ್ವಾಗತಿಸಿ, ಧನ್ಯವಾದವಿತ್ತರು.

Leave a Comment

error: Content is protected !!