ಪುದುವೆಟ್ಟು ಗ್ರಾಮದ ನಡ್ಯೇಲು ಎಂಬಲ್ಲಿ ಕಳೆದ ನಾಲ್ಕು ದಿನಗಳಿಂದ ಕಾಡಾನೆಯು ಓಡಾಡುತ್ತಿದ್ದು ಸೆ.5 ರಂದು ರಾತ್ರಿ ಕಾಡಾನೆಯು ಗದ್ದೆಗಳಿಗೆ ಹಾಗೂ ತೋಟಗಳಿಗೆ ನುಗ್ಗಿ ಅಪಾರ ಕೃಷಿ ಹಾನಿ ಮಾಡಿದ ಘಟನೆ ನಡೆದಿದೆ.
ಕಳೆದ ನಾಲ್ಕು ದಿನಗಳಿಂದ ಕಾಡಾನೆಯು ಪರಿಸರದಲ್ಲಿ ಓಡಾಡುತ್ತಿದ್ದು ಅಪಾರ ಕೃಷಿ ಹಾನಿ ಮಾಡಿದೆ. ನಡ್ಯೇಲು ನಾರಾಯಣ ಗೌಡ ರವರ ಗದ್ದೆಗೆ ನುಗ್ಗಿ ಭತ್ತದ ಗಿಡ, ತೆಂಗಿನ ಗಿಡಗಳು ಹಾಗೂ ಸುಂದರ ಗೌಡರವರ ತೋಟಕ್ಕೆ ನುಗ್ಗಿ ಬಾಳೆ ಗಿಡ, ಅಡಿಕೆ ಗಿಡಗಳಿಗೆ ಹಾನಿ ಮಾಡಿದೆ.
ಸ್ಥಳಕ್ಕೆ ಪುದುವೆಟ್ಟು ಗ್ರಾ.ಪಂ ಅಧ್ಯಕ್ಷೆ ಅನಿತಾ, ಅರಣ್ಯ ಅಧಿಕಾರಿ ರವಿಚಂದ್ರನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಅರಣ್ಯಾಧಿಕಾರಿ, ಇಂದು(ಸೆ.6) ರಾತ್ರಿ ನಾಲ್ವರು ಅರಣ್ಯ ಅಧಿಕಾರಿಗಳು, ಹಾಗೂ ಊರಿನ ಗ್ರಾಮಸ್ಥರು ಸೇರಿ ಆನೆಯನ್ನು ಕಾಡಿಗೆ ಬೆನ್ನಟ್ಟುವ ಬಗ್ಗೆ ತಿಳಿಸಿದರು.