September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನ

ಪದ್ಮುಂಜ ನಿವಾಸಿ ಕುಶಾಲಪ್ಪ ನಲ್ಕೆ ನಿಧನ

ಕಣಿಯೂರು: ಪದ್ಮುಂಜ ನಿವಾಸಿ ಕುಶಾಲಪ್ಪ ನಲ್ಕೆ(46ವ)ರವರು ಸೆ.4ರಂದು ಅನಾರೋಗ್ಯದಿಂದ ನಿಧನರಾಗಿದ್ದು ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪದ್ಮುಂಜ ದರ್ಖಾಸು ಮನೆ ಉಮೇಶ್ ರವರ ದೂರಿನಂತೆ ಉಮೇಶ್ ರವರ ಅಣ್ಣ ಕುಶಾಲಪ್ಪ (46) ರವರು ಸುಮಾರು 02 ವರ್ಷಗಳಿಂದ ಬಿ.ಪಿ ಶುಗರ್, ಅಸ್ತಮ ಖಾಯಿಲೆಯಿಂದ ಬಳಲುತ್ತಿದ್ದು ಇತೀಚೆಗೆ ಕೆಲಸಕ್ಕೆ ಹೋಗದೇ ಕಣಿಯೂರು ಗ್ರಾಮದ ಪದ್ಮುಂಜ ದರ್ಖಾಸು ಮನೆಯಲ್ಲಿ ಇದ್ದು, ಸುಮಾರು 03 ದಿನಗಳಿಂದ ಊಟ ಮಾಡಲು ಆಗದೇ ವಾಂತಿ ಮಾಡಿಕೊಂಡು ಮನೆಯಲ್ಲಿ ಇದ್ದವನು ಸೆ. 04. ರಂದು ಕುಶಾಲಪ್ಪನು ವಿಪರೀತ ಸುಸ್ತು ಅಗಿ ಯಾವುದೇ ಮಾತುಗಳನ್ನು ಆಡದೇ ಇದ್ದವನನ್ನು ಉಮೇಶ್ ಮತ್ತು ಕುಶಾಲಪ್ಪರವರ ಹೆಂಡತಿ ಉಷಾ ಹಾಗೂ ನೆರೆಮನೆಯವರಾದ ಕೊರಗಪ್ಪ ಎಂಬವರು ಅಂಬ್ಯುಲೆನ್ಸ್ ವಾಹನದಲ್ಲಿ ಬೆಳ್ತಂಗಡಿ ಸರಕಾರಿ ಅಸ್ಷತ್ರೆಗೆ ಕರೆದುಕೊಂಡು ಹೋದಾಗ ಪರೀಕ್ಷಿಸಿದ ವೈದ್ಯರು ಕುಶಾಲಪ್ಪನು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ, ಕುಶಾಲಪ್ಪನು ಸರಿಯಾಗಿ ಆಹಾರ ಸೇವನೆ ಮಾಡದೇ ಅಥವಾ ಬೇರೆ ಯಾವುದೋ ಖಾಯಿಲೆಯಿಂದ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಯುಡಿಆರ್ ನಂಬ್ರ: 32/2024 ಕಲಂ: 194 BNSS. ಯಂತೆ ಪ್ರಕರಣ ದಾಖಲಾಗಿರುತ್ತದೆ

Related posts

ಉಪ್ಪಿನಂಗಡಿ ಸ.ಪ.ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗದ ಹಿರಿಯ ವಿದ್ಯಾರ್ಥಿ ಸಂಘದ ರಚನಾ ಸಭೆ

Suddi Udaya

ಧರ್ಮಸ್ಥಳ: ಕಟ್ಟದಬೈಲು ಸಂತಾನ ಪ್ರದಾ ನಾಗಕ್ಷೇತ್ರದಲ್ಲಿ ಚಪ್ಪರದ ಶ್ರಮದಾನ

Suddi Udaya

ಶಿಗ್ಗಾಂವಿ ಉಪ ಚುನಾವಣೆ ಉಸ್ತುವಾರಿಯಾಗಿ ಕೆ. ಹರೀಶ್ ಕುಮಾರ್ ನೇಮಕ

Suddi Udaya

ಶಿಲಾ೯ಲಿನಲ್ಲಿ ತಂದೆಯ ಮೇಲೆ ಪುತ್ರ, ಸೊಸೆಯಿಂದ ಹಲ್ಲೆ ಆರೋಪ: ವೇಣೂರು ಪೊಲೀಸ್ ಠಾಣೆಗೆ ದೂರು

Suddi Udaya

ಚೆಸ್ ಸ್ಪರ್ಧೆ: ಎಲ್.ಸಿ.ಆರ್. ಇಂಡಿಯನ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿ ನಮನ್ ಸಿ ಶೆಟ್ಟಿ ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya

ಶ್ರೀ ಕ್ಷೇತ್ರ ಓಡೀಲು ವತಿಯಿಂದ ಎಕ್ಸೆಲ್ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ರವರಿಗೆ ಗೌರವಾರ್ಪಣೆ

Suddi Udaya
error: Content is protected !!